ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದ ಕಮಲ ತ್ರಿಮೂರ್ತಿಗಳು

ಬೆಂಗಳೂರು: ರಾಜ್ಯದಲ್ಲಿ ಉಪಚುನಾವಣೆ ಸಮರ ಜೋರಾಗಿಯೇ ನಡೆಯುತ್ತಿದೆ. ಆಡಳಿತ ಪಕ್ಷದ ನಾಯಕರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದಿದ್ದಾರೆ. ಸಿದ್ದರಾಮಯ್ಯಗೆ ಟಿಪ್ಪು ಭೂತ ಹಿಡ್ಕೊಂಡಿದೆ. ಮೊನ್ನೆ ಕೆ.ಆರ್.ಪೇಟೆಯಲ್ಲಿ ಹೆಣ್ಣು ಮಗಳು ನಾಮ ಇಡಲು ಹೋದ್ರೆ ಬೇಡ ಅಂದಿದ್ದಾರೆ. ಟಿಪ್ಪು ಭೂತದಿಂದ ಹೊರಗೆ ಬಂದರೆ ಸಿದ್ದರಾಮಯ್ಯ ಆಗ್ತಾರೆ. ಇಲ್ಲದಿದ್ರೆ ‘ಟಿಪ್ಪು ಸಿದ್ದರಾಮಯ್ಯ’ ಆಗುತ್ತಾರೆ ಎಂದು ಕಂದಾಯ ಸಚಿವ ಆರ್​.ಅಶೋಕ್ ವ್ಯಂಗ್ಯವಾಡಿದ್ದಾರೆ. ಸಿದ್ದರಾಮಯ್ಯ ಈಗ ಏಕಾಂಗಿ: ಸಿದ್ದರಾಮಯ್ಯ ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದಾರೆ. ಅವರ ಹಿಂದೆ ಯಾವ ನಾಯಕರೂ ಇಲ್ಲ. […]

ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದ ಕಮಲ ತ್ರಿಮೂರ್ತಿಗಳು
Follow us
ಸಾಧು ಶ್ರೀನಾಥ್​
|

Updated on:Nov 22, 2019 | 7:26 PM

ಬೆಂಗಳೂರು: ರಾಜ್ಯದಲ್ಲಿ ಉಪಚುನಾವಣೆ ಸಮರ ಜೋರಾಗಿಯೇ ನಡೆಯುತ್ತಿದೆ. ಆಡಳಿತ ಪಕ್ಷದ ನಾಯಕರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದಿದ್ದಾರೆ. ಸಿದ್ದರಾಮಯ್ಯಗೆ ಟಿಪ್ಪು ಭೂತ ಹಿಡ್ಕೊಂಡಿದೆ. ಮೊನ್ನೆ ಕೆ.ಆರ್.ಪೇಟೆಯಲ್ಲಿ ಹೆಣ್ಣು ಮಗಳು ನಾಮ ಇಡಲು ಹೋದ್ರೆ ಬೇಡ ಅಂದಿದ್ದಾರೆ. ಟಿಪ್ಪು ಭೂತದಿಂದ ಹೊರಗೆ ಬಂದರೆ ಸಿದ್ದರಾಮಯ್ಯ ಆಗ್ತಾರೆ. ಇಲ್ಲದಿದ್ರೆ ‘ಟಿಪ್ಪು ಸಿದ್ದರಾಮಯ್ಯ’ ಆಗುತ್ತಾರೆ ಎಂದು ಕಂದಾಯ ಸಚಿವ ಆರ್​.ಅಶೋಕ್ ವ್ಯಂಗ್ಯವಾಡಿದ್ದಾರೆ.

ಸಿದ್ದರಾಮಯ್ಯ ಈಗ ಏಕಾಂಗಿ: ಸಿದ್ದರಾಮಯ್ಯ ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದಾರೆ. ಅವರ ಹಿಂದೆ ಯಾವ ನಾಯಕರೂ ಇಲ್ಲ. ಈಗ ಸಿದ್ದರಾಮಯ್ಯ ಏಕಾಂಗಿ. ಹೀಗಾಗಿ ಹತಾಶರಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವಾಗ್ದಾಳಿ ನಡೆಸಿದ್ದಾರೆ. ಗೊಬ್ಬರ ಸಚಿವನೆಂದು ಸಿದ್ದರಾಮಯ್ಯ ನನ್ನನ್ನು ಅಪಮಾನಿಸಿದ್ದಾರೆ. ರೈತರ ಜೀವವಾದ ಗೊಬ್ಬರಕ್ಕೆ ಅಪಮಾನಿಸಿದ್ದಾರೆ. 80 ಸಾವಿರ ಕೋಟಿಯಷ್ಟು ಹಣ ಗೊಬ್ಬರ ಇಲಾಖೆ ನಿರ್ವಹಣೆ ಮಾಡುತ್ತೆ. ಸಿದ್ದರಾಮಯ್ಯನವರ ಅರ್ಧ ಬಜೆಟ್​​ನಷ್ಟು ನನ್ನ ಇಲಾಖೆ ನೀಡುತ್ತೆ ಎಂದು ಕಿಡಿ ಕಾರಿದ್ದಾರೆ.

ಸಿದ್ದರಾಮಯ್ಯ ಜತೆ ಒಬ್ಬನೇ ಒಬ್ಬ ಟಾಪ್​ ಲೀಡರ್​ ಇದ್ದಾರಾ? ಜಿ.ಪರಮೇಶ್ವರ್​ ಎಲ್ಲಿ? ಹರಿಪ್ರಸಾದ್​ ಎಲ್ಲಿ? ಮುನಿಯಪ್ಪ ಎಲ್ಲಿ? ಮಲ್ಲಿಕಾರ್ಜುನ ಖರ್ಗೆ ಎಲ್ಲಿ? ಇವರು ಯಾರೂ ಕೂಡ ಸಿದ್ದರಾಮಯ್ಯ ಜೊತೆಗಿಲ್ಲ. ಏಕಾಂಗಿ ಸಿದ್ದರಾಮಯ್ಯರನ್ನ ಅವರದೇ ಕ್ಷೇತ್ರದಲ್ಲಿ ಸೋಲಿಸಿಬಿಟ್ಟಿದ್ದೇವೆ. ಸಿದ್ದರಾಮಯ್ಯ ಅವರ ಬಾಯಿ ಸರಿಯಿಲ್ಲವೆಂದು ಭಯವಷ್ಟೇ. ಅವರ ರಾಜಕೀಯಕ್ಕೆ ನಾವು ಹೆದರುವುದಿಲ್ಲ. ಆದ್ರೆ ಬಾಯಿಗೆ ಬಂದದ್ದು ಮಾತನಾಡುವುದನ್ನು ಸಿದ್ದರಾಮಯ್ಯ ಬಿಡಲಿ ಎಂದರು.

ಸಿದ್ದು ವಿರುದ್ಧ ಸ್ವಪಕ್ಷದವರೇ ಸಮರ: ಸಿದ್ದರಾಮಯ್ಯ ಅವರನ್ನು ಏಕಮೇವ ನಾಯಕ ಮಾಡಲು ಸಾಧ್ಯವಿಲ್ಲ ಅಂತಾ ಅವರ ಪಕ್ಷದವರು ತೀರ್ಮಾನಿಸಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್‌ನವರೇ ಸಮರ ಸಾರಿದ್ದಾರೆ. 15 ಕ್ಷೇತ್ರದ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಒಂದು ಕ್ಷೇತ್ರವನ್ನೂ ಗೆಲ್ಲಲ್ಲ ಎಂದು ಡಿಸಿಎಂ ಸಿ.ಎನ್.ಅಶ್ವತ್ಥ್​ ನಾರಾಯಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈತ್ರಿ ಸರ್ಕಾರದ ಬಳಿ ಅಧಿಕಾರ, ಹಣ ಎಲ್ಲವೂ ಇತ್ತು. ಆದ್ರೆ ಅಭಿವೃದ್ಧಿ ಕೆಲಸಗಳು ಆಗಲಿಲ್ಲ. ಹೀಗಾಗಿ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರೇ ಆಪರೇಷನ್ ಆಗಿ ಬೇರೆ ಪಕ್ಷದಿಂದ ಬಂದಿದ್ದಾರೆ. ಹಿಂಸೆಕೊಟ್ಟು ಶಾಸಕರನ್ನು ಹೊರಗೆ ಹೋಗುವಂತೆ ಮಾಡಿದ್ದಾರೆ. ಅವರು 5 ವರ್ಷ ನಿದ್ದೆ ಮಾಡೋದು ಬಿಟ್ಟು ಏನು ಮಾಡಿಲ್ಲ. ಈಗ ಸಿದ್ದರಾಮಯ್ಯ ವಿರೋಧ ಪಕ್ಷದಲ್ಲಿ ಆರಾಮಾಗಿ ಇರಲಿ. ನಾವು ಸುಭದ್ರವಾಗಿ ಸರ್ಕಾರ ನಡೆಸುತ್ತೇವೆ ಎಂದರು.

Published On - 7:21 pm, Fri, 22 November 19

ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್