ದೆಹಲಿ: ಭಾರತದಾದ್ಯಂತ ಕೊರೊನಾ ಎರಡನೇ ಅಲೆ ಭೀತಿ ವ್ಯಾಪಕವಾಗಿ ಹಬ್ಬುತ್ತಿದ್ದು, ಕಠಿಣ ನಿಯಮಾವಳಿಗಳ ಮೂಲಕ ದೇಶದಲ್ಲಿ ಸೋಂಕು ನಿಯಂತ್ರಣಕ್ಕೆ ಪಣ ತೊಡಲಾಗಿದ್ದು, ಇದೀಗ ಕೊರೊನಾ ನಿಯಮ ಉಲ್ಲಂಘಿಸುವವರಿಗೆ ಒಂದು ಅಥವಾ ಅದಕ್ಕಿಂತ ಹೆಚ್ಚು ವರ್ಷ ಜೈಲು ಶಿಕ್ಷೆ ವಿಧಿಸಲು ತೀರ್ಮಾನಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಸೆಕ್ಷನ್ 51ರಿಂದ 60ರಡಿ ಶಿಕ್ಷೆ ವಿಧಿಸಬಹುದಾಗಿದ್ದು, ದೊಡ್ಡ ಮೊತ್ತದ ದಂಡ ಹಾಗೂ ಜೈಲು ಶಿಕ್ಷೆಗೆ ಒಳಪಡಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.
ಸೆಕ್ಷನ್ 51: ಗೈಡ್ಲೈನ್ಸ್ ಜಾರಿಗೊಳಿಸುವವರ ಕರ್ತವ್ಯಕ್ಕೆ ಅಡ್ಡಿಪಡಿಸುವವರಿಗೆ ಒಂದು ವರ್ಷ ಜೈಲು ಅಥವಾ ದಂಡದ ಜೊತೆಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಬಹುದು
ಸೆಕ್ಷನ್ 52: ಪರಿಹಾರ ಪಡೆಯುವ ಸಲುವಾಗಿ ತಪ್ಪು ಮಾಹಿತಿ ನೀಡಿದರೆ 2 ವರ್ಷ ಜೈಲು ಅಥವಾ ದಂಡಸಹಿತ ಜೈಲು ಶಿಕ್ಷೆ
ಸೆಕ್ಷನ್ 53: ಪರಿಹಾರ ಸಾಮಗ್ರಿ ಅಥವಾ ಹಣ ದುರುಪಯೋಗವಾದರೆ 2 ವರ್ಷ ಜೈಲು ಅಥವಾ ದಂಡ ಸಹಿತ ಜೈಲು ಶಿಕ್ಷೆ
ಸೆಕ್ಷನ್ 54: ಸುಳ್ಳು, ತಪ್ಪು ಮಾಹಿತಿ ಮೂಲಕ ಆತಂಕ ಸೃಷ್ಟಿಸಿದರೆ 1 ವರ್ಷ ಜೈಲು ಅಥವಾ ದಂಡ ಸಹಿತ ಜೈಲು
ಸೆಕ್ಷನ್ 55: ಸರ್ಕಾರಿ ಅಧಿಕಾರಿ ತಪ್ಪೆಸಗಿದರೆ, ಇಲಾಖೆಯ ಮುಖ್ಯಸ್ಥನಿಗೆ ಅರಿವಿದ್ದು ತಪ್ಪು ಮಾಡಿರುವುದು ಸಾಬೀತಾದರೆ ಆ ಅಧಿಕಾರಿಯ ವಿರುದ್ಧವೂ ಕ್ರಮ
ಸೆಕ್ಷನ್ 56: ಸರ್ಕಾರಿ ಅಧಿಕಾರಿ ಕರ್ತವ್ಯ ಲೋಪ ಎಸಗಿದರೆ, ಕರ್ತವ್ಯ ನಿರ್ಲಕ್ಷ್ಯ ತೋರಿದರೆ ಅಥವಾ ಮೇಲಧಿಕಾರಿ ಅನುಮತಿ ಇಲ್ಲದೇ ಗೈರಾದರೆ 1 ವರ್ಷ ಜೈಲು ಅಥವಾ ದಂಡ ಸಹಿತ ಜೈಲು ಶಿಕ್ಷೆ
ಸೆಕ್ಷನ್ 57: ವಿಪತ್ತು ನಿರ್ವಹಣೆ ಕಾಯ್ದೆ 65ರ ಪ್ರಕಾರ ಕೊರೊನಾ ನಿಯಂತ್ರಣಕ್ಕೆ ಬೇಕಾದ ಸಂಪನ್ಮೂಲ, ಸ್ಥಳ, ವಾಹನ ಒದಗಿಸದ, ಸೌಲಭ್ಯ ಒದಗಿಸಲು ನಿರಾಕರಿಸುವ ಯಾವುದೇ ವ್ಯಕ್ತಿಗೆ 1 ವರ್ಷ ಜೈಲು ಅಥವಾ ದಂಡ ಸಹಿತ ಜೈಲು
ಸೆಕ್ಷನ್ 58: ಕೊರೊನಾ ನಿರ್ವಹಣೆ ವೇಳೆ ಕಂಪನಿ ಅಥವಾ ಕಂಪನಿಯಲ್ಲಿನ ಮುಖ್ಯಸ್ಥ ಅಡ್ಡಿಪಡಿಸಿದರೆ ಆ ಕಂಪೆನಿಯ ಸೇವೆ ಸ್ಥಗಿತ ಹಾಗೂ ಉಸ್ತುವಾರಿ ವ್ಯಕ್ತಿ ವಿರುದ್ಧ ಕಾನೂನು ಕ್ರಮ ಸೇರಿದಂತೆ ಕಠಿಣ ಕ್ರಮಗಳನ್ನು ಜರುಗಿಸಲು ನಿರ್ಧರಿಸಲಾಗಿದೆ.
ಇದನ್ನೂ ಓದಿ:
IPL 2021: ಐಪಿಎಲ್ ಆರಂಭಕ್ಕೂ ಮುನ್ನ ಕೊರೊನಾಘಾತ.. ವಾಂಖೆಡೆ ಸ್ಟೇಡಿಯಂನ 8 ಸಿಬ್ಬಂದಿಗಳಿಗೆ ಕೊರೊನಾ ಧೃಡ!
ಜೂನ್ ತನಕವೂ ಕೊರೊನಾ ಎಚ್ಚರಿಕೆ ಅಗತ್ಯವೆಂದು ತಾಂತ್ರಿಕ ಸಲಹಾ ಸಮಿತಿ ಹೇಳಿದೆ; ಎಚ್ಚರ ಎಚ್ಚರಾ- ಆರೋಗ್ಯ ಸಚಿವ ಸುಧಾಕರ್