ಕಣ್ಣೀರು ಹಾಕಬೇಡಿ.. ಈರುಳ್ಳಿ ದೋಸೆ ಜಸ್ಟ್ 5 ರೂಪಾಯಿ ಹೆಚ್ಚಳವಾಗಿದೆ!
ಬೆಂಗಳೂರು: ಈರುಳ್ಳಿ ದೋಸೆ ಪ್ರಿಯರಿಗೆ ಈಗ ಮತ್ತೊಂದು ಬಿಗ್ ಶಾಕ್. ಈರುಳ್ಳಿ ದರ ಹೆಚ್ಚಾಗಿ ಈಗಾಗಲೇ ದೊಡ್ಡ ಶಾಕ್ ಆಗಿದೆ. ಮನೆಯಲ್ಲಿ ಮಾಡುವ ಅಡುಗೆಯಲ್ಲಿ ಈರುಳ್ಳಿ ಬಳಸುವುದೇ ಬಿಟ್ಟಾಗಿದೆ. ಆಚೆ ಹೋಟಲ್ಗಳಲ್ಲಿ ತಿನ್ನೋಣ ಆಂದ್ರೆ ಅದಕ್ಕೂ ಈಗ ನಿರಾಸೆಯಾಗಿದೆ. ದೋಸೆ ಪ್ರೇಮಿಗಳು ಡಬಲ್ ರೋಸ್ಟ್: ಮಸಾಲಾ ದೋಸೆ, ಸೆಟ್ ದೋಸೆ ಒಕೆ ಆದ್ರೆ ಆನಿಯನ್ ದೋಸೆ ನಾಟ್ ಓಕೆ ಅಂತಿದ್ದಾರೆ ಹೋಟೆಲ್ ಮಾಲೀಕರು. ಈರುಳ್ಳಿ ದರ ಹೆಚ್ಚಾಗಿದ್ದೇ ಈಗ ಹೋಟೆಲ್ಗಳಲ್ಲಿಯೂ ಈರುಳ್ಳಿ ದೋಸೆ ಸಿಗುತ್ತಿಲ್ಲ. ಈರುಳ್ಳಿ ದೋಸೆಗೆ […]
ಬೆಂಗಳೂರು: ಈರುಳ್ಳಿ ದೋಸೆ ಪ್ರಿಯರಿಗೆ ಈಗ ಮತ್ತೊಂದು ಬಿಗ್ ಶಾಕ್. ಈರುಳ್ಳಿ ದರ ಹೆಚ್ಚಾಗಿ ಈಗಾಗಲೇ ದೊಡ್ಡ ಶಾಕ್ ಆಗಿದೆ. ಮನೆಯಲ್ಲಿ ಮಾಡುವ ಅಡುಗೆಯಲ್ಲಿ ಈರುಳ್ಳಿ ಬಳಸುವುದೇ ಬಿಟ್ಟಾಗಿದೆ. ಆಚೆ ಹೋಟಲ್ಗಳಲ್ಲಿ ತಿನ್ನೋಣ ಆಂದ್ರೆ ಅದಕ್ಕೂ ಈಗ ನಿರಾಸೆಯಾಗಿದೆ.
ದೋಸೆ ಪ್ರೇಮಿಗಳು ಡಬಲ್ ರೋಸ್ಟ್: ಮಸಾಲಾ ದೋಸೆ, ಸೆಟ್ ದೋಸೆ ಒಕೆ ಆದ್ರೆ ಆನಿಯನ್ ದೋಸೆ ನಾಟ್ ಓಕೆ ಅಂತಿದ್ದಾರೆ ಹೋಟೆಲ್ ಮಾಲೀಕರು. ಈರುಳ್ಳಿ ದರ ಹೆಚ್ಚಾಗಿದ್ದೇ ಈಗ ಹೋಟೆಲ್ಗಳಲ್ಲಿಯೂ ಈರುಳ್ಳಿ ದೋಸೆ ಸಿಗುತ್ತಿಲ್ಲ. ಈರುಳ್ಳಿ ದೋಸೆಗೆ ಬ್ರೇಕ್ ಬಿದ್ದಿದೆ.
ಕೆ.ಜಿ ಈರುಳ್ಳಿ ₹ 120ಕ್ಕೆ ಏರಿದ ಹಿನ್ನೆಲೆ ಹೋಟೆಲ್ಗಳಲ್ಲಿ ಇರುಳ್ಳಿ ಬಳಕೆ ಕಡಿಮೆ ಮಾಡಲಾಗುತ್ತಿದೆ. ಇನ್ನು ಈರುಳ್ಳಿ ದೋಸೆಗಾಗಿಯೇ ಫೇಮಸ್ ಆಗಿರುವ ಕೆಲ ಹೋಟೆಲ್ಗಳಲ್ಲಿ ದೋಸೆ ಬೆಲೆ ಏರಿಕೆ ಮಾಡುತ್ತಿದ್ದಾರೆ. ಪ್ರತೀ ದೋಸೆಗೆ 5 ರೂಪಾಯಿ ಹೆಚ್ಚಾಗಿದೆ.
Published On - 6:48 pm, Fri, 29 November 19