‘ಅಭಿಮನ್ಯು’ ಸಲುಗೆಯಿಂದ ಒಂಟಿ ಸಲಗ ಸೆರೆ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಚಿತ್ರದುರ್ಗ: ಕಳೆದೊಂದು ವಾರದಿಂದ ಆ ಜನರಿಗೆ ಆತ ಕಾಟ ಕೊಡ್ತಿದ್ದ. ಮನೆಯಿಂದ ಹೊರಗೆ ಹೋಗೋಕೂ ಹೆದರುವಂತೆ ಭಯ ಹುಟ್ಟಿಸಿದ್ದ. ಆದ್ರೀಗ, ಆ ರೌಡಿಯ ಸೊಕ್ಕಡಗಿದೆ. ಚಾಲಾಕಿ ತಂಡದ ಖೆಡ್ಡಾಗೆ ಆತ ಬಿದ್ದಿದ್ದಾನೆ. ಏಟಿಗೆ ಎದಿರೇಟು, ಪಂಚ್​​ಗೆ ಪಂಚ್​​, ಮಣಿಯೋ ಮಾತಿಲ್ಲ. ಮುಖ ಮೂತಿ ನೋಡ್ತಾನೆ ಇಲ್ಲ. ಸೊಂಡಲಿನಲ್ಲೇ ಎಳೆದಾಟ, ದಂತದಿಂದಲೇ ಡಿಚ್ಚಿ. ರಣಕಲಿಗಳೆಂತೆ ಹೊಡೆದಾಡ್ತಿರೋ ಆನೆಗಳ ಗುದ್ದಾಟಕ್ಕೆ ಲಾರಿಗೆ ಲಾರಿಯೇ ಅಲುಗಾಡ್ತಿದೆ. ಕೊರಳಿಗೊಂದು ಹಗ್ಗ, ಹಿಂದಿನ ಕಾಲುಗಳಿಗೂ ಹಗ್ಗ. ಆನೆಗಳ ಹಿಡಿತದಲ್ಲಿ ಕೈದಿಯಂತೆ ನಿಂತಿರೋ ಈ ಸಲಗ, ಚಿತ್ರದುರ್ಗದ […]

‘ಅಭಿಮನ್ಯು’ ಸಲುಗೆಯಿಂದ ಒಂಟಿ ಸಲಗ ಸೆರೆ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Follow us
ಸಾಧು ಶ್ರೀನಾಥ್​
|

Updated on:Dec 10, 2019 | 6:59 PM

ಚಿತ್ರದುರ್ಗ: ಕಳೆದೊಂದು ವಾರದಿಂದ ಆ ಜನರಿಗೆ ಆತ ಕಾಟ ಕೊಡ್ತಿದ್ದ. ಮನೆಯಿಂದ ಹೊರಗೆ ಹೋಗೋಕೂ ಹೆದರುವಂತೆ ಭಯ ಹುಟ್ಟಿಸಿದ್ದ. ಆದ್ರೀಗ, ಆ ರೌಡಿಯ ಸೊಕ್ಕಡಗಿದೆ. ಚಾಲಾಕಿ ತಂಡದ ಖೆಡ್ಡಾಗೆ ಆತ ಬಿದ್ದಿದ್ದಾನೆ. ಏಟಿಗೆ ಎದಿರೇಟು, ಪಂಚ್​​ಗೆ ಪಂಚ್​​, ಮಣಿಯೋ ಮಾತಿಲ್ಲ. ಮುಖ ಮೂತಿ ನೋಡ್ತಾನೆ ಇಲ್ಲ. ಸೊಂಡಲಿನಲ್ಲೇ ಎಳೆದಾಟ, ದಂತದಿಂದಲೇ ಡಿಚ್ಚಿ. ರಣಕಲಿಗಳೆಂತೆ ಹೊಡೆದಾಡ್ತಿರೋ ಆನೆಗಳ ಗುದ್ದಾಟಕ್ಕೆ ಲಾರಿಗೆ ಲಾರಿಯೇ ಅಲುಗಾಡ್ತಿದೆ.

ಕೊರಳಿಗೊಂದು ಹಗ್ಗ, ಹಿಂದಿನ ಕಾಲುಗಳಿಗೂ ಹಗ್ಗ. ಆನೆಗಳ ಹಿಡಿತದಲ್ಲಿ ಕೈದಿಯಂತೆ ನಿಂತಿರೋ ಈ ಸಲಗ, ಚಿತ್ರದುರ್ಗದ ಜನರಲ್ಲಿ ಶ್ಯಾನೆ ಆತಂಕ ಹುಟ್ಟಿಸಿತ್ತು. ಭದ್ರ ಅರಣ್ಯದಿಂದ ಜೋಗಿಮಟ್ಟ ಭಾಗಕ್ಕೆ ಬಂದಿದ್ದ ಈ ಕಾಡಾನೆ, ಕುರುಮರಡಿ, ನಂದಿಪುರ ಸುತ್ತಲಿನ ಜನರಿಗೆ ಭಯ ಮೂಡಿಸಿತ್ತು. ಹೀಗಾಗಿ, ಕಾಡಾನೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳಿಂದಲೇ ಹರಸಾಹಸ ಮಾಡಿದ್ರು.

‘ಅಭಿಮನ್ಯು’ ಮುಂದಾಳತ್ವದಲ್ಲಿ ಆಪರೇಷನ್: 20 ವರ್ಷದ ಅಭಿಮನ್ಯು ಆನೆ ಮುಂದಾಳತ್ವದಲ್ಲಿ ಆಪರೇಷನ್ ಕಾಡಾನೆ ಸೆರೆ ನಡೆಯಿತು. ಅಭಿಮನ್ಯುವಿಗೆ ಬಾಲಚಂದ್ರ, ಸಾಗರ ಗೋಪಾಲಸ್ವಾಮಿ, ಕೃಷ್ಣ ಮತ್ತು ಬಾಲಚಂದ್ರ ಆನೆಗಳು ಸಾಥ್​ ನೀಡಿದ್ವು. ದಟ್ಟಾರಣ್ಯದ ಮೂಲೆ ಮೂಲೆಯನ್ನೂ ಜಾಲಾಡಿದವ್ರಿಗೆ, ಆನೆ ಜರಗು ಪ್ರದೇಶದಲ್ಲಿ ಕಾಡಾನೆ ಎದುರಾಯ್ತು. ನಂತರ ಅಭಿಮನ್ಯು ಟೀಂ ಹಾಗೂ ಕಾಡಾನೆ ನಡುವೆ ಭಾರೀ ಫೈಟ್ ನಡೀತು. ಅರವಳಿಕೆ ಮದ್ದು ನೀಡಿ ಕಾಡಾನೆ ಕಾಲಿಗೆ ಹಗ್ಗ ಕಟ್ಟಲಾಯ್ತು.

ಇನ್ನು, 5 ಆನೆಗಳು ಸುತ್ತ ನಿಂತ್ರೂ ಕಾಡಾನೆ ಭಾರೀ ಕಾದಾಟ ನಡೆಸಿತು. ಅಭಿಮನ್ಯು ಮೇಲೆಯೇ ಅಟ್ಯಾಕ್​ ಮಾಡ್ತು. ಅದ್ರಲ್ಲೂ ಲಾರಿಗೆ ಹತ್ತಿಸುವಾಗ 2 ಆನೆಗಳ ನಡುವೆ ಭಾರೀ ಕಾಳಗವೇ ನಡೆದು ಬಿಡ್ತು. ಸದ್ಯ, ಕಾಡಾನೆ ಖದರ್ ಕಂಡ ಜನರೆಲ್ಲ, ಆನೆಯನ್ನ ಮದಕರಿ, ಗಂಡುಗಲಿ ಅಂತ ಕರೀತಿದ್ರು, ಈಗ ಆನೆ ಸೆರೆಯಾಗಿರೋದ್ರಿಂದ ಜನರು ಕೂಡ ನಿಟ್ಟುಸಿರು ಬಿಟ್ಟಿದ್ದಾರೆ.

Published On - 6:58 pm, Tue, 10 December 19

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ