ಬೇರೆ ಬೇರೆ ಮದುವೆಯಾಗಿದ್ದರೂ ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳು ಆತ್ಮಹತ್ಯೆಗೆ ಶರಣು
ರಂಗನಾಥ ಮತ್ತು ರಂಗಮ್ಮ ಬೇರೆ ಬೇರೆ ಮದುವೆಯಾಗಿದ್ದರು ಪರಸ್ಪರ ಪ್ರೀತಿಸುತ್ತಿದ್ದರು. ರಂಗಮ್ಮಳನ್ನು ರಂಗನಾಥ ತನ್ನ ಮನೆಗೆ ಕರೆತಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ರಾಯಚೂರು: ಪ್ರೇಮಿ ಜೋಡಿ ಒಂದೇ ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಹೇಮನೂರು ಗ್ರಾಮದಲ್ಲಿ ನಡೆದಿದೆ.
ರಂಗನಾಥ(28) ಮತ್ತು ರಂಗಮ್ಮ(19) ನೇಣಿಗೆ ಶರಣಾಗಿದ್ದ ಪ್ರೇಮಿ ಜೋಡಿ. 6 ವರ್ಷದ ಹಿಂದೆ ಶಿವಮ್ಮ ಎಂಬುವವರ ಜೊತೆ ರಂಗನಾಥ ವಿವಾಹವಾಗಿತ್ತು. ರಂಗಮ್ಮಳಿಗೂ ಬೇರೆ ಯುವಕನ ಜೊತೆ ವಿವಾಹವಾಗಿತ್ತು. ಇಬ್ಬರೂ ಬೇರೆ ಬೇರೆ ಮದುವೆಯಾಗಿದ್ದರೂ ಪರಸ್ಪರ ಪ್ರೀತಿಸುತ್ತಿದ್ದರು. ರಂಗನಾಥ ತನ್ನ ಪತ್ನಿಯನ್ನು ಕೊತ್ತದೊಡ್ಡಿ ಗ್ರಾಮದ ಜಾತ್ರೆಗೆ ಕಳುಹಿಸಿ ರಂಗಮ್ಮಳನ್ನು ಆತನ ಮನೆಗೆ ಕರೆತಂದ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ ಆತ್ಮಹತ್ಯೆಗೆ ಸ್ಪಷ್ಟ ಕಾರಣ ಇನ್ನೂ ತಿಳಿದು ಬಂದಿಲ್ಲ.
ರಂಗನಾಥನ ಪತ್ನಿ ಶಿವಮ್ಮ, ತನ್ನ ಗಂಡ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ದೇವದುರ್ಗ ಠಾಣೆ ಪೊಲೀಸರಿಗೆ ದೂರು ಸಲ್ಲಿಸಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನೇಣಿಗೆ ಶರಣಾದ ರಂಗನಾಥ
ಯುವಕರ ತಂಡದಿಂದ ಹಲ್ಲೆ; ಓರ್ವ ಸಾವು, ಮತ್ತೋರ್ವನಿಗೆ ಗಂಭೀರ ಗಾಯ: ಯಾವೂರಲ್ಲಿ?