ರಫೇಲ್‌ ವಿಮಾನ ಹಾರಿಸಿಕೊಂಡು ಬರುತ್ತಿದ್ದಾನೆ ನಮ್ಮ ಹೆಮ್ಮೆಯ ಕನ್ನಡದ ಯೋಧ!

| Updated By:

Updated on: Jul 30, 2020 | 9:16 PM

ವಿಜಯಪುರ: ವಿಜಯಪುರದ ಸೈನಿಕ ಶಾಲೆಯ ಪಾಲಿಗೆ ಇವತ್ತು ಭಾರೀ ಹೆಮ್ಮೆಯ ಹಾಗೂ ಅವಿಸ್ಮರಣೀಯ ದಿನ. ಯಾಕಂದ್ರೆ ಇದೇ ವಿಜಯಪುರ ಸೈನಿಕ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಯೊಬ್ಬ ಈಗ ಫ್ರಾನ್ಸ್‌ನಿಂದ ರಫೇಲ್‌ ಯುದ್ಧ ವಿಮಾನವನ್ನ ಭಾರತಕ್ಕೆ ಹಾರಿಸಿಕೊಂಡು ಬರುತ್ತಿದ್ದಾನೆ. ಹೌದು ಭಾರತದ ಸೇನೆಗೆ ವಿಜಯಪುರದ ಸೈನಿಕ ಶಾಲೆಯ ಕೊಡುಗೆ ಅಪಾರ. ಇಲ್ಲಿಂದ ಕಲಿತು ಹೋದ ಅದೆಷ್ಟೋ ವಿದ್ಯಾರ್ಥಿಗಳು ಈಗ ಸೇನೆ ಸೇರಿ ಭಾರತದ ಸೇವೆ ಮಾಡುತ್ತಿದ್ದಾರೆ. ಇವರಲ್ಲಿ 35 ವರ್ಷದ ವಿಂಗ್‌ ಕಮಾಂಡರ್‌ ಅರುಣ್‌ ಕುಮಾರ್‌ ಕೂಡಾ ಒಬ್ಬರು. ಈ […]

ರಫೇಲ್‌ ವಿಮಾನ ಹಾರಿಸಿಕೊಂಡು ಬರುತ್ತಿದ್ದಾನೆ ನಮ್ಮ ಹೆಮ್ಮೆಯ ಕನ್ನಡದ ಯೋಧ!
Follow us on

ವಿಜಯಪುರ: ವಿಜಯಪುರದ ಸೈನಿಕ ಶಾಲೆಯ ಪಾಲಿಗೆ ಇವತ್ತು ಭಾರೀ ಹೆಮ್ಮೆಯ ಹಾಗೂ ಅವಿಸ್ಮರಣೀಯ ದಿನ. ಯಾಕಂದ್ರೆ ಇದೇ ವಿಜಯಪುರ ಸೈನಿಕ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಯೊಬ್ಬ ಈಗ ಫ್ರಾನ್ಸ್‌ನಿಂದ ರಫೇಲ್‌ ಯುದ್ಧ ವಿಮಾನವನ್ನ ಭಾರತಕ್ಕೆ ಹಾರಿಸಿಕೊಂಡು ಬರುತ್ತಿದ್ದಾನೆ.

ಹೌದು ಭಾರತದ ಸೇನೆಗೆ ವಿಜಯಪುರದ ಸೈನಿಕ ಶಾಲೆಯ ಕೊಡುಗೆ ಅಪಾರ. ಇಲ್ಲಿಂದ ಕಲಿತು ಹೋದ ಅದೆಷ್ಟೋ ವಿದ್ಯಾರ್ಥಿಗಳು ಈಗ ಸೇನೆ ಸೇರಿ ಭಾರತದ ಸೇವೆ ಮಾಡುತ್ತಿದ್ದಾರೆ. ಇವರಲ್ಲಿ 35 ವರ್ಷದ ವಿಂಗ್‌ ಕಮಾಂಡರ್‌ ಅರುಣ್‌ ಕುಮಾರ್‌ ಕೂಡಾ ಒಬ್ಬರು. ಈ ಅರುಣ್‌ ಕುಮಾರ್‌ ಈಗ ಫ್ರಾನ್ಸ್‌ನಿಂದ ಭಾರತಕ್ಕೆ ಬರುತ್ತಿರುವ ರಫೇಲ್‌ ಯುದ್ಧ ವಿಮಾನಗಳನ್ನು ಹಾರಿಸಿಕೊಂಡು ಬರುತ್ತಿರುವವರಲ್ಲಿ ಒಬ್ಬರು.

ಅರುಣ್‌ ಕುಮಾರ್‌ 1995ರಿಂದ 2001ರ ವರೆಗೆ ವಿಜಯಪುರದ ಸೈನಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಸೈನಿಕ ಶಾಲೆಯಲ್ಲಿನ ಇವರ ನೋಂದಣಿ ಸಂಖ್ಯೆ 2877.

ಮುಂದೆ 2002ರಲ್ಲಿ ನ್ಯಾಷನಲ್ ಡಿಫೆನ್ಸ್ ಆರ್ಮಿಗೆ ಸೇರ್ಪಡೆಯಾಗಿ ಈಗ ದೇಶ ಸೇವೆ ಸಲ್ಲಿಸುತ್ತಿದ್ದಾರೆ. ಈಗ ಫ್ರಾನ್‌ನಿಂದ ರಫೇಲ್‌ ಯುದ್ಧ ವಿಮಾನಗಳನ್ನ ಹಾರಿಸಿಕೊಂಡು ಬರುತ್ತಿದ್ದಾರೆ. ಅಂದ ಹಾಗೆ ಇವರ ತಂದೆ ಎನ್ ಪ್ರಸಾದ್‌ ಸಹ ಏರಫೋರ್ಸ್ ನಲ್ಲಿ ವಾರಂಟ್ ಆಫೀಸರ್ ಆಗಿ ಸೇವೆ ಸಲ್ಲಿಸಿದ್ದಾರೆ.

Published On - 1:28 pm, Wed, 29 July 20