ಚಿತ್ರದುರ್ಗ: ಕಳೆದೊಂದು ವಾರದಿಂದ ಆ ಜನರಿಗೆ ಆತ ಕಾಟ ಕೊಡ್ತಿದ್ದ. ಮನೆಯಿಂದ ಹೊರಗೆ ಹೋಗೋಕೂ ಹೆದರುವಂತೆ ಭಯ ಹುಟ್ಟಿಸಿದ್ದ. ಆದ್ರೀಗ, ಆ ರೌಡಿಯ ಸೊಕ್ಕಡಗಿದೆ. ಚಾಲಾಕಿ ತಂಡದ ಖೆಡ್ಡಾಗೆ ಆತ ಬಿದ್ದಿದ್ದಾನೆ. ಏಟಿಗೆ ಎದಿರೇಟು, ಪಂಚ್ಗೆ ಪಂಚ್, ಮಣಿಯೋ ಮಾತಿಲ್ಲ. ಮುಖ ಮೂತಿ ನೋಡ್ತಾನೆ ಇಲ್ಲ. ಸೊಂಡಲಿನಲ್ಲೇ ಎಳೆದಾಟ, ದಂತದಿಂದಲೇ ಡಿಚ್ಚಿ. ರಣಕಲಿಗಳೆಂತೆ ಹೊಡೆದಾಡ್ತಿರೋ ಆನೆಗಳ ಗುದ್ದಾಟಕ್ಕೆ ಲಾರಿಗೆ ಲಾರಿಯೇ ಅಲುಗಾಡ್ತಿದೆ.
ಕೊರಳಿಗೊಂದು ಹಗ್ಗ, ಹಿಂದಿನ ಕಾಲುಗಳಿಗೂ ಹಗ್ಗ. ಆನೆಗಳ ಹಿಡಿತದಲ್ಲಿ ಕೈದಿಯಂತೆ ನಿಂತಿರೋ ಈ ಸಲಗ, ಚಿತ್ರದುರ್ಗದ ಜನರಲ್ಲಿ ಶ್ಯಾನೆ ಆತಂಕ ಹುಟ್ಟಿಸಿತ್ತು. ಭದ್ರ ಅರಣ್ಯದಿಂದ ಜೋಗಿಮಟ್ಟ ಭಾಗಕ್ಕೆ ಬಂದಿದ್ದ ಈ ಕಾಡಾನೆ, ಕುರುಮರಡಿ, ನಂದಿಪುರ ಸುತ್ತಲಿನ ಜನರಿಗೆ ಭಯ ಮೂಡಿಸಿತ್ತು. ಹೀಗಾಗಿ, ಕಾಡಾನೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳಿಂದಲೇ ಹರಸಾಹಸ ಮಾಡಿದ್ರು.
‘ಅಭಿಮನ್ಯು’ ಮುಂದಾಳತ್ವದಲ್ಲಿ ಆಪರೇಷನ್:
20 ವರ್ಷದ ಅಭಿಮನ್ಯು ಆನೆ ಮುಂದಾಳತ್ವದಲ್ಲಿ ಆಪರೇಷನ್ ಕಾಡಾನೆ ಸೆರೆ ನಡೆಯಿತು. ಅಭಿಮನ್ಯುವಿಗೆ ಬಾಲಚಂದ್ರ, ಸಾಗರ ಗೋಪಾಲಸ್ವಾಮಿ, ಕೃಷ್ಣ ಮತ್ತು ಬಾಲಚಂದ್ರ ಆನೆಗಳು ಸಾಥ್ ನೀಡಿದ್ವು. ದಟ್ಟಾರಣ್ಯದ ಮೂಲೆ ಮೂಲೆಯನ್ನೂ ಜಾಲಾಡಿದವ್ರಿಗೆ, ಆನೆ ಜರಗು ಪ್ರದೇಶದಲ್ಲಿ ಕಾಡಾನೆ ಎದುರಾಯ್ತು. ನಂತರ ಅಭಿಮನ್ಯು ಟೀಂ ಹಾಗೂ ಕಾಡಾನೆ ನಡುವೆ ಭಾರೀ ಫೈಟ್ ನಡೀತು. ಅರವಳಿಕೆ ಮದ್ದು ನೀಡಿ ಕಾಡಾನೆ ಕಾಲಿಗೆ ಹಗ್ಗ ಕಟ್ಟಲಾಯ್ತು.
ಇನ್ನು, 5 ಆನೆಗಳು ಸುತ್ತ ನಿಂತ್ರೂ ಕಾಡಾನೆ ಭಾರೀ ಕಾದಾಟ ನಡೆಸಿತು. ಅಭಿಮನ್ಯು ಮೇಲೆಯೇ ಅಟ್ಯಾಕ್ ಮಾಡ್ತು. ಅದ್ರಲ್ಲೂ ಲಾರಿಗೆ ಹತ್ತಿಸುವಾಗ 2 ಆನೆಗಳ ನಡುವೆ ಭಾರೀ ಕಾಳಗವೇ ನಡೆದು ಬಿಡ್ತು. ಸದ್ಯ, ಕಾಡಾನೆ ಖದರ್ ಕಂಡ ಜನರೆಲ್ಲ, ಆನೆಯನ್ನ ಮದಕರಿ, ಗಂಡುಗಲಿ ಅಂತ ಕರೀತಿದ್ರು, ಈಗ ಆನೆ ಸೆರೆಯಾಗಿರೋದ್ರಿಂದ ಜನರು ಕೂಡ ನಿಟ್ಟುಸಿರು ಬಿಟ್ಟಿದ್ದಾರೆ.
Published On - 6:58 pm, Tue, 10 December 19