AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾರಕಿಹೊಳಿ ಕುಟುಂಬದಿಂದ ಮತ್ತೊಂದು ಕುಡಿ ಪ್ರಚಾರದಲ್ಲಿ ಸಕ್ರಿಯ! ಯಾರ ಪರ?

ಬೆಳಗಾವಿ: ಬೈ ಎಲೆಕ್ಷನ್​ ನೆಪದಲ್ಲಿ ಜಿಲ್ಲೆಯ ರಾಜಕೀಯ ರಂಗೇರಿದೆ. ಗೋಕಾಕ್ ರಣಕಣದಲ್ಲಿ ಮತ್ತೊಬ್ಬ ಜಾರಕಿಹೊಳಿ ಸಹೋದರ ಎಂಟ್ರಿ ಕೊಟ್ಟಿದ್ದಾರೆ. ಇಷ್ಟು ದಿನ ಸಕ್ರಿಯ ರಾಜಕಾರಣದಿಂದ ದೂರವಿದ್ದ ಭೀಮಶಿ ಲಕ್ಷ್ಮಣರಾವ್ ಜಾರಕಿಹೊಳಿ ಇಂದು ಚುನಾವಣಾ ಪ್ರಚಾರದಲ್ಲಿ ಕಾಣಿಸಿಕೊಂಡಿದ್ದಾರೆ. ರಮೇಶ್ ಬೆಂಬಲಕ್ಕೆ ನಿಂತ ಭೀಮಶಿ, ಲಖನ್ ಬಗ್ಗೆ ಹೇಳಿದ್ದೇನು? ಗೋಕಾಕ್​​ನಲ್ಲಿ ಇಂದು ರಮೇಶ್ ಮನೆಗೆ ಬಂದ ಭೀಮಶಿ, ರಮೇಶ್ ಜಾರಕಿಹೊಳಿ ಪರ ಪ್ರಚಾರ ಕೈಗೊಳ್ಳುತ್ತಿರುವುದಾಗಿ ಪ್ರಕಟಿಸಿದರು. ನನ್ನ ವೋಟ್ ಬ್ಯಾಂಕ್ ರಮೇಶ್​ಗೆ ಸಹಾಯಕವಾಗುತ್ತೆ. ಸತೀಶ್ ತಂತ್ರ ರೂಪಿಸುತ್ತಾರೆ. ಅದಕ್ಕೆ ಪ್ರತಿಯಾಗಿ […]

ಜಾರಕಿಹೊಳಿ ಕುಟುಂಬದಿಂದ ಮತ್ತೊಂದು ಕುಡಿ ಪ್ರಚಾರದಲ್ಲಿ ಸಕ್ರಿಯ! ಯಾರ ಪರ?
Follow us
ಸಾಧು ಶ್ರೀನಾಥ್​
|

Updated on:Nov 22, 2019 | 3:00 PM

ಬೆಳಗಾವಿ: ಬೈ ಎಲೆಕ್ಷನ್​ ನೆಪದಲ್ಲಿ ಜಿಲ್ಲೆಯ ರಾಜಕೀಯ ರಂಗೇರಿದೆ. ಗೋಕಾಕ್ ರಣಕಣದಲ್ಲಿ ಮತ್ತೊಬ್ಬ ಜಾರಕಿಹೊಳಿ ಸಹೋದರ ಎಂಟ್ರಿ ಕೊಟ್ಟಿದ್ದಾರೆ. ಇಷ್ಟು ದಿನ ಸಕ್ರಿಯ ರಾಜಕಾರಣದಿಂದ ದೂರವಿದ್ದ ಭೀಮಶಿ ಲಕ್ಷ್ಮಣರಾವ್ ಜಾರಕಿಹೊಳಿ ಇಂದು ಚುನಾವಣಾ ಪ್ರಚಾರದಲ್ಲಿ ಕಾಣಿಸಿಕೊಂಡಿದ್ದಾರೆ.

ರಮೇಶ್ ಬೆಂಬಲಕ್ಕೆ ನಿಂತ ಭೀಮಶಿ, ಲಖನ್ ಬಗ್ಗೆ ಹೇಳಿದ್ದೇನು? ಗೋಕಾಕ್​​ನಲ್ಲಿ ಇಂದು ರಮೇಶ್ ಮನೆಗೆ ಬಂದ ಭೀಮಶಿ, ರಮೇಶ್ ಜಾರಕಿಹೊಳಿ ಪರ ಪ್ರಚಾರ ಕೈಗೊಳ್ಳುತ್ತಿರುವುದಾಗಿ ಪ್ರಕಟಿಸಿದರು. ನನ್ನ ವೋಟ್ ಬ್ಯಾಂಕ್ ರಮೇಶ್​ಗೆ ಸಹಾಯಕವಾಗುತ್ತೆ. ಸತೀಶ್ ತಂತ್ರ ರೂಪಿಸುತ್ತಾರೆ. ಅದಕ್ಕೆ ಪ್ರತಿಯಾಗಿ ನಾವೂ ಸಿದ್ಧರಾಗಬೇಕಿದೆ ಎಂದು ಟಿವಿ 9 ಜೊತೆ ಮಾತನಾಡುತ್ತಾ ತಿಳಿಸಿದರು.

ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಲಖನ್​ಗೆ ಇನ್ನೂ ವಯಸ್ಸಿದೆ. ಇನ್ನೂ ಕ್ಷೇತ್ರಗಳಿವೆ. ಇವರೆಲ್ಲರ ಕಚ್ಚಾಟ ನೋಡಿ ನಾನು ಬಂದಿದ್ದೇನೆ ಅಂತಾ ಭೀಮಶಿ ಜಾರಕಿಹೊಳಿ ಹೇಳಿದರು.

ಸಹೋದರರ ಹಣಾಹಣಿಗೆ ಸಾಕ್ಷಿಯಾಗಲಿದೆ ಕ್ಷೇತ್ರ ಬಾಲಚಂದ್ರ ಜಾರಕಿಹೊಳಿ ಈಗಾಗಲೇ ರಮೇಶ್​ಗೆ ಬೆಂಬಲ ಘೋಷಿಸಿದ್ದಾರೆ. ಅಲ್ಲಿಗೆ ಬಾಲಚಂದ್ರ ಮತ್ತು ಭೀಮಶಿ ಇಬ್ಬರೂ ರಮೇಶ್ ಜಾರಕಿಹೊಳಿ ಬಣದಲ್ಲಿದ್ರೆ.. ಸತೀಶ್ ಜಾರಕಿಹೊಳಿ ಮತ್ತು ಲಖನ್ ಜಾರಕಿಹೊಳಿ ಒಂದು ಬಣ ಸೇರಿದ್ದಾರೆ.

ರಮೇಶ್ ವಿರುದ್ಧ ಭೀಮಶಿ ಸ್ಪರ್ಧಿಸಿದ್ದರು! ಕುತೂಹಲದ ಸಂಗತಿಯೆಂದ್ರೆ 2008ರಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಭೀಮಶಿ ಸ್ಪರ್ಧಿಸಿದ್ದರು. ಆಗವರು ಬಿಜೆಪಿ ಅಭ್ಯರ್ಥಿಯಾಗಿದ್ದರು. ‘ಆಗಿನ ಚುನಾವಣೆ ಕಾಂಗ್ರೆಸ್​ಗೆ ಪ್ಲಸ್ ಆಗಿತ್ತು. ಈ ಬಾರಿ ಬಿಜೆಪಿಗೆ ಪ್ಲಸ್ ಆಗುತ್ತೆ’ ಅಂತಾ ಭೀಮಶಿ ಭವಿಷ್ಯ ನುಡಿದಿದ್ದಾರೆ.

Published On - 2:06 pm, Fri, 22 November 19