AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರವಾರದ ಸಾಲು ಮರದ ತಿಮ್ಮಕ್ಕ ಪಾರ್ಕ್​ನಲ್ಲೀಗ ಚಿಟ್ಟೆಗಳ ಕಲರವ

ಕಾರವಾರ: ಪಟ ಪಟನೇ ರೆಕ್ಕೆ ಬಡಿಯುತ್ತಾ ಮಕರಂದ ಹೀರುವ ಪತಂಗ. ಹೂವಿಂದ ಹೂವಿಗೆ ಹಾರುತ್ತಾ ನಲಿದಾಡುವ ಕಲರ್​ಫುಲ್ ಬಟರ್​ಫ್ಲೈಸ್. ಸುಂದರ ಚಿಟ್ಟೆಗಳನ್ನ ನೋಡಲು ಇಲ್ಲಿ ಪ್ರವಾಸಿಗರ ದಂಡೇ ಹರಿದು ಬರುತ್ತೆ. ಉತ್ತರಕನ್ನಡ ಜಿಲ್ಲೆ ಕಾರವಾರದಲ್ಲಿರೋ ಚಿಟ್ಟೆ ಪಾರ್ಕ್​ನ ವೈಭವ ನೋಡೋದೆ ಚೆಂದ. ಕಾರವಾರ ನಗರದ ರಾಷ್ಟ್ರೀಯ ಹೆದ್ದಾರಿ 66ರ ಕೋಡಿಭಾಗ್ ಬಳಿ ಇರೋ ಸಾಲು ಮರದ ತಿಮ್ಮಕ್ಕ ವೃಕ್ಷ ಉದ್ಯಾನವನದಲ್ಲೀಗ ಚಿಟ್ಟೆಗಳ ಕಲರವ ಶುರುವಾಗಿದೆ. ಅದಕ್ಕೆ ಕಾರಣ ಉದ್ಯಾನವನದ 10 ಗುಂಟೆ ಪ್ರದೇಶವನ್ನ ಚಿಟ್ಟೆ ಪಾರ್ಕಾಗಿ ಮಾರ್ಪಾಡು […]

ಕಾರವಾರದ ಸಾಲು ಮರದ ತಿಮ್ಮಕ್ಕ ಪಾರ್ಕ್​ನಲ್ಲೀಗ ಚಿಟ್ಟೆಗಳ ಕಲರವ
Follow us
ಸಾಧು ಶ್ರೀನಾಥ್​
|

Updated on:Dec 12, 2019 | 8:05 AM

ಕಾರವಾರ: ಪಟ ಪಟನೇ ರೆಕ್ಕೆ ಬಡಿಯುತ್ತಾ ಮಕರಂದ ಹೀರುವ ಪತಂಗ. ಹೂವಿಂದ ಹೂವಿಗೆ ಹಾರುತ್ತಾ ನಲಿದಾಡುವ ಕಲರ್​ಫುಲ್ ಬಟರ್​ಫ್ಲೈಸ್. ಸುಂದರ ಚಿಟ್ಟೆಗಳನ್ನ ನೋಡಲು ಇಲ್ಲಿ ಪ್ರವಾಸಿಗರ ದಂಡೇ ಹರಿದು ಬರುತ್ತೆ. ಉತ್ತರಕನ್ನಡ ಜಿಲ್ಲೆ ಕಾರವಾರದಲ್ಲಿರೋ ಚಿಟ್ಟೆ ಪಾರ್ಕ್​ನ ವೈಭವ ನೋಡೋದೆ ಚೆಂದ.

ಕಾರವಾರ ನಗರದ ರಾಷ್ಟ್ರೀಯ ಹೆದ್ದಾರಿ 66ರ ಕೋಡಿಭಾಗ್ ಬಳಿ ಇರೋ ಸಾಲು ಮರದ ತಿಮ್ಮಕ್ಕ ವೃಕ್ಷ ಉದ್ಯಾನವನದಲ್ಲೀಗ ಚಿಟ್ಟೆಗಳ ಕಲರವ ಶುರುವಾಗಿದೆ. ಅದಕ್ಕೆ ಕಾರಣ ಉದ್ಯಾನವನದ 10 ಗುಂಟೆ ಪ್ರದೇಶವನ್ನ ಚಿಟ್ಟೆ ಪಾರ್ಕಾಗಿ ಮಾರ್ಪಾಡು ಮಾಡುತ್ತಿರೋದು. ಬಟರ್​ಫ್ಲೈ ಪಾರ್ಕ್​ನಲ್ಲಿ ಸದರ್ನ್​ ಬರ್ಡ್​ ವಿಂಗ್ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಪ್ರಭೇದದ ಚಿಟ್ಟೆಗಳು ಆಶ್ರಯ ಪಡೆದಿವೆ.

ಆರಂಭಿಕ ಹಂತದಲ್ಲಿ ಚಿಟ್ಟೆಗಳು ಪರಾಗಸ್ಪರ್ಶ ನಡೆಸಲು ಅನುಕೂಲವಾಗುವಂತೆ ಹೆಚ್ಚು ಮಕರಂದವಿರುವ ಚಿಕ್ಕ ಚಿಕ್ಕ ಹೂವಿನ ಗಿಡಗಳನ್ನ ಬೆಳೆಸಲಾಗಿದೆ. ಗಿಡಗಳಿಗೆ ನೀರಿನ ವ್ಯವಸ್ಥೆ ಜೊತೆಗೆ ಹೆಚ್ಚಿನ ಉಷ್ಣಾಂಶವಿರೋ ಹಿನ್ನೆಲೆ ನೆರಳಿನ ವ್ಯವಸ್ಥೆ ಕೂಡ ಮಾಡಲಾಗಿದೆ. ಅಲ್ಲದೆ ಪಾರ್ಕ್​ನಲ್ಲಿ ಫಲಕಗಳನ್ನ ಅಳವಡಿಸಲಾಗಿದ್ದು, ಚಿಟ್ಟೆಗಳ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡಲಾಗ್ತಿದೆ.

ಸದ್ಯ ಪ್ರಾಯೋಗಿಕವಾಗಿ ರೂಪಿಸಿರುವ ಚಿಟ್ಟೆ ಪಾರ್ಕ್​ಗೆ ಸಾಕಷ್ಟು ಚಿಟ್ಟೆಗಳು ಆಗಮಿಸುತ್ತಿದ್ದು, ಆಶ್ರಯ ಪಡೆಯುತ್ತಿವೆ. ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದ್ದ ಸಾಲು ಮರದ ತಿಮ್ಮಕ್ಕ ಪಾರ್ಕ್​ನಲ್ಲೀಗ ಚಿಟ್ಟೆಗಳ ಕಲರವ ಆರಂಭವಾಗಿದೆ.

Published On - 8:04 am, Thu, 12 December 19