ಬೆಂಗಳೂರು: ಖಾಸಗಿ ಶಾಲೆಗಳ ಶುಲ್ಕ ನಿಗದಿ ಮಾಡಲು ಶಿಕ್ಷಣ ಇಲಾಖೆಗೆ ಪೋಷಕರು ಡೆಡ್‌ಲೈನ್ ನೀಡಿದ್ದಾರೆ. ಇಂದು ಸಂಜೆಯೊಳಗೆ ಶುಲ್ಕ ನಿಗದಿ ಮಾಡದಿದ್ದರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಲು ಪೋಷಕರು ನಿರ್ಧಾರ ಮಾಡಿದ್ದಾರೆ.
ಶುಲ್ಕ ನಿಗದಿ ವಿಚಾರವಾಗಿ ಸಭೆ ನಡೆದು 2 ವಾರವಾಗಿದೆ. ಆದರೆ ಈವರೆಗೆ ಶುಲ್ಕ ನಿಗದಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮನಸ್ಸು ಮಾಡಿಲ್ಲ. ಇದೇ ವಿಚಾರವಾಗಿ 2 ಬಾರಿ ಪೋಷಕರಿಂದ ಪ್ರತಿಭಟನೆ ನಡೆದಿದೆ. ಶಿಕ್ಷಣ ಸಚಿವರ ಮನೆ ಮುಂದೆಯೂ ಧರಣಿ ನಡೆಸಿದ್ದೆವು. ಆದ್ರೂ ಯಾವುದೇ ನಿರ್ಧಾರವನ್ನು ಮಾಡದ ಹಿನ್ನೆಲೆ ಇಂದು ಸಂಜೆಯೊಳಗೆ ಶುಲ್ಕ ನಿಗದಿ ಮಾಡದಿದ್ದರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡುವುದಾಗಿ ಪೋಷಕರು ಎಚ್ಚರಿಕೆ ನೀಡಿದ್ದಾರೆ.
75% ರಷ್ಟು ಶಾಲಾ ಶುಲ್ಕ ಕಡಿತ ಮಾಡಿ
ಇನ್ನು ಕೆಲ ಖಾಸಗಿಗಳು ಶಾಲೆಗಳು ಈಗಾಗಲೇ20 ರಿಂದ 25% ರಷ್ಟು ಶುಲ್ಕ ಕಡಿಮೆ ಮಾಡುವ ಭರವಸೆ ನೀಡಿವೆ. ಆದ್ರೆ ಪೋಷಕರು 75% ರಷ್ಟು ಶಾಲಾ ಶುಲ್ಕ ಕಡಿತ ಮಾಡಬಹುದು ಕೇವಲ ಆನ್ಲೈನ್ ಕ್ಲಾಸ್ ನಡೆಸಿದಕ್ಕೆ ಪೂರ್ಣ ಪ್ರಮಾಣದ ಶುಲ್ಕ ಪಾವತಿ ಮಾಡಿಸಿಕೊಳ್ಳುವುದು ಸರಿಯಲ್ಲ ಅಂತ ಪೋಷಕರು ವಾದ ಮಾಡಿದ್ದಾರೆ. ವೆಚ್ಚಕ್ಕೆ ತಕ್ಕ ಶುಲ್ಕ ಪಡೆಯುವಂತೆ ಒತ್ತಾಯ ಮಾಡಿದ್ದಾರೆ. ಶಿಕ್ಷಣ ಸಚಿವರು ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲ್ಲಿ. ಇವತ್ತು ಸಂಜೆಯೊಳಗೆ ಶುಲ್ಕ ವಿಚಾರದ ಬಗ್ಗೆ ಅಂತಿಮ ತೀರ್ಮಾನ ಮಾಡಲಿ ಎಂದು ಆಗ್ರಹಿಸಿದ್ದಾರೆ.
ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್, ಪುಸ್ತಕ ವಿತರಣೆ: ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭಾಗಿ