ಬೆಂಗಳೂರಿನಲ್ಲೇ ನೆಲೆಸಿದ್ದರಂತೆ ಬಾಂಗ್ಲಾ ಮೂಲದ ಉಗ್ರರು!
ಬೆಂಗಳೂರು ಗ್ರಾಮಾಂತರ: ನಗರದಲ್ಲೇ ಬಾಂಗ್ಲಾ ಮೂಲದ ಉಗ್ರ ಸಂಘಟನೆ ಸದಸ್ಯರು ತಂಗಿದ್ದರು ಎಂಬ ಸ್ಫೋಟಕ ಮಾಹಿತಿ ಇದೀಗ ಬೆಳಕಿಗೆ ಬಂದಿದೆ. ಮೇಘಾಲಯದಲ್ಲಿ ನಿಷೇಧಿತ ಬಾಂಗ್ಲಾ ಮೂಲದ ಅನ್ಸರುಲ್ಲಾ ಬಾಂಗ್ಲಾ ಟೀಮ್ನ ಫರ್ಹಾನ್ನನ್ನು ಕೋಲ್ಕತ್ತಾ ಎನ್‌ಐಎ ಟೀಮ್ ಬಂಧಿಸಿತ್ತು. ವಿಚಾರಣೆ ವೇಳೆ ಬೆಂಗಳೂರಿನಲ್ಲಿ ವಾಸವಿದ್ದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ. ಹೀಗಾಗಿ ಸೋಲದೇವನಹಳ್ಳಿಯ ಪಿಜಿಯೊಂದರಲ್ಲಿ ರಾಷ್ಟ್ರೀಯ ತನಿಖಾ ದಳದವರು ತಪಾಸಣೆ ನಡೆಸಿದ್ದಾರೆ. ವಿದ್ಯಾರ್ಥಿ ಸೋಗಿನಲ್ಲಿ ಸೋಲದೇವನಹಳ್ಳಿಯ ಪಿಜಿಯೊಂದರಲ್ಲಿ ವಾಸವಿದ್ದೆವು ಎಂದು ಎಂಬ ಮಾಹಿತಿಯನ್ನು ಎನ್‌ಐಎ ಅಧಿಕಾರಿಗಳಿಗೆ ಫರ್ಹಾನ್ ಹೇಳಿದ್ದಾನೆ. […]
ಬೆಂಗಳೂರು ಗ್ರಾಮಾಂತರ: ನಗರದಲ್ಲೇ ಬಾಂಗ್ಲಾ ಮೂಲದ ಉಗ್ರ ಸಂಘಟನೆ ಸದಸ್ಯರು ತಂಗಿದ್ದರು ಎಂಬ ಸ್ಫೋಟಕ ಮಾಹಿತಿ ಇದೀಗ ಬೆಳಕಿಗೆ ಬಂದಿದೆ.
ಮೇಘಾಲಯದಲ್ಲಿ ನಿಷೇಧಿತ ಬಾಂಗ್ಲಾ ಮೂಲದ ಅನ್ಸರುಲ್ಲಾ ಬಾಂಗ್ಲಾ ಟೀಮ್ನ ಫರ್ಹಾನ್ನನ್ನು ಕೋಲ್ಕತ್ತಾ ಎನ್‌ಐಎ ಟೀಮ್ ಬಂಧಿಸಿತ್ತು. ವಿಚಾರಣೆ ವೇಳೆ ಬೆಂಗಳೂರಿನಲ್ಲಿ ವಾಸವಿದ್ದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ. ಹೀಗಾಗಿ ಸೋಲದೇವನಹಳ್ಳಿಯ ಪಿಜಿಯೊಂದರಲ್ಲಿ ರಾಷ್ಟ್ರೀಯ ತನಿಖಾ ದಳದವರು ತಪಾಸಣೆ ನಡೆಸಿದ್ದಾರೆ.
ವಿದ್ಯಾರ್ಥಿ ಸೋಗಿನಲ್ಲಿ ಸೋಲದೇವನಹಳ್ಳಿಯ ಪಿಜಿಯೊಂದರಲ್ಲಿ ವಾಸವಿದ್ದೆವು ಎಂದು ಎಂಬ ಮಾಹಿತಿಯನ್ನು ಎನ್‌ಐಎ ಅಧಿಕಾರಿಗಳಿಗೆ ಫರ್ಹಾನ್ ಹೇಳಿದ್ದಾನೆ. ಹಾಗಾಗಿ ಆರೋಪಿಗಳು ಬೆಂಗಳೂರಿನಲ್ಲಿ ತಂಗಿದ್ದ ಪಿ.ಜಿಯಲ್ಲಿ ಎನ್‌ಐಎ ಟೀಂ ತಪಾಸಣೆ ನಡೆಸಿದ್ದಾರೆ. ಆದ್ರೆ ಫರ್ಹಾನ್ ಬಂಧನದ ಬೆನ್ನಲ್ಲೇ ಮತ್ತೊಬ್ಬ ಉಗ್ರ ನಾಪತ್ತೆಯಾಗಿದ್ದಾನೆ. ಎನ್‌ಐಎ ಅಧಿಕಾರಿಗಳು ಉಗ್ರರ ಅಡಗುತಾಣಗಳ ಬಗ್ಗೆ ತೀವ್ರ ತನಿಖೆ ನಡೆಸುತ್ತಿದ್ದಾರೆ.
Published On - 4:32 pm, Fri, 22 November 19