AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು: ತಾಲೂಕು ಆಡಳಿತದ ಆದೇಶ ಧಿಕ್ಕರಿಸಿ ಗಾರ್ಮೆಂಟ್ಸ್ ಓಪನ್; ಗಾರ್ಮೆಂಟ್ ಸಿಬ್ಬಂದಿ ಸೋಂಕಿಗೆ ಬಲಿ

ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನಾದ್ಯಂತ ಕೊರೊನಾ ಸೋಂಕು ಹೆಚ್ಚಾದ ಕಾರಣ ಗಾರ್ಮೆಂಟ್ಸ್ ಮುಚ್ಚುವಂತೆ ತಾಲೂಕು ಆಡಳಿತ ಆದೇಶ ನೀಡಿತ್ತು. ತಾಲೂಕು ಆಡಳಿತದ ಆದೇಶ ಉಲ್ಲಂಘನೆ ಮಾಡಿ ಶಾಹಿ ಗಾರ್ಮೆಂಟ್ಸ್ ಮಾಲೀಕರು ಕೆಲಸ ನಿರ್ವಹಿಸುತ್ತಿದ್ದರು.

ಮೈಸೂರು: ತಾಲೂಕು ಆಡಳಿತದ ಆದೇಶ ಧಿಕ್ಕರಿಸಿ ಗಾರ್ಮೆಂಟ್ಸ್ ಓಪನ್; ಗಾರ್ಮೆಂಟ್ ಸಿಬ್ಬಂದಿ ಸೋಂಕಿಗೆ ಬಲಿ
ಶಾಹಿ ಗಾರ್ಮೆಂಟ್ಸ್ ಮಾಲೀಕರ ವಿರುದ್ಧ ಸಾರ್ವಜನಿಕರ ಆಕ್ರೋಶ
sandhya thejappa
|

Updated on: May 09, 2021 | 11:25 AM

Share

ಮೈಸೂರು: ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಮೈಸೂರು ಜಿಲ್ಲೆ ಕೊರೊನಾ ಹಾಟ್ಸ್ಪಾಟ್ ಆಗಿದೆ. ಹೀಗಿದ್ದೂ ಕೆಲ ಜನರು ಮಾತ್ರ ಕೊರೊನಾ ಬಗ್ಗೆ ಇನ್ನೂ ನಿರ್ಲಕ್ಷ್ಯ ತೋರುತ್ತಿದ್ದಾರೆ. ಹೀಗೆ ಬೇಜಾವಾಬ್ದಾರಿಯಿಂದ ತೋರಿದ್ದ ಗಾರ್ಮೆಂಟ್ಸ್ ಸಿಬ್ಬಂದಿಯನ್ನು ಕೊರೊನಾ ಸೋಂಕು ಬಲಿ ತೆಗೆದುಕೊಂಡಿದೆ. ಮೃತ ಮಹಿಳೆ ಟಿ.ದೊಡ್ಡಪುರ ಗ್ರಾಮದ ಗೀತಾ ಎಂದು ತಿಳಿದುಬಂದಿದೆ.

ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನಾದ್ಯಂತ ಕೊರೊನಾ ಸೋಂಕು ಹೆಚ್ಚಾದ ಕಾರಣ ಗಾರ್ಮೆಂಟ್ಸ್ ಮುಚ್ಚುವಂತೆ ತಾಲೂಕು ಆಡಳಿತ ಆದೇಶ ನೀಡಿತ್ತು. ತಾಲೂಕು ಆಡಳಿತದ ಆದೇಶ ಉಲ್ಲಂಘನೆ ಮಾಡಿ ಶಾಹಿ ಗಾರ್ಮೆಂಟ್ಸ್ ಮಾಲೀಕರು ಕೆಲಸ ನಿರ್ವಹಿಸುತ್ತಿದ್ದರು. ಗಾರ್ಮೆಂಟ್ಸ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದ 36 ವರ್ಷದ ಮಹಿಳೆ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದು, ಇದೀಗ ಗಾರ್ಮೆಂಟ್ಸ್​ನ ಎಲ್ಲ ಸಿಬ್ಬಂದಿಗೂ ಕೊರೊನಾ ಆತಂಕ ಎದುರಾಗಿದೆ. ಸಾರ್ವಜನಿಕರು, ಗ್ರಾಮಸ್ಥರ ವಿರೋಧದ ನಡುವೆಯು ಕೆಲಸ ನಿರ್ವಹಿಸುತ್ತಿರುವ ಶಾಹಿ ಗಾರ್ಮೆಂಟ್ಸ್ ನಡೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಮಾರುಕಟ್ಟೆಯಲ್ಲಿ ಜನಜಂಗುಳಿ ಕೊರೊನಾ ಸೋಂಕಿನ ನಡುವೆ ಜನರು ಮಾರುಕಟ್ಟೆಯಲ್ಲಿ ಗುಂಪು ಗುಂಪಾಗಿ ದಿನಸಿ ಖರೀದಿ ಮಾಡಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸಂತೇಪೇಟೆ ಶಿವರಾಂಪೇಟೆ ಮಾರುಕಟ್ಟೆಯಲ್ಲಿ ಜನರು ಅಗತ್ಯ ವಸ್ತುಗಳನ್ನು ಖರೀದಿಸಿದ್ದಾರೆ. ಮಾರುಕಟ್ಟಿಗೆ ಬಂದ ಜನರನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸ ಪಟ್ಟರು.

ಇದನ್ನೂ ಓದಿ

ಚಿಕಿತ್ಸೆ ಫಲಿಸದೇ ತುಮಕೂರು ವಾರ್ತಾ ಇಲಾಖೆ ಉಪನಿರ್ದೇಶಕ ಮಂಜುನಾಥ್​ ಕೊರೊನಾ ಸೋಂಕಿಗೆ ಬಲಿ

24 ಗಂಟೆಯಲ್ಲಿ 4,092 ಮಂದಿ ಕೊರೊನಾ ಸೋಂಕಿನಿಂದ ಸಾವು; 4 ಲಕ್ಷಕ್ಕೂ ಅಧಿಕ ಹೊಸ ಪ್ರಕರಣಗಳು ದಾಖಲು

(owner has opened Garments in violation of the Taluk rule and garment staff has died of corona infection at mysuru)