ಆನ್​​​ಲೈನ್ ವಂಚನೆಗೊಳಗಾದವರು ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಿಸೋಕಾಗಲ್ಲ ಕೇಸ್

ಬೆಂಗಳೂರು: ಇದು ಡಿಜಿಟಲ್ ಯುಗ. ಸ್ಮಾರ್ಟ್​ಫೋನ್​. ಗೂಗಲ್ ಪೇ. ಫೋನ್ ಪೇ. ಪೇಟಿಎಮ್​ನಲ್ಲೇ ವ್ಯವಹಾರ ಮುಗಿದೋಗುತ್ತೆ. ಕಾರ್ಡ್​​ ಗೀಚಿದ್ರೆ ಸಾಕು ಕಣ್ಣು ಮಿಟುಕಿಸೋದ್ರೊಳಗೆ ಹಣ ಖಾತೆಗೆ ಜಮೆ ಆಗುತ್ತೆ. ತಂತ್ರಜ್ಞಾನ ಎಷ್ಟು ವೇಗವಾಗಿ ಬೆಳೀತಿದ್ಯೋ ಸೈಬರ್ ಕಳ್ಳರು ಕೂಡ ಅಷ್ಟೇ ಆಕ್ಟೀವ್ ಆಗ್ತಿದ್ದಾರೆ. ಕಿಲಾಡಿಗಳ ಆಟಕ್ಕೆ ಪೊಲೀಸರೇ ಶಾಕ್ ಆಗಿದ್ದಾರೆ. ಆನ್​​​ಲೈನ್ ವಂಚನೆಗೊಳಗಾದವರಿಗೆ ಕಾದಿದೆ ಬಿಗ್ ಶಾಕ್..! ಸಿಲಿಕಾನ್ ಸಿಟಿ ಬೆಂಗಳೂರು ಬೆಳೆದಂತೆ ಸೈಬರ್ ಕ್ರೈಂಗಳು ಕೂಡ ಹೆಮ್ಮರದಂತೆ ಬೆಳೀತಿದೆ. ಖದೀಮರು ಎಲ್ಲೋ ಕೂತ್ಕೊಂಡು ಬೇರೆವರ ಖಾತೆಯಲ್ಲಿರೋ […]

ಆನ್​​​ಲೈನ್ ವಂಚನೆಗೊಳಗಾದವರು ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಿಸೋಕಾಗಲ್ಲ ಕೇಸ್
ಸೈಬರ್ ಕ್ರೈಮ್ ಪೊಲೀಸ್ ಠಾಣೆ
Follow us
ಸಾಧು ಶ್ರೀನಾಥ್​
|

Updated on:Dec 11, 2019 | 7:14 AM

ಬೆಂಗಳೂರು: ಇದು ಡಿಜಿಟಲ್ ಯುಗ. ಸ್ಮಾರ್ಟ್​ಫೋನ್​. ಗೂಗಲ್ ಪೇ. ಫೋನ್ ಪೇ. ಪೇಟಿಎಮ್​ನಲ್ಲೇ ವ್ಯವಹಾರ ಮುಗಿದೋಗುತ್ತೆ. ಕಾರ್ಡ್​​ ಗೀಚಿದ್ರೆ ಸಾಕು ಕಣ್ಣು ಮಿಟುಕಿಸೋದ್ರೊಳಗೆ ಹಣ ಖಾತೆಗೆ ಜಮೆ ಆಗುತ್ತೆ. ತಂತ್ರಜ್ಞಾನ ಎಷ್ಟು ವೇಗವಾಗಿ ಬೆಳೀತಿದ್ಯೋ ಸೈಬರ್ ಕಳ್ಳರು ಕೂಡ ಅಷ್ಟೇ ಆಕ್ಟೀವ್ ಆಗ್ತಿದ್ದಾರೆ. ಕಿಲಾಡಿಗಳ ಆಟಕ್ಕೆ ಪೊಲೀಸರೇ ಶಾಕ್ ಆಗಿದ್ದಾರೆ.

ಆನ್​​​ಲೈನ್ ವಂಚನೆಗೊಳಗಾದವರಿಗೆ ಕಾದಿದೆ ಬಿಗ್ ಶಾಕ್..! ಸಿಲಿಕಾನ್ ಸಿಟಿ ಬೆಂಗಳೂರು ಬೆಳೆದಂತೆ ಸೈಬರ್ ಕ್ರೈಂಗಳು ಕೂಡ ಹೆಮ್ಮರದಂತೆ ಬೆಳೀತಿದೆ. ಖದೀಮರು ಎಲ್ಲೋ ಕೂತ್ಕೊಂಡು ಬೇರೆವರ ಖಾತೆಯಲ್ಲಿರೋ ಹಣ ಖೋತಾ ಮಾಡ್ತಿದ್ದಾರೆ. ಆನ್​​ಲೈನ್​​ ವಂಚನೆಗೊಳಗಾದವರ ಕೇಸ್​ಗಳು ಕ್ಷಣಕ್ಕೊಂದು. ದಿನಕ್ಕೊಂದು ಪೊಲೀಸ್ ಠಾಣೆ ಮೆಟ್ಟಿಲೇರ್ತಿವೆ. ಮೋಸ ಹೋಗಿ ಸೈಬರ್​ ಕ್ರೈಂ ಠಾಣೆ ಮೆಟ್ಟಿಲೇರ್ತಿದ್ದ ಜನರಿಗೆ ಶಾಕಿಂಗ್ ವಿಷ್ಯವೊಂದು ಕಾದಿದೆ.

ಅದೇನಂದ್ರೆ, ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ಸಂಖ್ಯೆ ಮಿತಿ ಮೀರಿ ದಾಖಲಾಗಿವೆಯಂತೆ. ಈಗಾಗಲೇ ಪೊಲೀಸ್ ನಿಯಮದ ಪ್ರಕಾರ ಒಂದು ಠಾಣೆಯಲ್ಲಿ 1 ವರ್ಷದ ಅವಧಿಯಲ್ಲಿ 9ರಿಂದ 10 ಸಾವಿರ ಪ್ರಕರಣಗಳನ್ನ ದಾಖಲಿಸೋ ಅವಕಾಶವಿದೆ. ಆನ್​​ಲೈನ್​ ವಂಚನೆ ಕೇಸ್​ಗಳ ಸಂಖ್ಯೆ ಹೆಚ್ಚಾಗಿರೋದ್ರಿಂದ ಯಾವುದೇ ಕೇಸ್​​ಗಳನ್ನೂ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಳ್ತಿಲ್ಲ.

ಹೀಗಾಗಿ, ಈ ಡಿಸೆಂಬರ್ 2019ರ ಒಳಗಾಗಿ ವಂಚನೆಗೊಳಗಾದವರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಸಾಧ್ಯವಿಲ್ಲ. ಆನ್​​ಲೈನ್ ವಂಚನೆಗೊಳಗಾದೋರು ತಮ್ಮ ತಮ್ಮ ಏರಿಯಾದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ನೀಡ್ಬೇಕಂತೆ.

ಈ ಕುರಿತು ದೂರು ಸ್ವೀಕರಿಸುವಂತೆ ನಗರದ ಎಲ್ಲಾ ಪೊಲೀಸ್ ಠಾಣೆಗೂ ನಗರ ಪೊಲೀಸ್ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಒಟ್ನಲ್ಲಿ, ಆನ್​ಲೈನ್ ವಂಚನೆ ಜಾಲಕ್ಕೆ ತುತ್ತಾಗೋರು ಸೈಬರ್ ಕ್ರೈಂ ಠಾಣೆ ಮೊರೆ ಹೋದ್ರೆ ಇದೀಗ ಹೊಸದೊಂದು ತಲೆನೋವು ಎದುರಾಗಿದೆ. 2020ಜನವರಿ ಬಳಿಕ ಸೈಬರ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸ್ಬೋದಂತೆ.

Published On - 7:14 am, Wed, 11 December 19

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ