ದಾವಣಗೆರೆ: ಕಳೆದ ಕೆಲ ದಿನಗಳ ಹಿಂದೆ ಗಗನಕ್ಕೆ ಏರಿ ಎಲ್ಲರ ಕಣ್ಣಲ್ಲೂ ನೀರು ತರಿಸಿದ್ದ ಈರುಳ್ಳಿ ದರ ಇಳಿಕೆಯಾಗಿದೆ. ಐದು ದಿನದಲ್ಲಿ ಈರುಳ್ಳಿ ಭಾರಿ ಕುಸಿತ ಕಂಡಿದ್ದು, ಮತ್ತೆ ದರ ಮಾರಕಟ್ಟೆಯಲ್ಲಿ ಯಥಾ ಸ್ಥಿತಿಗೆ ತಲುಪಿದೆ.
ಕ್ವಿಂಟಲ್ಗೆ 15 ಸಾವಿರ ರೂಪಾಯಿ ಇದ್ದ ಈರುಳ್ಳಿ ಈಗ ಆರು ಸಾವಿರ ರೂಪಾಯಿಗೆ ಕುಸಿದಿದೆ. ದಾವಣಗೆರೆ ಈರುಳ್ಳಿ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಏರುಪೇರಾಗಿದೆ. ಡಿಸೆಂಬರ್ 9ಕ್ಕೆ ಕ್ವಿಂಟಲ್ಗೆ 10 ಸಾವಿರ ಇತ್ತು, ನಿನ್ನೆ 7 ಸಾವಿರ ರೂಪಾಯಿಗೆ ಇಳಿದಿತ್ತು ಇಂದು ಮತ್ತೆ 6 ಸಾವಿರಕ್ಕೆ ಕುಸಿದಿದೆ.
ಈ ರೀತಿ ದಿನೇ ದಿನೇ ಇಳಿಯುತ್ತಿರುವ ದರಕ್ಕೆ ಈರುಳ್ಳಿ ವ್ಯಾಪಾರಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಅದರಲ್ಲೂ ಈಗ ಮಾರುಕಟ್ಟೆಗೆ ಬರುತ್ತಿರುವ ಈರುಳ್ಳಿ ಪ್ರಮಾಣ ಹೆಚ್ಚಾಗುತ್ತಿದೆ. ಹೀಗಾಗಿ ಜನ ಸಾಮಾನ್ಯರು ಚಿಂತಿಸದೆ ಖರೀದಿ ಮಾಡಬಹುದಾಗಿದೆ. ಆದರೆ ರೈತರೂ ಮಾತ್ರ ನಿರಾಸರಾಗಿದ್ದಾರೆ.