ಭುಗಿಲೆದ್ದ ಭೂಮಿ ಕಳೆದುಕೊಂಡ ರೈತರ ಆಕ್ರೋಶ: ಬೆಳಗಾವಿ ನೀರಾವರಿ ಕಚೇರಿಗೆ ನುಗ್ಗಿ ಪ್ರತಿಭಟನೆ

ಜೀವನಕ್ಕೆ ಆಧಾರವಾಗಿದ್ದ ಭೂಮಿ ಕಳೆದುಕೊಂಡವರು ಪರಿಹಾರಕ್ಕಾಗಿ ಕಚೇರಿ ಕಚೇರಿ ಅಲೆಯುತ್ತಿದ್ದಾರೆ. ಪರಿಹಾರಕ್ಕಾಗಿ ಕೋರ್ಟ್ ಮೆಟ್ಟಿಲೇರಿದವರಿಗೆ ಪರಿಹಾರದ ಭರವಸೆ ಕೂಡ ಸಿಕ್ಕಿತ್ತು. ಆದರೆ ಅಧಿಕಾರಿಗಳ ಬೇಜವಾಬ್ದಾರಿಗೆ ಸಿಗದ ಪರಿಹಾರ ಇಂದು ಅವರ ಆಕ್ರೋಶದ ಕಟ್ಟೆ ಒಡೆದಿತ್ತು. ಹೀಗಾಗಿ ಇಂದು ಬೆಳಗ್ಗೆ ಊರುಗಳಿಂದಲೇ ಜಾನುವಾರುಗಳ ಸಮೇತ ಕಚೇರಿಗೆ ನುಗ್ಗಿ ಒಳ ಭಾಗದಲ್ಲೇ ಕುಟುಂಬ ಸಮೇತ ಹೋರಾಟಕ್ಕೆ ಕುಳಿತಿದ್ದಾರೆ.

ಭುಗಿಲೆದ್ದ ಭೂಮಿ ಕಳೆದುಕೊಂಡ ರೈತರ ಆಕ್ರೋಶ: ಬೆಳಗಾವಿ ನೀರಾವರಿ ಕಚೇರಿಗೆ ನುಗ್ಗಿ ಪ್ರತಿಭಟನೆ
ರೈತರ ಪ್ರತಿಭಟನೆ
Edited By:

Updated on: Mar 11, 2024 | 9:38 PM

ಬೆಳಗಾವಿ, ಮಾರ್ಚ್​​ 11: ನಾಲ್ಕು ದಶಕಗಳಿಂದ ಭೂಮಿ ಕಳೆದುಕೊಂಡ ಹಿಡಕಲ್ ಜಲಾಶಯ (Hidkal Dam) ದ ಸಂತ್ರಸ್ತರು. ಜೀವನಕ್ಕೆ ಆಧಾರವಾಗಿದ್ದ ಭೂಮಿ ಕಳೆದುಕೊಂಡವರು ಪರಿಹಾರಕ್ಕಾಗಿ ಕಚೇರಿ ಕಚೇರಿ ಅಲೆಯುತ್ತಿದ್ದಾರೆ. ಪರಿಹಾರಕ್ಕಾಗಿ ಕೋರ್ಟ್ ಮೆಟ್ಟಿಲೇರಿದವರಿಗೆ ಪರಿಹಾರದ ಭರವಸೆ ಕೂಡ ಸಿಕ್ಕಿತ್ತು. ಆದರೆ ಅಧಿಕಾರಿಗಳ ಬೇಜವಾಬ್ದಾರಿಗೆ ಸಿಗದ ಪರಿಹಾರ ಇಂದು ಅವರ ಆಕ್ರೋಶದ ಕಟ್ಟೆ ಒಡೆದಿತ್ತು. ಹೀಗಾಗಿ ಇಂದು ಬೆಳಗ್ಗೆ ಊರುಗಳಿಂದಲೇ ಜಾನುವಾರುಗಳ ಸಮೇತ ಬೆಳಗಾವಿ ಚನ್ನಮ್ಮ ವೃತ್ತಕ್ಕೆ ಆಗಮಿಸಿದ ರೈತರು ಅಲ್ಲಿಂದ ಮೆರವಣಿಗೆ ಮೂಲಕ ಹೊರಟ ನೀರಾವರಿ ಕಚೇರಿ ತಲುಪಿದರು. ಕಚೇರಿಗೆ ನುಗ್ಗಿ ಒಳ ಭಾಗದಲ್ಲೇ ಕುಟುಂಬ ಸಮೇತ ಹೋರಾಟಕ್ಕೆ ಕುಳಿತಿದ್ದಾರೆ.

ಬಳಿಕ ರೈತರ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಭೇಟಿ ನೀಡಿದ್ದು, ರೈತರ ಜೊತೆ ನಿತೇಶ್ ಪಾಟೀಲ್ ಸಂಧಾನ ಸಭೆ ವಿಫಲವಾಗಿದೆ. ನೀರಾವರಿ ಇಲಾಖೆ ವಿರುದ್ಧ ರೈತ ಮಹಿಳೆಯರು ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: ಬರಿದಾಗುತ್ತಿದೆ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ಜೀವನಾಡಿ ಹಿಡಕಲ್ ಜಲಾಶಯ

ರೈತರ ಜೊತೆಗಿನ ಸಂಧಾನ ಸಭೆ ವಿಫಲ ಹಿನ್ನೆಲೆ ನೀರಾವರಿ ಇಲಾಖೆ ಅಧಿಕಾರಿಗಳ ಜೊತೆ ಡಿಸಿ ನಿತೇಶ್ ಪಾಟೀಲ್ ಸಭೆ ಮಾಡಿದರು. ಪರಿಹಾರ ಸಿಗುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ.

ಡಿಸಿ ನಿತೇಶ್ ಪಾಟೀಲ್ ಹೇಳಿದ್ದಿಷ್ಟು 

ಅಧಿಕಾರಿಗಳ ಸಭೆ ಬಳಿಕ ಬೆಳಗಾವಿ ಡಿಸಿ ನಿತೇಶ್ ಪಾಟೀಲ್​ ಪ್ರತಿಕ್ರಿಯಿಸಿದ್ದು, ಮಾಸ್ತಿಹೊಳಿ ಗ್ರಾಮದಲ್ಲಿ 394 ಎಕರೆ ಜಮೀನನ್ನ ಹಿಡಕಲ್ ಜಲಾಶಯಕ್ಕೆ ಭೂಸ್ವಾಧೀನ ಸಂಬಂಧಿಸಿದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ.
ರೈತರೊಂದಿಗೆ ನಾಲ್ಕು ಗಂಟೆಗಳ ಕಾಲ ಸುದೀರ್ಘ ಚರ್ಚೆ ಮಾಡಿದ್ದೇವೆ. 137ಎಕರೆ 09ಗುಂಟೆಗೆ ಯಾವುದೇ ಭೂ‌ಸ್ವಾಧೀನ ಆಗಿರುವ ಬಗ್ಗೆ ದಾಖಲೆ ಇಲ್ಲ. 156ಎಕರೆಗೂ ಪೇಮೆಂಟ್ ರಿಸಿವ್ಡ್ ಗೆ ಬಗ್ಗೆ ಯಾವುದೇ ದಾಖಲೆಗಳು ಇಲ್ಲ. ಹೀಗಾಗಿ ಹೊಸ ಭೂಸ್ವಾಧೀನ ನಿಯಮದಂತೆ ಹೊಸ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ರೈತರ ಬೇಡಿಕೆ ಇದೆ ಎಂದಿದ್ದಾರೆ.

ಇದನ್ನೂ ಓದಿ: 30 ಅಡಿ ಆಳದ ಬಾವಿಗೆ ಮೆಟ್ಟಿಲುಗಳೇ ಇಲ್ಲ! ಜೀವ ಭಯದಲ್ಲೇ ಜೀವ ಜಲ ತುಂಬಿಸಿಕೊಳ್ಳುವ ಅನಿವಾರ್ಯತೆ ಈ ಮಹಿಳೆಯರದ್ದು

ಇದರ ಬಗ್ಗೆಯೂ ಸರ್ಕಾರದ ನೀರಾವರಿ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ಮಾಡಲಾಗಿದೆ. ಇವತ್ತೆ ಹೊಸ ಪ್ರಸ್ತಾನೆ ಕಳುಹಿಸಲು ಅಧಿಕಾರಿಗಳು ಒಪ್ಪಿದ್ದಾರೆ. ರಾತ್ರಿ ಎಷ್ಟೇ ಸಮಯವಾದರೂ ಕೂಡ ಇಂದೇ ಹೊಸ ಪ್ರಸ್ತಾವನೆ ಬರುತ್ತೆ. ರೈತರ ಹಿತದೃಷ್ಟಿಯಿಂದ ಇವತ್ತು ರಾತ್ರಿಯೇ ಹೊಸ ಪ್ರಸ್ತಾವನೆಯನ್ನ ರೆಡಿ ಮಾಡಿ ಕೊಡುತ್ತಾರೆ. ರೈತರು ಪ್ರತಿಭಟನೆ ಕೈಬಿಡಬೇಕೆಂದು ಮನವಿ ಮಾಡಿದ್ದೇವೆ. ಅಧಿಕಾರಿಗಳ ವಿರುದ್ಧ ರೈತರ ಏನೇ ದೂರುಗಳಿದ್ದರೂ ಸೂಕ್ತ ಕ್ರಮ ಕೈಗೊಳ್ಳಲಾಗುತ್ತೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.