ಚುನಾವಣೆ ಕಾಲ: ಮತ್ತಿಬ್ಬರು ರೌಡಿಗಳನ್ನ ಜೈಲಿಗಟ್ಟಿದ ಬೆಂಗಳೂರು ಪೊಲೀಸರು
ಬೆಂಗಳೂರು: ಮತ್ತೆ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿದ್ದ ಇಬ್ಬರು ರೌಡಿಶೀಟರ್‌ಗಳನ್ನು ಗೂಂಡಾ ಕಾಯ್ದೆಯಡಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ವೈಯಾಲಿಕಾವಲ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಶ್ರೀಧರ್ ಬಿ.ಎಂ ಅಲಿಯಾಸ್ ಸೋಡ ಹಾಗೂ ಸಂಪಂಗಿರಾಮನಗರ ಠಾಣಾ ವ್ಯಾಪ್ತಿಯ ರೌಡಿಶೀಟರ್ ಸಂತೋಷ್ನನ್ನು ಬಂಧಿಸಿದ್ದಾರೆ. ಶ್ರೀಧರ್ ವಿರುದ್ಧ ಕೊಲೆ, ದೊಂಬಿ, ಹಲ್ಲೆ ಸೇರಿದಂತೆ 8ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಸಂತೋಷ್ ವಿರುದ್ಧ ಕೊಲೆ ಪ್ರಯತ್ನ, ಸುಲಿಗೆ ಸೇರಿದಂತೆ 16ಕ್ಕೂ ಅಧಿಕ ಪ್ರಕರಣಗಳಿವೆ. ಮತ್ತೆ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿದ್ದ ಕಾರಣ ಇಬ್ಬರ ವಿರುದ್ಧವೂ ಕೇಂದ್ರ ವಿಭಾಗದ ಪೊಲೀಸರು ಗೂಂಡಾ […]
ಬೆಂಗಳೂರು: ಮತ್ತೆ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿದ್ದ ಇಬ್ಬರು ರೌಡಿಶೀಟರ್‌ಗಳನ್ನು ಗೂಂಡಾ ಕಾಯ್ದೆಯಡಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ವೈಯಾಲಿಕಾವಲ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಶ್ರೀಧರ್ ಬಿ.ಎಂ ಅಲಿಯಾಸ್ ಸೋಡ ಹಾಗೂ ಸಂಪಂಗಿರಾಮನಗರ ಠಾಣಾ ವ್ಯಾಪ್ತಿಯ ರೌಡಿಶೀಟರ್ ಸಂತೋಷ್ನನ್ನು ಬಂಧಿಸಿದ್ದಾರೆ.
ಶ್ರೀಧರ್ ವಿರುದ್ಧ ಕೊಲೆ, ದೊಂಬಿ, ಹಲ್ಲೆ ಸೇರಿದಂತೆ 8ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಸಂತೋಷ್ ವಿರುದ್ಧ ಕೊಲೆ ಪ್ರಯತ್ನ, ಸುಲಿಗೆ ಸೇರಿದಂತೆ 16ಕ್ಕೂ ಅಧಿಕ ಪ್ರಕರಣಗಳಿವೆ. ಮತ್ತೆ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿದ್ದ ಕಾರಣ ಇಬ್ಬರ ವಿರುದ್ಧವೂ ಕೇಂದ್ರ ವಿಭಾಗದ ಪೊಲೀಸರು ಗೂಂಡಾ ಕಾಯ್ದೆ ಜಾರಿ ಮಾಡಿದ್ದಾರೆ.
ನಿನ್ನೆಯಷ್ಟೇ ಹಲಸೂರು ಪೊಲೀಸ್ ಠಾಣೆಯಲ್ಲಿ ನಟೋರಿಯಸ್ ರೌಡಿಶೀಟರ್ ಕಾರ್ತಿಕ್ ಅಲಿಯಾಸ್ ರಾಹುಲ್ನನ್ನು ಗೂಂಡಾಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಿದ್ದರು. ಇದೀಗ ಮತ್ತೆ ನಗರದಲ್ಲಿ ಇಬ್ಬರು ರೌಡಿಶೀಟರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹೊಸಕೋಟೆ ವಿಧಾನಸಭೆ ಉಪಚುನಾವಣೆ ಹಿನ್ನೆಲೆ ಈ ಮಧ್ಯೆ, ಹೊಸಕೋಟೆ ವಿಧಾನಸಭೆ ಉಪಚುನಾವಣೆ ಹಿನ್ನೆಲೆ ಪೊಲೀಸರು ರೌಡಿಪರೇಡ್ ನಡೆಸಿದರು. ಹೊಸಕೋಟೆ ಠಾಣೆ ಎದುರು ಸುಮಾರು 80ಕ್ಕೂ ಹೆಚ್ಚು ರೌಡಿಗಳನ್ನ ಕರೆಸಿ ವಾರ್ನಿಂಗ್ ನೀಡಿದ್ದಾರೆ. ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ, ಯಾವುದೇ ಪಕ್ಷಗಳ ಪರವಾಗಿ ಮತ ಹಾಕದಂತೆ ಸಾರ್ವಜನಿಕರನ್ನ ಬೆದರಿಸದಂತೆ ಎಚ್ಚರಿಕೆ ನೀಡಿದ್ದಾರೆ. ಡಿವೈಎಸ್ಪಿ ಸಕ್ರಿ ಹಾಗೂ ಸರ್ಕಲ್ ಇನ್ಸಪೆಕ್ಟರ್ ಶಿವರಾಜ್, ಎಎಸ್ ಪಿ ಸಜೀತ್ ನೇತೃತ್ವದಲ್ಲಿ ರೌಡಿ ಪರೇಡ್ ನಡೆಯಿತು.
Published On - 5:21 pm, Fri, 22 November 19