ಮೈಸೂರು: ನಗರದಲ್ಲಿ ಆಕ್ಸಿಜನ್ ಕೊರತೆ ಹಿನ್ನೆಲೆಯಲ್ಲಿ ಆಕ್ಸಿಜನ್ ಕೊರತೆ ನೀಗಿಸಲು ಯೆಶ್ ಟೆಲ್ ಸಮೂಹ ಸಂಸ್ಥೆ ಮುಂದಾಗಿದೆ. ಹೋಂ ಐಸೋಲೇಷನ್ನಲ್ಲಿರುವ ಕೊರೊನಾ ಸೋಂಕಿತರಿಗೆ ಉಚಿತ ಆಕ್ಸಿಜನ್ ಸೇವೆ ನೀಡಲು ಸಂಸ್ಥೆ ಮುಂದಾಗಿದೆ. ವೀ ಕೇರ್ ಮೈಸೂರು ಸಂಸ್ಥೆ ಸಹಯೋಗದಲ್ಲಿ ಉಚಿತ ಆಕ್ಸಿಜನ್ ಸೇವೆ ಲಭ್ಯವಾಗಲಿದೆ. ಆವಶ್ಯಕತೆ ಇದ್ದವರ ಮನೆ ಬಾಗಿಲಿಗೆ ಆಕ್ಸಿಜನ್ ಸಿಗಲಿದೆ.
10ಕ್ಕೂ ಹೆಚ್ಚು ಆಕ್ಸಿಜನ್ ಕಾಂನ್ಸನ್ಟ್ರೇಟರ್ಗಳಿಂದ ಆಕ್ಸಿಜನ್ ಸೇವೆ ನೀಡಲಾಗುತ್ತದೆ. ಯೆಶ್ ಟೆಲ್ ಸಮೂಹ ಸಂಸ್ಥೆ ಮಂಜುನಾಥ್‌ರಿಂದ ಆಕ್ಸಿಜನ್ ಕಾಂನ್ಸನ್ಟ್ರೇಟರ್ ಪೂರೈಕೆ ಮಾಡಲಾಗಿದೆ.
ಹುಬ್ಬಳ್ಳಿ: ಆಕ್ಸಿಜನ್ ಬಸ್‌ಗೆ ಪ್ರಹ್ಲಾದ್ ಜೋಶಿ ಚಾಲನೆ
ಹುಬ್ಬಳ್ಳಿಯಲ್ಲಿ ಆಕ್ಸಿಜನ್ ಬಸ್‌ಗೆ ಪ್ರಹ್ಲಾದ್ ಜೋಶಿ ಚಾಲನೆ ನೀಡಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯಿಂದ ಚಾಲನೆ ನೀಡಲಾಗಿದೆ. ಲಾಕ್‌ಡೌನ್ ಬಗ್ಗೆ ಸರ್ಕಾರ ಸೂಕ್ತ ತೀರ್ಮಾನ ಮಾಡುತ್ತದೆ. ಮೇ 21 ಅಥವಾ 22ರಂದು ನಿರ್ಧಾರ ತೆಗೆದುಕೊಳ್ಳಬಹುದು. ಕೊವಿಡ್ ಪಾಸಿಟಿವಿಟಿ ಕಡಿಮೆ ಆಗದಿದ್ರೆ ಕೆಲ ದಿನಗಳ ಕಾಲ ಲಾಕ್‌ಡೌನ್ ಮುಂದುವರಿಸಬೇಕಾಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ನೀಡಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆ ವಿಚಾರವಾಗಿ ಜೋಶಿ ಮಾತನಾಡಿದ್ದಾರೆ. ಇದೊಂದು ಸೈಡ್ ಎಫೆಕ್ಟ್ ಆಗಿದೆ. ಇದಕ್ಕೆ ಕೆಲ ಔಷಧಿ ಬೇಕೆಂದು ವೈದ್ಯರಿಂದ ಬೇಡಿಕೆ ಬಂದಿದೆ. ಕೇಂದ್ರದ ಜೊತೆ ಚರ್ಚಿಸಿ ಔಷಧ ವ್ಯವಸ್ಥೆಗೆ ಪ್ರಯತ್ನಿಸುತ್ತೇನೆ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ನೀಡಿದ್ದಾರೆ.
ಕರ್ನಾಟಕ ಕೊರೊನಾ ಪ್ರಕರಣಗಳು ಹೀಗಿವೆ
ಕರ್ನಾಟಕ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 38,603 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದೆ. ಸೋಂಕಿನಿಂದ 476 ಜನರು ನಿಧನರಾಗಿದ್ದಾರೆ. ಇದೇ ಅವಧಿಯಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ 13,338 ಜನರಿಗೆ ಕೊವಿಡ್ ದೃಢಪಟ್ಟಿದ್ದು, 239 ಜನರು ಅಸುನೀಗಿದ್ದಾರೆ. ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ 34,635 ಜನರು ಕೊವಿಡ್ ಸೋಂಕುಮುಕ್ತರಾಗಿ ಆಸ್ಪತ್ರೆಗಳಿಂದ ಗುಣಮುಖರಾಗಿ ಮನೆಗೆ ಹಿಂತಿರುಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಪತ್ತೆಯಾದ ಕೊರೊನಾ ಸೋಂಕಿತರನ್ನೂ ಸೇರಿಸಿ ಈವರೆಗೆ ರಾಜ್ಯದ ಕೊವಿಡ್ ಸೋಂಕಿತರ ಸಂಖ್ಯೆ 22,42,065ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ ಈವರೆಗೆ 16,16,092 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಕೊರೊನಾದಿಂದ 22,313 ಜನರ ಸಾವನ್ನಪ್ಪಿದಂತಾಗಿದೆ. ಸದ್ಯ ರಾಜ್ಯದ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ 6, 03,639 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಕೊವಿಶೀಲ್ಡ್ ಲಸಿಕೆ ಪಡೆದ ಬಳಿಕ ಈ ಸಮಸ್ಯೆಗಳು ಕಂಡುಬಂದರೆ ಎಚ್ಚರವಹಿಸಿ; ಕೇಂದ್ರ ಆರೋಗ್ಯ ಇಲಾಖೆ ಸೂಚನೆ
ಡಿಸೆಂಬರ್ ಅಂತ್ಯದೊಳಗೆ ದೇಶದ ಎಲ್ಲರಿಗೂ ಲಸಿಕೆ; ಕ್ಯಾಲೆಂಡರ್ ಆಫ್ ಇವೆಂಟ್ಸ್ ಸಿದ್ಧಪಡಿಸುತ್ತಿರುವ ಕೇಂದ್ರ
Published On - 9:26 pm, Mon, 17 May 21