Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಲಿಕಾನ್​ ಸಿಟಿಯಲ್ಲಿ ಕಸದ ಹೆಸರಲ್ಲಿ ನಡೀತಿದೆ ಮಾಫಿಯಾ

ಬೆಂಗಳೂರು: ಗಲ್ಲಿ ಗಲ್ಲಿಯಲ್ಲೂ.. ಏರಿಯಾ ಏರಿಯಾದಲ್ಲೂ ಕಸ. ಬಿಬಿಎಂಪಿಯನ್ನ ಬೆಂಬಿಡದೇ ಕಾಡ್ತಿರೋ ಬಹುದೊಡ್ಡ ಸಮಸ್ಯೆ. ಅದ್ರಲ್ಲೂ, ಗಾರ್ಬೇಜ್ ಹೆಸ್ರಲ್ಲಿ ಬಿಗ್ ಗೋಲ್ಮಾಲ್ ನಡೀತಿದೆ. ಮಾಫಿಯಾ ಅನ್ನೋ ಅಕ್ರಮದ ವಾಸನೆ ಎಲ್ಲೆಲ್ಲೂ ಸುಳೀತಿದೆ. ಸಿಲಿಕಾನ್​ ಸಿಟಿಯಲ್ಲಿ ಕಸದ ಹೆಸರಲ್ಲಿ ನಡೀತಿದೆ ಮಾಫಿಯಾ! ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಅದೆಷ್ಟು ಟೀಕೆ ಮಾಡಿದ್ರೂ, ಪ್ರಯೋಜನ ಇಲ್ಲ ಬಿಡಿ.. ಅದ್ರಲ್ಲೂ, ಪಾಲಿಕೆಯನ್ನ ಥೇಟ್ ಉಡದಂತೆ ಹಿಡಿದಿರೋ ಕಸದ ಪ್ರಾಬ್ಲಂ ಹೆಜ್ಜೆ ಹೆಜ್ಜೆಗೂ ಕಾಡ್ತಿದೆ. ಇದನ್ನೇ ಬಂಡವಾಳ ಮಾಡ್ಕೊಳ್ತಿರೋ ಖದೀಮರು ದೊಡ್ಡ ಮಾಫಿಯಾಕ್ಕೆ […]

ಸಿಲಿಕಾನ್​ ಸಿಟಿಯಲ್ಲಿ ಕಸದ ಹೆಸರಲ್ಲಿ ನಡೀತಿದೆ ಮಾಫಿಯಾ
Follow us
ಸಾಧು ಶ್ರೀನಾಥ್​
|

Updated on: Dec 12, 2019 | 7:16 AM

ಬೆಂಗಳೂರು: ಗಲ್ಲಿ ಗಲ್ಲಿಯಲ್ಲೂ.. ಏರಿಯಾ ಏರಿಯಾದಲ್ಲೂ ಕಸ. ಬಿಬಿಎಂಪಿಯನ್ನ ಬೆಂಬಿಡದೇ ಕಾಡ್ತಿರೋ ಬಹುದೊಡ್ಡ ಸಮಸ್ಯೆ. ಅದ್ರಲ್ಲೂ, ಗಾರ್ಬೇಜ್ ಹೆಸ್ರಲ್ಲಿ ಬಿಗ್ ಗೋಲ್ಮಾಲ್ ನಡೀತಿದೆ. ಮಾಫಿಯಾ ಅನ್ನೋ ಅಕ್ರಮದ ವಾಸನೆ ಎಲ್ಲೆಲ್ಲೂ ಸುಳೀತಿದೆ.

ಸಿಲಿಕಾನ್​ ಸಿಟಿಯಲ್ಲಿ ಕಸದ ಹೆಸರಲ್ಲಿ ನಡೀತಿದೆ ಮಾಫಿಯಾ! ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಅದೆಷ್ಟು ಟೀಕೆ ಮಾಡಿದ್ರೂ, ಪ್ರಯೋಜನ ಇಲ್ಲ ಬಿಡಿ.. ಅದ್ರಲ್ಲೂ, ಪಾಲಿಕೆಯನ್ನ ಥೇಟ್ ಉಡದಂತೆ ಹಿಡಿದಿರೋ ಕಸದ ಪ್ರಾಬ್ಲಂ ಹೆಜ್ಜೆ ಹೆಜ್ಜೆಗೂ ಕಾಡ್ತಿದೆ. ಇದನ್ನೇ ಬಂಡವಾಳ ಮಾಡ್ಕೊಳ್ತಿರೋ ಖದೀಮರು ದೊಡ್ಡ ಮಾಫಿಯಾಕ್ಕೆ ಇಳಿದಿದ್ದಾರೆ. ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕಸದ ಸಮಸ್ಯೆಗೆ ಮುಕ್ತಿ ಹಾಡೋಕೆ ಅಂತ ಎಂಟ್ರಿ ಕೊಟ್ಟಿರೋ ವಿದೇಶಿ ಕಂಪನಿಗಳು ಕೂಡ ದೊಡ್ಡ ದಂಧೆ ನಡೆಸ್ತಿವೆ.

ಅದೇನಂದ್ರೆ, ರಾಜಧಾನಿಯಲ್ಲಿ ಕಸದ ಸಮಸ್ಯೆ ನಿವಾರಿಸೋಕೆ ಸರ್ಕಾರ ಹಾಗೂ ಬಿಬಿಎಂಪಿ ಸಾಕಷ್ಟು ಎಕರೆ ಭೂಮಿಯನ್ನ ಫ್ರೀಯಾಗಿ ನೀಡ್ತಿದೆ. ಇದನ್ನೇ ಬಂಡವಾಳ ಮಾಡ್ಕೊಂಡಿರೋ ಫಾರಿನ್ ಕಂಪನಿಗಳು ಗಾರ್ಬೇಜ್ ಅಸ್ತ್ರ ಪ್ರಯೋಗಿಸಿವೆ. ಬೆಂಗಳೂರಿಗೆ ಲಗ್ಗೆ ಇಟ್ಟಿರೋ ಹತ್ತಾರು ವಿದೇಶಿ ಕಂಪನಿಗಳು ನೂರಾರು ಎಕರೆ ಭೂಮಿಯನ್ನ ಕಬಳಿಸಿವೆಯಂತೆ.

ಹಾಗಿದ್ರೆ, ವಿದೇಶಿ ಕಂಪನಿಗಳಿಗೆ ಬಿಬಿಎಂಪಿ ನೀಡಿರೋ ಭೂಮಿ ಎಷ್ಟು.. ಕಸದ ಹೆಸರಲ್ಲಿ ದಂಧೆ ನಡೆಸ್ತಿರೋದೆಷ್ಟು ಅನ್ನೋದಾದ್ರೆ… ಯಾವ ವಿದೇಶಿ ಕಂಪನಿಗೆ ಎಷ್ಟು ಎಕರೆ ಭೂಮಿ..? ಚೀನಾ ಮೂಲದ ಸತೇರಾಮ್ ಟೆಕ್ನಾಲಜಿ ಕಂಪನಿ ಕಸದಿಂದ ವಿದ್ಯುತ್ ತಯಾರಿಸಲು ಬಗನದೊಡ್ಡಿ ಬಳಿ 20 ಎಕರೆ ಭೂಮಿ ಪಡೆದ್ಕೊಂಡಿದೆ. ಅದೇ ಸತೇರಾಮ್ ಟೆಕ್ನಾಲಜಿಗೆ ಕನ್ನಳ್ಳಿ ಪ್ಲಾಂಟ್ ಬಳಿ 8 ಎಕರೆ ಭೂಮಿಯನ್ನ ಬಿಬಿಎಂಪಿ ನೀಡಿದೆ. ಜೊತೆಗೆ ಯುಎಸ್ ಮೂಲದ ಎನ್​ಇಜಿ ಕಂಪನಿಗೆ ಮಾವಳ್ಳಿ ಪ್ಲಾಂಟ್ ಬಳಿ 20 ಎಕರೆ ಭೂಮಿ ನೀಡಲಾಗಿದೆ. ಇತ್ತ ಯುರೋಪ್ ಮೂಲದ ವಿದೇಶಿ ಕಂಪನಿ ಇಂಡಿಯಂ ಪ್ರಾಜೆಕ್ಟ್ ದೊಡ್ಡಬಿದರಕಲ್ಲು ಬಳಿ 10 ಎಕರೆ ಜಮೀನು ಪಡೆದು ಕಸದ ಹೆಸ್ರಲ್ಲಿ ದೊಡ್ಡ ಮಾಫಿಯಾಕ್ಕಿಳಿದಿವೆ.

ಬಿಬಿಎಂಪಿಗೆ ಕಸದ ಹೆಸರು ಹೇಳಿದ್ರೆ ಸಾಕು ಧಾನ ಶೂರ ಕರ್ಣನಂತೆ ಭೂಮಿ ಹಂಚಿಕೆ ಮಾಡ್ತಿದೆ. ಇದೀಗ ಬಿಬಿಎಂಪಿ ಮೇಯರ್ ಸಾಹೇಬ್ರು ನೆದರ್​​ಲ್ಯಾಂಡ್ ಮೂಲದ ಮತ್ತೊಂದು ಕಂಪನಿಗೆ ಭೂಮಿ ನೀಡೋಕೆ ಮುಂದಾಗಿದ್ದಾರೆ. ಇದರಿಂದ ಸರ್ಕಾರಿ ಭೂಮಿ ಪುಗ್ಸಟ್ಟೆ ಬೇರೆಯವರ ಕೈ ಸೇರುತ್ತಿದೆ.