AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Elderline: ವಯೋವೃದ್ಧರೇ ಗಮನಿಸಿ, ನಿಮಗಾಗಿಯೇ ಇದೆ ಉಚಿತ ಸಹಾಯವಾಣಿ 14567

ಕೊವಿಡ್​ ಲಾಕ್​ಡೌನ್​ನಿಂದ ಆರೋಗ್ಯದಲ್ಲಿ ಬದಲಾವಣೆ ಅಥವಾ ತೊಂದರೆ, ಔಷಧದ ಕುರಿತು ಮಾಹಿತಿ ಇಲ್ಲದೇ, ಮನೆಯಿಂದ ಹೊರಬೀಳಲೂ ಸಾಧ್ಯವಿಲ್ಲದೇ ಇದ್ದಂತಹ ವಯೋವೃದ್ಧರ ಪಾಲಿಗೆ 14567 ಸಹಾಯವಾಣಿ ಅತ್ಯಂತ ಉಪಯೋಗಕಾರಿಯಾಗುವುದಂತೂ ಖಚಿತ.

Elderline: ವಯೋವೃದ್ಧರೇ ಗಮನಿಸಿ, ನಿಮಗಾಗಿಯೇ ಇದೆ ಉಚಿತ ಸಹಾಯವಾಣಿ 14567
ಸಹಾಯವಾಣಿ
guruganesh bhat
| Updated By: Skanda|

Updated on: May 18, 2021 | 6:50 AM

Share

ದೇಶದಲ್ಲಿ ಕೊವಿಡ್ ಸೋಂಕು ತೀವ್ರವಾಗಿ ಹೆಚ್ಚಳವಾಗುತ್ತಿರುವ ಹೊತ್ತಲ್ಲೇ ಕೇಂದ್ರ ಸರ್ಕಾರ ವಯೋವೃದ್ಧರ ಸಹಾಯಕ್ಕಾಗಿ ವಿಶೇಷ ಸಹಾಯವಾಣಿ ಆರಂಭಿಸಿದೆ. ಕೊವಿಡ್ ಆಸ್ಪತ್ರೆ, ಬೆಡ್, ಆಕ್ಸಿಜನ್, ಊಟ, ಮಾಹಿತಿ ಸೇರಿದಂತೆ ಅಗತ್ಯ ಮಾಹಿತಿ ಒದಗಿಸಲು ಉಚಿತ ಸಹಾಯವಾಣಿ ಆರಂಭಿಸಲಾಗಿದೆ. ವಯೋವೃದ್ಧರು ಬೆಳಗ್ಗೆ 9:30ರಿಂದ ಸಂಜೆ 5:30ರ ಒಳಗೆ 14567 ಕ್ಕೆ ಕರೆ ಮಾಡಿದರೆ ಅಗತ್ಯ ಇರುವ ಮಾಹಿತಿಯನ್ನು ಸಿಬ್ಬಂದಿ ದೂರವಾಣಿ ಮೂಲಕವೇ ಒದಗಿಸಲಿದ್ದಾರೆ.

ವಯೋವೃದ್ಧರಿಗೆ ವೈದ್ಯಕೀಯ ತುರ್ತು ಅಗತ್ಯಗಳಿದ್ದಲ್ಲಿ, ಕಾನೂನು ಸೇವೆ, ಆಸ್ತಿ ಮೋಸ, ಮಕ್ಕಳಿಗೆ ಆಸ್ತಿ ಹಂಚಿಕೆಯಂತಹ ಮಾಹಿತಿಯನ್ನೂ ಸೇರಿ ಯಾವುದೇ ಬಗೆಯ ಮಾಹಿತಿಯನ್ನು ಸಹ ಪರಿಣಿತರು ತಿಳಿಸಿಕೊಡಲಿದ್ದಾರೆ. ಮಾಹಿತಿಯೊಂದೇ ಅಲ್ಲದೇ, ಯಾವುದೇ ವಯೋವೃದ್ಧರಿಗೆ ನೇರವಾಗಿ ಸಹಾಯ ಅಗತ್ಯ ಇದ್ದಲ್ಲಿ ಫೀಲ್ಡ್ ರೆಸ್ಪಾನ್ಸ್ ಅಧಿಕಾರಿಗಳು ವಯೋವೃದ್ಧರ ನೆರವಿಗೆ ಧಾವಿಸಲಿದ್ದಾರೆ. ಕೇಂದ್ರ ಸರ್ಕಾರದ ಜತೆ ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ ಸಹಯೋಗದಲ್ಲಿ ಈ ಸಹಾಯವಾಣಿ ಕಾರ್ಯನಿರ್ವಹಿಸಿದೆ. ಸದ್ಯ ಪ್ರಾಯೋಗಿಕವಾಗಿ ಈ ಸಹಾಯವಾಣಿಯನ್ನು ಆರಂಭಿಸಲಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಈ ಸಹಾಯವಾಣಿ ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿದೆ.

ಕೊವಿಡ್​ ಲಾಕ್​ಡೌನ್​ನಿಂದ ಆರೋಗ್ಯದಲ್ಲಿ ಬದಲಾವಣೆ ಅಥವಾ ತೊಂದರೆ, ಔಷಧದ ಕುರಿತು ಮಾಹಿತಿ ಇಲ್ಲದೇ, ಮನೆಯಿಂದ ಹೊರಬೀಳಲೂ ಸಾಧ್ಯವಿಲ್ಲದೇ ಇದ್ದಂತಹ ವಯೋವೃದ್ಧರ ಪಾಲಿಗೆ 14567 ಸಹಾಯವಾಣಿ ಅತ್ಯಂತ ಉಪಯೋಗಕಾರಿಯಾಗುವುದಂತೂ ಖಚಿತ.

ಇದನ್ನೂ ಓದಿ: ಬೆಂಗಳೂರು ದಕ್ಷಿಣ ಭಾಗದವರು ಆಕ್ಸಿಜನ್ ಬೇಕಿದ್ದಲ್ಲಿ 080- 61914960ಕ್ಕೆ ಕರೆ ಮಾಡಿ: ಸಂಸದ ತೇಜಸ್ವಿ ಸೂರ್ಯ

Miss Universe 2021 Winner: ಕೊವಿಡ್​ ಸಂಬಂಧಿತ ಪ್ರಶ್ನೆಗೆ ಉತ್ತರಿಸಿ ಮಿಸ್​ ಯೂನಿವರ್ಸ್​ ಕಿರೀಟ ಮುಡಿಗೇರಿಸಿಕೊಂಡ ಆ್ಯಂಡ್ರಿಯಾ ಮೆಜಾ

(Elderline helpline 14567 started by centre govt)

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!