ಮಹಾಶಿವರಾತ್ರಿ ಹಬ್ಬದಂದು ಫ್ರೀಡಂಪಾರ್ಕ್‌ನಲ್ಲಿ ಪಂಚಮಸಾಲಿಗರ ವಿಶೇಷ ಪೂಜೆ ಕಂ ಜಾಗರಣೆ ಧರಣಿ!

|

Updated on: Mar 11, 2021 | 11:11 PM

ಮಹಾಶಿವರಾತ್ರಿ ಹಬ್ಬದಂದು ಭಕ್ತಾದಿಗಳು ದೇವಸ್ಥಾನಕ್ಕೆ ಭೇಟಿಕೊಟ್ಟು ಜಾಗರಣೆ ಮಾಡುತ್ತಾ ಶಿವಸ್ತುತಿಯಲ್ಲಿ ತೊಡಗಿದ್ದಾರೆ. ಇತ್ತ, 2A ಮೀಸಲಾತಿಗಾಗಿ ಧರಣಿಗೆ ಮುಂದಾಗಿರುವ ಪಂಚಮಸಾಲಿ ಸಮುದಾಯದವರು ಸಹ ಶಿವರಾತ್ರಿಯನ್ನು ಕೊಂಚ ಡಿಫರೆಂಟ್​ ಆಗಿ ಆಚರಿಸೋಕೆ ಸಜ್ಜಾಗಿದ್ದಾರೆ.

ಮಹಾಶಿವರಾತ್ರಿ ಹಬ್ಬದಂದು ಫ್ರೀಡಂಪಾರ್ಕ್‌ನಲ್ಲಿ ಪಂಚಮಸಾಲಿಗರ ವಿಶೇಷ ಪೂಜೆ ಕಂ ಜಾಗರಣೆ ಧರಣಿ!
ಫ್ರೀಡಂಪಾರ್ಕ್‌ನಲ್ಲಿ ಪಂಚಮಸಾಲಿಗರ ವಿಶೇಷ ಪೂಜೆ ಕಂ ಜಾಗರಣೆ ಧರಣಿ
Follow us on

ಬೆಂಗಳೂರು: ಮಹಾಶಿವರಾತ್ರಿ ಹಬ್ಬದಂದು ಭಕ್ತಾದಿಗಳು ದೇವಸ್ಥಾನಕ್ಕೆ ಭೇಟಿಕೊಟ್ಟು ಜಾಗರಣೆ ಮಾಡುತ್ತಾ ಶಿವಸ್ತುತಿಯಲ್ಲಿ ತೊಡಗಿದ್ದಾರೆ. ಇತ್ತ, 2A ಮೀಸಲಾತಿಗಾಗಿ ಧರಣಿಗೆ ಮುಂದಾಗಿರುವ ಪಂಚಮಸಾಲಿ ಸಮುದಾಯದವರು ಸಹ ಶಿವರಾತ್ರಿಯನ್ನು ಕೊಂಚ ಡಿಫರೆಂಟ್​ ಆಗಿ ಆಚರಿಸೋಕೆ ಸಜ್ಜಾಗಿದ್ದಾರೆ.

ಪೂಜೆ ಕಂ ಧರಣಿಯ ನೇತೃತ್ವ ವಹಿಸಿದ ಜಯಮೃತ್ಯುಂಜಯಶ್ರೀ

ಫ್ರೀಡಂಪಾರ್ಕ್‌ನಲ್ಲಿ ಪಂಚಮಸಾಲಿಗರ ವಿಶೇಷ ಪೂಜೆ ಕಂ ಜಾಗರಣೆ ಧರಣಿ

ಹೌದು, ಶಿವರಾತ್ರಿ ಹಬ್ಬದ ಪ್ರಯುಕ್ತ ಪಂಚಮಸಾಲಿಗರು ವಿಶೇಷ ಪೂಜೆ ಜೊತೆ ಪ್ರತಿಭಟನೆ ಸಹ ಮುಂದುವರಿಸಿದರು. ಫ್ರೀಡಂಪಾರ್ಕ್‌ನಲ್ಲಿ ನಡೆಯುತ್ತಿರುವ ಈ ವಿಭಿನ್ನ ಪೂಜೆ ಕಂ ಧರಣಿಗೆ ಜಯಮೃತ್ಯುಂಜಯಶ್ರೀಗಳು ನೇತೃತ್ವ ವಹಿಸಿದ್ದಾರೆ.

ಪೂಜೆಯಲ್ಲಿ ಭಾಗವಹಿಸಿದ ಚಿಣ್ಣರು

ಸಮುದಾಯದವರು ಇಂದು ರಾತ್ರಿ ಜಾಗರಣೆ ನಡೆಸುವ ಮೂಲಕ ಪ್ರತಿಭಟನೆಗೆ ಮುಂದಾಗಿದ್ದಾರೆ. ಇನ್ನು, ಈ ವೇಳೆ ಮಾತನಾಡಿದ ಶ್ರೀಗಳು ಪೂಜೆ ಬಳಿಕ ಜಾಗರಣೆ ಮಾಡಿ ಜಾಗರೂಕತೆಯಿಂದ ಮುಂದಿನ ಹೆಜ್ಜೆ ಇಡಬೇಕು ಎಂದು ಹೇಳಿದರು. ಮುಂದಿನ ದಿನಗಳಲ್ಲಿ ತೀವ್ರ ಹೋರಟ ಸಹ ನಡೆಸಬೇಕು ಎಂದು ಸ್ವಾಮೀಜಿ ಹೇಳಿದರು.

ಜಯಮೃತ್ಯುಂಜಯಶ್ರೀ

ಧರಣಿಯಲ್ಲಿ ಪಾಲ್ಗೊಂಡ ಪಂಚಮಸಾಲಿಗ ಸಮುದಾಯದ ಸದಸ್ಯರು

ಇದನ್ನೂ ಓದಿ: ಸ್ವಲ್ಪದರಲ್ಲಿ ತಪ್ಪಿತು ಭಾರಿ ಗಂಡಾಂತರ: ಶಿವಮೊಗ್ಗದಿಂದ ತೊಲಗಿತು ದಕ್ಷಿಣ ಆಫ್ರಿಕಾ ರೂಪಾಂತರ