ಆಟೋದಲ್ಲೇ ಪತ್ನಿಯನ್ನು ಮಲಗಿಸಿ ಆಸ್ಪತ್ರೆಗೆ ಕರೆತಂದಿದ್ದ ವೃದ್ಧ ಪತಿ; ಬೆಡ್ ಸಿಗದೇ ಮನೆಗೆ ವಾಪಸ್ ಕರೆದೊಯ್ಯುವ ಪರಿಸ್ಥಿತಿ

ಬೆಳಗಾವಿ ಜಿಲ್ಲೆಯ ಬಿಮ್ಸ್​ ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್​ ಫುಲ್​ ಆಗಿದೆ. ಆಸ್ಪತ್ರೆಗೆ ಬಂದವರೆಲ್ಲಾ ಬೆಡ್​ ಸಿಗದೇ ಹಿಂದಿರುಗುವ ಪರಿಸ್ಥಿತಿ ಎದುರಾಗಿದೆ. ಅದೇ ರಿತಿ ಆಕ್ಸಿಜನ್​ ಬೆಡ್​ ಸಿಗದೇ ವೃದ್ಧೆಯೋರ್ವರು ಆಟೋದಲ್ಲಿಯೇ ಪರದಾಡಿದ ಘಟನೆಯೊಂದು ನಡೆದಿದೆ.

ಆಟೋದಲ್ಲೇ ಪತ್ನಿಯನ್ನು ಮಲಗಿಸಿ ಆಸ್ಪತ್ರೆಗೆ ಕರೆತಂದಿದ್ದ ವೃದ್ಧ ಪತಿ; ಬೆಡ್ ಸಿಗದೇ ಮನೆಗೆ ವಾಪಸ್ ಕರೆದೊಯ್ಯುವ ಪರಿಸ್ಥಿತಿ
ಪ್ರಾತಿನಿಧಿಕ ಚಿತ್ರ
Edited By:

Updated on: May 07, 2021 | 9:18 PM

ಬೆಳಗಾವಿ: ಜಿಲ್ಲೆಯ ಬಿಮ್ಸ್​ ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್​ ಫುಲ್​ ಆಗಿದೆ. ಆಸ್ಪತ್ರೆಗೆ ಬಂದವರೆಲ್ಲಾ ಬೆಡ್​ ಸಿಗದೇ ಹಿಂದಿರುಗುವ ಪರಿಸ್ಥಿತಿ ಎದುರಾಗಿದೆ. ಅದೇ ರಿತಿ ಆಕ್ಸಿಜನ್​ ಬೆಡ್​ ಸಿಗದೇ ವೃದ್ಧೆಯೋರ್ವರು ಆಟೋದಲ್ಲಿಯೇ ಪರದಾಡಿದ ಘಟನೆಯೊಂದು ನಡೆದಿದೆ. ವೃದ್ಧ ದಂಪತಿ, ನಗರದ ಖಾಸಗಿ ಆಸ್ಪತ್ರೆಗಳೆಲ್ಲ ಸುತ್ತಾಡಿ ಒಂದೇ ಒಂದು ಆಸ್ಪತ್ರೆಯಲ್ಲಿಯೂ ಬೆಡ್​ ಸಿಗದೇ ಕೊನೆಗೆ ಬಿಮ್ಸ್​ ಅಸ್ಪತ್ರೆಗೆ ಬಂದಿದ್ದರು. ವೃದ್ಧೆಯನ್ನು ಆಟೋದಲ್ಲಿಯೇ ಕುಳ್ಳಿರಿಸಿ ವೃದ್ಧ ಆಸ್ಪತ್ರೆಯಲ್ಲಿ ಬೆಡ್​ ಹುಡುಕಲು ಹೋಗಿದ್ದಾರೆ. ಬಿಮ್ಸ್​ ಆಸ್ಪತ್ರೆಯಲ್ಲಿಯೂ ಬೆಡ್​ ಸಿಗದ ಹಿನ್ನೆಲೆ ಹಿಂತಿರುಗಿ ಮನೆಗೆ ಕರೆದುಕೊಂಡು ಹೋದ ಮನಕಲಕುವ ಘಟನೆ ನಡೆದಿದೆ.

ಆಸ್ಪತ್ರೆಯಲ್ಲಿ ಪರ್ಯಾಯವಾಗಿ 200 ಬೆಡ್​ಗಳ ವ್ಯವಸ್ಥೆಗೆ ಸೂಚಿಸಿ ಎರಡು ದಿನ ಕಳೆದರೂ ಇನ್ನೂ ವ್ಯವಸ್ಥೆ ಮಾಡಿಲ್ಲ. ಇನ್ನೊಂದೆಡೆ ಆಸ್ಪತ್ರೆಯಲ್ಲಿ ಕಳೆದ ಎರಡು ಗಂಟೆಗಳಲ್ಲಿ ಆ್ಯಂಬುಲೆನ್ಸ್​ಗಳು ಸಾಲು ಸಾಲಾಗಿ ನಿಂತಿದೆ. ಆಕ್ಸಿಜನ್ ಬೆಡ್ ಸಿಗದೇ ಸಾವು ಬದುಕಿನ ಮಧ್ಯೆ ರೋಗಿಗಳು ಹೋರಾಡುವ ಪರಿಸ್ಥಿತಿ ಎದುರಾಗಿದೆ.

ಮೈಸೂರು ಮಿಷನ್ ಆಸ್ಪತ್ರೆ ಮುಂದೆ ಮೃತನ ಸಂಬಂಧಿಕರ ಆಕ್ರೋಶ
ಕೊವಿಡ್‌ನಿಂದ ಮೃತಪಟ್ಟ ದೇಹಕ್ಕೆ ಹಣ ಕೇಳಿದ ಆರೋಪದ ಹಿನ್ನೆಲೆಯಲ್ಲಿ ಮಿಷಿನ್ ಆಸ್ಪತ್ರೆ ಮುಂಭಾಗ ಕಲ್ಲು ರಾಶಿ ಸುರಿದು ಮೃತನ ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ. ಕೊರೊನಾ ಮೃತದೇಹ ನೀಡಲು ಅವಕಾಶವಿಲ್ಲದಿದ್ದರೂ ಹಣ ಕೇಳುತ್ತಿದ್ದಾರೆ. ಒಂದು ವಾರದ ಹಿಂದೆ ಮಿಷನ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಗೌಸಿಯಾನಗರದ ವಾಜಿದ್ ಪಾಷಾ ದಾಖಲಾಗಿದ್ದರು. ನಿನ್ನೆ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ. ಕೊರೊನಾ ಪಾಸಿಟಿವ್​ನಿಂದಾಗಿ ಮೃತಪಟ್ಟಿದ್ದಾಗಿ ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾದರೂ ಮೃತದೇಹ ಕೊಡಲು ಹಣಕೇಳುತ್ತಿದ್ದಾರೆ ಎಮದು ಮೃತನ ಸಂಬಂಧಿಕರು ಆಸ್ಪತ್ರೆ ಸಿಬ್ಬಂದಿ ಮೇಲೆ ಆರೋಪ ಮಾಡಿದ್ದಾರೆ. ವಿಷಯ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ.

ಇದನ್ನೂ ಓದಿ: ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ ಮುಚ್ಚಿಟ್ಟ ಗದಗ ಜಿಲ್ಲಾಡಳಿತ; ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ