ಯುವನಿಧಿ ಯೋಜನೆ ಲಾಂಚ್ ಕಾರ್ಯಕ್ರಮ ಅದ್ದೂರಿ ಆದರೆ ಊಟದ ವ್ಯವಸ್ಥೆ ಅಸ್ತವ್ಯಸ್ತ!

ಯುವನಿಧಿ ಯೋಜನೆ ಲಾಂಚ್ ಕಾರ್ಯಕ್ರಮ ಅದ್ದೂರಿ ಆದರೆ ಊಟದ ವ್ಯವಸ್ಥೆ ಅಸ್ತವ್ಯಸ್ತ!

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 12, 2024 | 6:39 PM

ಮಕ್ಕಳು ಇಂಥ ಭಾರೀ ನೂಕುನುಗ್ಗಲಿನಲ್ಲಿ ಹೋಗಿ ತಟ್ಟೆಯಲ್ಲಿ ಊಟ ಹಾಕಿಸಿಕೊಂಡು ಬರೋದು ಸಾಧ್ಯವೇ? ವಯಸ್ಸಾದ ಹಿರಿಯ ನಾಗರಿಕರಿಗೂ ಇದೇ ಮಾತು ಅನ್ವಯಿಸುತ್ತದೆ. ಜನ ನಿರೀಕ್ಷೆಗಿಂತ ಜಾಸ್ತಿ ಬಂದಿದ್ದರಿಂದ ತಯಾರಿಸಿದ ಆಹಾರ ಪದಾರ್ಥಗಳು ಸಹ ಮುಗಿದುಹೋಗಿದ್ದವು.

ಶಿವಮೊಗ್ಗ: ಇವತ್ತು ನಗರದ ಫ್ರೀಡಂ ಪಾರ್ಕ್ನಲ್ಲಿ ಆಯೋಜಿಸಲಾಗಿದ್ದ ಯುವನಿಧಿ ಯೋಜನೆ ಉದ್ಘಾಟನೆಯಂಥ (Yuva Nidhi scheme launch programme) ಬೃಹತ್ ಪ್ರಮಾಣದ ಕಾರ್ಯಕ್ರಮಗಳಿಗೆ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ, ಗೊಂದಲ ಗಲಾಟೆಯಾಗದಂಥ ರೀತಿಯಲ್ಲಿ ಮಾಡುವ ಅವಶ್ಯಕತೆಯಿದೆ ಮಾರಾಯ್ರೇ. ಇಲ್ನೋಡಿ, ಜನ ಲಕ್ಷಾಂತರ ಅದರೆ ಊಟದ ಕೌಂಟರ್ ಗಳು (food counters) ಕಡಿಮೆ. ಕಾರ್ಯಕ್ರಮದ ಆಯೋಜಕರ (organisers) ಪ್ರಕಾರ ಒಂದು ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇತ್ತಂತೆ ಅದರೆ ಬಂದವರು ಒಂದೂವರೆ ಲಕ್ಷಕ್ಕಿಂತ ಹೆಚ್ಚು. ಮಧ್ಯಾಹ್ನದ ಸಮಮಯವಾಗಿದ್ದರಿಂದ ಎಲ್ಲರು ಹಸಿದಿರುತ್ತಾರೆ. ಭಾಗವಹಿಸಿದವರಲ್ಲಿ ಎಲ್ಲ ವಯೋಮಾನದ ಜನರಿದ್ದಾರೆ. ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರಲ್ಲದೆ ಶಾಲಾ ಮಕ್ಕಳು ಸಹ ದೃಶ್ಯಗಳಲ್ಲಿ ಕಾಣಿಸುತ್ತಾರೆ. ಮಕ್ಕಳು ಇಂಥ ಭಾರೀ ನೂಕುನುಗ್ಗಲಿನಲ್ಲಿ ಹೋಗಿ ತಟ್ಟೆಯಲ್ಲಿ ಊಟ ಹಾಕಿಸಿಕೊಂಡು ಬರೋದು ಸಾಧ್ಯವೇ? ವಯಸ್ಸಾದ ಹಿರಿಯ ನಾಗರಿಕರಿಗೂ ಇದೇ ಮಾತು ಅನ್ವಯಿಸುತ್ತದೆ. ಜನ ನಿರೀಕ್ಷೆಗಿಂತ ಜಾಸ್ತಿ ಬಂದಿದ್ದರಿಂದ ತಯಾರಿಸಿದ ಆಹಾರ ಪದಾರ್ಥಗಳು ಸಹ ಮುಗಿದುಹೋಗಿದ್ದವು. ಬೇರೆ ಊರುಗಳಿಂದ ಬಡ ಜನರಲ್ಲಿ ಹೋಟೆಲ್ ಗಳಿಗೆ ಹೋಗಿ ಊಟಮಾಡುವಷ್ಟು ಹಣವಿದ್ದೀತೇ? ಸಂಬಂಧಪಟ್ಟವರು ಯೋಚಿಸಬೇಕು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ