AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಮೇಶ್ ಜಾರಕಿಹೊಳಿ ಬಂಧನವಾಗಲಿ, ಗೃಹ ಸಚಿವ ಬೊಮ್ಮಾಯಿ ರಾಜೀನಾಮೆ ನೀಡಲಿ: ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಒತ್ತಾಯ

Siddaramaiah Press Meet: ಬಹಳ ರಾಮನ ಜಪ ಮಾಡುವ ಈ ಸರ್ಕಾರ, ಮಹಿಳೆಯರ ಬಗ್ಗೆ ಮಾತನಾಡುವ ಸರ್ಕಾರ ಕಾನೂನನ್ನೇ ತಿರುಚಿದೆ. ರಮೇಶ್ ಬಿಜೆಪಿ ಸರ್ಕಾರ ಬರಲು ಸಹಾಯ ಮಾಡಿದ್ದರು. ಇದಕ್ಕೆ ಪ್ರತ್ಯುಪಕಾರವಾಗಿ ಸರ್ಕಾರ ಇದನ್ನ ಮಾಡುತ್ತಿದೆ. ನಾನು ಈ ಸನ್ನಿವೇಶದಲ್ಲಿ ಗೃಹ ಸಚಿವರು ರಮೇಶ್ ಜಾರಕಿಹೊಳಿ ಜೊತೆ ಚರ್ಚೆ ಮಾಡಿರುವುದರಿಂದ ಮೇಲ್ನೋಟಕ್ಕೆ ಬಸವರಾಜ್ ಬೊಮ್ಮಾಯಿ, ರಮೇಶ್ ಜಾರಕಿಹೊಳಿಯನ್ನ ಕಾಪಾಡುತ್ತಿದ್ದಾರೆ . ಹೀಗಾಗಿ ಬಸವರಾಜ್ ಬೊಮ್ಮಾಯಿ ರಾಜೀನಾಮೆಗೆ ನಾನು ಆಗ್ರಹಿಸುತ್ತೇನೆ.

ರಮೇಶ್ ಜಾರಕಿಹೊಳಿ ಬಂಧನವಾಗಲಿ, ಗೃಹ ಸಚಿವ ಬೊಮ್ಮಾಯಿ ರಾಜೀನಾಮೆ ನೀಡಲಿ: ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಒತ್ತಾಯ
ಬೇರೆ ಕಡೆ ಚುನಾವಣೆಗೆ ಸ್ವರ್ಧಿಸುವುದಾದರೆ ನಿಮ್ಮ ಅನುಮತಿ ಪಡೆದೇ ಹೋಗುತ್ತೇನೆ: ಬಾದಾಮಿ ಕ್ಷೇತ್ರದ ಜನತೆಗೆ ಮಾತುಕೊಟ್ಟ ಸಿದ್ದರಾಮಯ್ಯ
ಸಾಧು ಶ್ರೀನಾಥ್​
|

Updated on: May 27, 2021 | 3:52 PM

Share

ಬೆಂಗಳೂರು: ಸುಮಾರು 3 ತಿಂಗಳ ಹಿಂದೆ ಬೆಳಕಿಗೆ ಬಂದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣದ ತದನಂತರದ ಬೆಳವಣಿಗೆಗಳ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದು ಜಂಟಿ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಒಟ್ಟಾರೆಯಾಗಿ ಇಬ್ಬರೂ ಕಾಂಗ್ರೆಸ್​ ನಾಯಕರು ರಮೇಶ್ ಜಾರಕಿಹೊಳಿ ಬಂಧನ, ಗೃಹ ಸಚಿವ ಬೊಮ್ಮಾಯಿ ರಾಜೀನಾಮೆ ಮತ್ತು ಸ್ವತಂತ್ರ ಸಂಸ್ಥೆಯಿಂದ ಪ್ರಕರಣದ ತನಿಖೆ ಆಗಲಿ ಎಂದು ಒತ್ತಾಯ ಮಾಡಿದ್ದಾರೆ:

ಸಿದ್ದರಾಮಯ್ಯ -ಡಿ.ಕೆ. ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ಸಾರಾಂಶ ಇಲ್ಲಿದೆ: ಮಾರ್ಚ್ 3 ರಂದು ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ ಸಮಯದಿಂದ ಹಿಡಿದು ಐದು ಮಂದಿ ಸಚಿವರು ಕೋರ್ಟ್ ಮೊರೆ ಹೋಗಿ 67 ಮಾಧ್ಯಮಗಳ ಮೂಲಕ ಸುದ್ದಿ ಪ್ರಸಾರಕ್ಕೆ ತಡೆ ತಂದಿದ್ದು, ಮತ್ತು ಈ ಮಧ್ಯೆ, ದಿನೇಶ್ ಕನಕಪುರದಲ್ಲಿ ಠಾಣೆಯಲ್ಲಿ ಭಯ ಇದೆ ಅಂತಾ ದೂರು ನೀಡಿದ್ದು ಎಲ್ಲವನ್ನೂ ಸವಿಸ್ತಾರವಾಗಿ ಪ್ರಸ್ತಾಪಿಸಿದ ಕಾಂಗ್ರೆಸ್​ ನಾಯಕರಿಬ್ಬರೂ ಮಾರ್ಚ್ 9ರಂದು ರಮೇಶ್ ಜಾರಕಿಹೊಳಿ ಗೃಹ ಸಚಿವರಿಗೆ ಪತ್ರ ಬರೆದು ನಾನು ನಿರಪರಾಧಿ, ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಆ ಸಿಡಿ ನಕಲಿ, ಅದರಲ್ಲಿರುವುದು ನಾನಲ್ಲ ಅಂತಾ ಹೇಳುತ್ತಾರೆ. ಜಾರಕಿಹೊಳಿ ಪತ್ರದ ಮೇಲೆ ಮಾರ್ಚ್ 10 ಗೃಹ ಸಚಿವರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಎಸ್ಐಟಿ ರಚನೆಗೆ ಸೂಚಿಸುತ್ತಾರೆ. ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ಎಸ್ಐಟಿ ರಚನೆ ಮಾಡಲು ಸೂಚಿಸುತ್ತಾರೆ.

ದೂರು ನೀಡಿದ ಮೇಲೆ ಎಫ್ಐಆರ್ ದಾಖಲಿಸಬೇಕು ತನಿಖೆ ನಡೆಸಬೇಕು. ಆ ಬಳಿಕ ಚಾರ್ಜ್ ಶೀಟ್ ದಾಖಲಿಸಬೇಕು. ಇದು ಕಾನೂನಿನ ಪದ್ಧತಿ. ಆದರೆ ಗೃಹ ಸಚಿವರು ವಿಚಾರಣೆ ಮಾಡಿ ವರದಿ ನೀಡಿ ಅಂತಾರೆ. ಎಫ್ಐಆರ್ ತನಿಖೆಯ ವೇಳೆ ಮಾರ್ಚ್ 13 ರಂದು ಶ್ರವಣ್ ಮತ್ತು ನರೇಶ್ ಎಂಬುವವರ ಮನೆ ರೇಡ್ ಮಾಡುತ್ತಾರೆ. ಮಾರ್ಚ್ 13ಕ್ಕೆ ಸಂತ್ರಸ್ತೆ ಮಹಿಳೆ ವಿಡಿಯೋ ರೆಕಾರ್ಡ್ ಮಾಡುತ್ತಾರೆ. ನಾನು ರಮೇಶ್ ಜಾರಕಿಹೊಳಿ ಬಳಿ ಕೆಲಸ ಕೇಳಿ ಹೋಗಿದ್ದೆ. ಅವರು ನನ್ನನ್ನು ಲೈಂಗಿಕವಾಗಿ ದೂರುಪಯೋಗ ಮಾಡಿಕೊಂಡರು ಎಂದು ಸಿಡಿಯಲ್ಲಿ ಹೇಳಿದ್ದಾರೆ.

ಇದೇ ಆಧಾರದ ಮೇಲೆ ರಮೇಶ್ ಜಾರಕಿಹೊಳಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಅಸೆಂಬ್ಲಿಯಲ್ಲಿ ಹೇಳಿದ್ದೆವು. ನಾನೂ, ರಮೇಶ್ ಕುಮಾರ್, ಡಿ.ಕೆ.ಶಿವಕುಮಾರ್ ಎಲ್ಲಾ ಚರ್ಚೆ ಮಾಡಲು ಅವಕಾಶ ಕೇಳಿದ್ವಿ. ಆದರೆ ಸ್ಪೀಕರ್ ತನಿಖೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕೈಗೆತ್ತಿಕೊಳ್ಳಲು ಆಗೋಲ್ಲ ಅಂದರು. ಇದಾದ ಬಳಿಕ ರಮೇಶ್ ಜಾರಕಿಹೊಳಿ ವಿರುದ್ಧ ಐಪಿಸಿ 376 ಸಿ ಅಡಿ ಕೇಸ್ ದಾಖಲಾಗುತ್ತದೆ. ನಮ್ಮ ಪ್ರಕಾರ 376 ಅಡಿ ಪ್ರಕರಣ ದಾಖಲಾಗಬೇಕಿತ್ತು. ಇದರ ಅಡಿ 10 ವರ್ಷದ ವರೆಗೆ ಶಿಕ್ಷೆಗೆ ಅವಕಾಶ ಇದೆ. ಆದರೆ ಮುಂದೆ ತನಿಖೆ ಸರಿಯಾಗಿ ನಡೆಯಲೇ ಇಲ್ಲ. ಷಡ್ಯಂತ್ರ ನಡೆದಿದೆಯೇ ಎಂಬ ಬಗ್ಗೆ ತನಿಖೆ ನಡೆಯಿತೇ ಹೊರತು 376 ಅಡಿ ತನಿಖೆ ನಡೆದಿಲ್ಲ. 60 ದಿನಗಳ ಒಳಗೆ ತನಿಖೆ ಮುಗಿಸುವುದು ಕಡ್ಡಾಯ. ಆಮೇಲೆ ಸ್ವತಂತ್ರ ತನಿಖೆ ಕೋರಿ ಹೈಕೋರ್ಟ್ ನಲ್ಲಿ ಪಿಐಎಲ್ ದಾಖಲಾಗುತ್ತದೆ.

ಈ ಎಫ್ ಐ ಆರ್ ರಿಜಿಸ್ಟರ್ ಆಗಿದ್ದು ಮಾರ್ಚ್ 26ನೇ ತಾರೀಕು. ಸಂತ್ರಸ್ತ ಮಹಿಳೆ ಲಿಖಿತ ದೂರನ್ನ ಕೂಡ ನೀಡುತ್ತಾಳೆ. 30-3-2021 ರಂದು ಸಂತ್ರಸ್ತ ಮಹಿಳೆಯ ಹೇಳಿಕೆ ದಾಖಲಾಗುತ್ತದೆ. ಹೇಳಿಕೆ ರಮೇಶ್ ಜಾರಕಿಹೊಳಿ ಮಹಿಳೆಯ ನಂಬಿಕೆಯನ್ನ ದುರುಪಯೋಗ ಮಾಡಿಕೊಂಡಿರುವುದನ್ನ ಸೂಚಿಸುತ್ತದೆ. ಕೆಲಸ ಕೊಡಿಸುವುದಾಗಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಹೇಳಿಕೆಯಲ್ಲಿದೆ. ಕಾನೂನು ಪ್ರಕಾರ ರಮೇಶ್ ಜಾರಕಿಹೊಳಿ ಕೂಡಲೇ ಅರೆಸ್ಟ್ ಆಗಬೇಕಿತ್ತು. ಭಾರತ ದೇಶದಲ್ಲಿ ರೇಪ್ ಕೇಸ್ ಗೆ ಸಂಬಂಧಿಸಿದಂತೆ ಅರೆಸ್ಟ್ ಮಾಡದೇ ಇರುವುದು ಇದೇ ಕೇಸ್ ನಲ್ಲಿ ಮಾತ್ರ ಎಂದು ನಾಯಕರಿಬ್ಬರೂ ವ್ಯಾಖ್ಯಾನಿಸಿದ್ದಾರೆ.

ಸರ್ಕಾರದ ಸಂಪೂರ್ಣ ರಕ್ಷಣೆ ಇದ್ದ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳೆಯನ್ನ ಬಂಧಿಸಲಾಗಿಲ್ಲ. ಹೀಗಾಗಿ ರಮೇಶ್ ಆರಾಮಾಗಿ ಓಡಾಡುತ್ತಿದ್ದಾರೆ. ಇದಕ್ಕೆ ಕಾರಣ ಅರೆಸ್ಟ್ ಮಾಡಬೇಡಿ ಎಂದು ಪೊಲೀಸರಿಗೆ ಸರ್ಕಾರ ಮತ್ತು ರಮೇಶ್ ಜಾರಕಿಹೊಳಿ ಒತ್ತಡ ಹಾಕಿರುವುದು. ಇನ್ನು ಇತ್ತೀಚೆಗೆ ಎಸ್ಐಟಿ ಮುಖ್ಯಸ್ಥ ಸೌಮೇಂಧು ಮುಖರ್ಜಿಯನ್ನ ರಜೆಯ ಮೇಲೆ ಕಳುಹಿಸಲಾಗಿದೆ. ಈ ಮೂಲಕ ಎಸ್ಐಟಿ ಯನ್ನೇ ನಿಷ್ಕ್ರಿಯಗೊಳಿಸಿದ್ದಾರೆ.

ನಮಗಿರುವ ಮಾಹಿತಿ ಪ್ರಕಾರ ರಮೇಶ್ ಜಾರಕಿಹೊಳಿ ಹೋಮ್ ಮಿನಿಸ್ಟರ್ ಅನ್ನ ಭೇಟಿಯಾಗಿದ್ದಾರೆ. ಕೊನೆಯ ಶನಿವಾರ ಹುಬ್ಬಳಿಯಲ್ಲಿ ಗೃಹ ಸಚಿವರನ್ನ ಭೇಟಿಯಾಗಿ ಚರ್ಚೆ ಕೂಡ ಮಾಡಿದ್ದಾರೆ. 2 ಗಂಟೆಗಳ ಕಾಲ ಇಬ್ಬರೂ ಕೂಡ ಚರ್ಚೆ ನಡೆಸಿದ್ದಾರೆ. ಇವರ ಜೊತೆ ಕೇಂದ್ರದ ಮಂತ್ರಿ ಪ್ರಹಲ್ಹಾದ್ ಜೋಷಿಯವರನ್ನ ಕೂಡ ಭೇಟಿಯಾಗಿದ್ದಾರೆ. ಮೇಲ್ನೋಟಕ್ಕೆ ಸರ್ಕಾರ ಆರೋಪಿಯನ್ನ ರಕ್ಷಣೆ ಮಾಡುತ್ತಿದೆ ಎಂಬುದು ತಿಳಿಯುತ್ತದೆ. ಹೀಗಾಗಿ ರಮೇಶ್ ಜಾರಕಿಹೊಳಿಯನ್ನ ಬಂಧಿಸಲಾಗುತ್ತಿಲ್ಲ. 164 ಸಿಆರ್ ಪಿಸಿ ಪ್ರಕಾರ ಕೂಡಲೇ ರಮೇಶ್ ಜಾರಕಿಹೊಳಿಯನ್ನ ಬಂಧಿಸಲೇ ಬೇಕು. ಮೊದಲ ಬಾರಿಗೆ ರೇಪ್ ಆರೋಪ ಇರುವ ವ್ಯಕ್ತಿ ಗೃಹ ಸಚಿವರನ್ನ ಭೇಟಿಯಾಗಿ ಚರ್ಚೆ ಮಾಡಿರುವುದು ಇದೇ ಮೊದಲು.

ಇತ್ತಿಚೆಗೆ ಎಸ್ ಐ ಟಿ ಮುಂದೆ ಸಿಡಿಯಲ್ಲಿರುವುದು ನಾನೇ. ಅಲ್ಲಿರುವುದು ನಾನೇ, ಅವಳು ಅವಳೇ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಮಹಿಳೆಯ ಜತೆ ಒಪ್ಪಿಗೆ ಸೆಕ್ಸ್ ಮಾಡಿರುವುದಾಗಿ ಹೇಳಿದ್ದಾರೆ ಎಂದೂ ವರದಿಯಾಗಿದೆ. ಇದುವರೆಗೆ ಕೂಡ ರಮೇಶ್ ಜಾರಕಿಹೊಳಿಯ ಮೆಡಿಕಲ್ ಪರೀಕ್ಷೆ ಮಾಡಿಲ್ಲ. ಕೇವಲ ಬಿಪಿ, ಶುಗರ್ ಮಾಡಿದ್ದಾರೆ ಅಷ್ಟೇ.

53 ಎ ಸಿಆರ್ ಪಿಸಿ ಪ್ರಕಾರ ಮೆಡಿಕಲ್ ಪರೀಕ್ಷೆ ಕಡ್ಡಾಯ ಎಂದು ಕಾನೂನು ಹೇಳುತ್ತದೆ. ಆದರೆ ಇದುವರೆಗೆ ಕೂಡ ರಮೇಶ್ ಜಾರಕಿಹೊಳಿ ವೈದ್ಯಕೀಯ ಪರೀಕ್ಷೆ ಮಾಡಿಲ್ಲ. ಸುಪ್ರೀಂ ಕೋರ್ಟ್ ಕೂಡ ಈ ಬಗ್ಗೆ ಹೇಳಿದ್ದಾರೆ. ಫೊರೆನ್ಸಿಕ್ ಎಕ್ಸಾಮಿನೇಷ್ ಪ್ಲೇ ಇಂಪಾರ್ಟೆಂಟ್ ರೋಲ್ ಲಿಂಕಿಂಗ್ ದ ಕಲ್ಪ್ರಿಟ್ ವಿತ್ ದಿ ರೋಲ್ ಎಂದಿದ್ದಾರೆ. ಉದ್ದೇಶಪೂರ್ವಕವಾಗಿ ತನಿಖೆ ವಿಳಂಬ ಮಾಡುತ್ತಿದ್ದಾರೆ. 14 ಎ ಎವಿಡೆನ್ಸ್ ಅಕ್ಟ್ ಪ್ರಕಾರ ಪ್ರಿಸೆಮ್ಶನ್ ಬಗ್ಗೆ ಹೇಳುತ್ತಾರೆ. ಸಂತ್ರಸ್ತೆ ಒಪ್ಪಿತ ಸಂಬಂಧವಲ್ಲ ಎಂದರೆ ಅದನ್ನೇ ಆಧಾರವಾಗಿಟ್ಟುಕೊಳ್ಳಬೇಕು.

ಬಹಳ ರಾಮನ ಜಪ ಮಾಡುವ ಈ ಸರ್ಕಾರ, ಮಹಿಳೆಯರ ಬಗ್ಗೆ ಮಾತನಾಡುವ ಸರ್ಕಾರ ಕಾನೂನನ್ನೇ ತಿರುಚಿದೆ. ರಮೇಶ್ ಬಿಜೆಪಿ ಸರ್ಕಾರ ಬರಲು ಸಹಾಯ ಮಾಡಿದ್ದರು. ಇದಕ್ಕೆ ಪ್ರತ್ಯುಪಕಾರವಾಗಿ ಸರ್ಕಾರ ಇದನ್ನ ಮಾಡುತ್ತಿದೆ. ನಾನು ಈ ಸನ್ನಿವೇಶದಲ್ಲಿ ಗೃಹ ಸಚಿವರು ರಮೇಶ್ ಜಾರಕಿಹೊಳಿ ಜೊತೆ ಚರ್ಚೆ ಮಾಡಿರುವುದರಿಂದ ಮೇಲ್ನೋಟಕ್ಕೆ ಬಸವರಾಜ್ ಬೊಮ್ಮಾಯಿ, ರಮೇಶ್ ಜಾರಕಿಹೊಳಿಯನ್ನ ಕಾಪಾಡುತ್ತಿದ್ದಾರೆ ಎಂಬುದು ಕಾಣಿಸುತ್ತಿದೆ. ಅದಕ್ಕಾಗಿಯೇ ರಮೇಶ್ ಜಾರಕಿಹೊಳಿಯನ್ನ ಬಂಧಿಸಿಲ್ಲ. ಗೃಹ ಸಚಿವರಾಗಿ ಮುಂದುವರಿಯಲು ಬಸವರಾಜ್ ಬೊಮ್ಮಾಯಿಗೆ ಯಾವುದೇ ನೈತಿಕತೆ ಇಲ್ಲ. ಹೀಗಾಗಿ ಬಸವರಾಜ್ ಬೊಮ್ಮಾಯಿ ರಾಜೀನಾಮೆಗೆ ನಾನು ಆಗ್ರಹಿಸುತ್ತೇನೆ. ಈ ಕಾರಣಕ್ಕಾಗಿಯೇ ಸ್ವತಂತ್ರ ಸಂಸ್ಥೆ ಮೂಲಕ ಹೈಕೋರ್ಟ್ ಪರಿವೀಕ್ಷಣೆಯಲ್ಲಿ ತನಿಖೆ ನಡೆಸ ಬೇಕು. ಆರೋಪಿ ರಮೇಶ್ ಜಾರಕಿಹೊಳಿ ಕೂಡಲೇ ಬಂಧಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

(opposition leader siddaramaiah demands basavaraja bommai resignation and arrest of ramesh jarkiholi in press meet)