
ಯೋಗರಾಜ್ ಭಟ್ ನಿರ್ದೇಶನದ ಪಂಚರಂಗಿ ಸಿನಿಮಾದಲ್ಲಿ ಉಡಿಸುವೆ ಬೆಳಕಿನ ಸೀರೆಯಾ..ಚೂರು ನೀ ಸಹಕರಿಸು ಎಂಬ ಹಾಡು ಇದೆ. ಸೀರೆ ಅಂದ್ರೆ ಯಾವ ಹೆಣ್ಮಕ್ಕಳಿಗೆ ಇಷ್ಟ ಇಲ್ಲ ಹೇಳಿ? ಸೀರೆ ಇಷ್ಟ ಆದರೆ ಉಡುವುದು ಕಷ್ಟ. ಅದಕ್ಕಾಗಿಯೇ ರೆಡಿಮೇಡ್ ಸೀರೆಗಳು ಬಂದವು. ಒಂದು ನಿಮಿಷದಲ್ಲಿ ಉಡಬಹುದಾದ ಸೀರೆಗಳ ಜಗತ್ತೇ ಸೃಷ್ಟಿಯಾಯಿತು. ನೆರಿಗೆ ಹಿಡಿಯಲು ಕಷ್ಟ ಪಡಬೇಕಾಗಿಲ್ಲ, ಸೆರಗು ಹೊಂದಿಸಲು ಶ್ರಮ ಪಡಬೇಕಾಗಿಲ್ಲ, ಪ್ರತೀ ಮಹಿಳೆಗೆ ಒಪ್ಪುವಂಥಾ ಎಲ್ಲ ಸೀರೆಗಳು ವಿವಿಧ ಫ್ಯಾಷನ್ ಆಗಿ ಮಾರುಕಟ್ಟೆಗೆ ಬಂದಿವೆ. ಸೀರೆ ಯಾವತ್ತೂ ಔಟ್ ಆಫ್ ಫ್ಯಾಷನ್ ಆಗಲ್ಲ, ಹಾಗಾಗಿಯೇ ಸೀರೆಗೆ ಯಾವತ್ತೂ ಬೇಡಿಕೆ ಇದ್ದೇ ಇರುತ್ತದೆ. ರೆಡಿಮೇಡ್ ಸೀರೆಗಳೇನೋ ಇದೆ, ಆದರೆ ಎಲ್ಲದಕ್ಕೂ ಇವನ್ನೇ ನೆಚ್ಚಿಕೊಳ್ಳುವಂತಿಲ್ಲ. ನಮ್ಮಿಷ್ಟದ ಸೀರೆಗಳನ್ನು ಉಡಬೇಕು ಅಂದ್ರೆ? ಉಡಲು ಕಷ್ಟ ಆಗುವವರಿಗಾಗಿ ಉಡಿಸಲು ಒಬ್ಬರು ಬೇಕೇ ಬೇಕು. ಅದೂ ಇಲ್ಲ ಅಂದರೆ? ಚಿಂತಿಸಬೇಕಾಗಿಲ್ಲ. ನಿಮ್ಮಿಷ್ಟದ ಸೀರೆಗಳನ್ನು ಫಟಾಫಟ್ ಆಗಿ ಉಡಲು ಸಹಕಾರಿಯಾಗುವಂತೆ ಪ್ರೀ ಪ್ಲೀಟೆಡ್ ಸೀರೆ ರೆಡಿಮಾಡಿಕೊಡುವವರು ಇದ್ದಾರೆ. ಹೆಣ್ಮಕ್ಕಳಿಗೆ ನೆರವಾಗುವ ಈ ಕೆಲಸ ಉದ್ಯಮ ಕೂಡಾ ಹೌದು. ಅದು ಹೇಗಂತೀರಾ? ಮುಂದೆ ಓದಿ ನೋಡಿ… ಮದುವೆ, ಸೀಮಂತ ಅಥವಾ ಇನ್ಯಾವುದೇ ಹಬ್ಬಗಳಿರಲಿ ಎಲ್ಲದಕ್ಕೂ ಹೆಣ್ಮಕ್ಕಳು ಆಯ್ಕೆ ಮಾಡುವ ಉಡುಗೆ ಅಂದರೆ ಸೀರೆ. ಇಂಥಾ ಕಾರ್ಯಕ್ರಮಗಳಲ್ಲಿ ಅಂದವಾಗಿ ಸೀರೆ ಉಡಲು ಸಮಯ ಕೂಡಾ ಬೇಕು. ಬಹುತೇಕರಿಗೆ...
Published On - 12:42 pm, Sat, 4 May 24