AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ದಿನಾಂಕ ವಿಸ್ತರಣೆ, ಅಳವಡಿಸದಿದ್ದರೆ ದಂಡ, ಯಾಕಿದು ಇಷ್ಟೊಂದು ಅವಶ್ಯಕ?

ಅತಿ ಸುರಕ್ಷಿತ ನೋಂದಣಿ ಫಲಕ (HSRP) ನಂಬರ್ ಪ್ಲೇಟ್ ಕಡ್ಡಾಯವಾಗಿ ವಾಹನಗಳಿಗೆ ಅಳವಡಿಸಬೇಕು.‌ ಇಂತಹ ನಂಬರ್ ಪ್ಲೇಟ್ ಅಳವಡಿಕೆಗೆ ಇದ್ದ ಕಾಲಾವಕಾಶವನ್ನು 2024ರ ಫೆಬ್ರುವರಿ 17 ರವರೆಗೆ ವಿಸ್ತರಿಸಲಾಗಿದೆ. ಇದನ್ನು ಅಳವಡಿಸಿದ ವಾಹನ ಸವಾರರಿಗೆ ದಂಡ ವಿಧಿಸುವ ಎಚ್ಚರಿಕೆಯನ್ನು ದಾವಣಗೆರೆ ಎಸ್​ಪಿ ಎಚ್ಚರಿಕೆ ನೀಡಿದ್ದಾರೆ.

ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ದಿನಾಂಕ ವಿಸ್ತರಣೆ, ಅಳವಡಿಸದಿದ್ದರೆ ದಂಡ, ಯಾಕಿದು ಇಷ್ಟೊಂದು ಅವಶ್ಯಕ?
ವಾಹನಗಳಿಗೆ HSRP ನಂಬರ್ ಪ್ಲೇಟ್ ಕಡ್ಡಾಯ, ಅಳವಡಿಸದಿದ್ದರೆ ದಂಡ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: Rakesh Nayak Manchi

Updated on: Nov 16, 2023 | 10:50 AM

ದಾವಣಗೆರೆ, ನ.16: ರಾಜ್ಯದಲ್ಲಿ ಹಳೆ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (High Security Registration Plates-HSRP) ಕಡ್ಡಾಯವಾಗಿ ಅಳವಡಿಸಬೇಕು. ಎಚ್​ಎಸ್​ಆರ್​ಪಿ ನಂಬರ್ ಪ್ಲೇಟ್ ಅಳವಡಿಕೆಗೆ ನವೆಂಬರ್ 17ರ ವರೆಗೆ ಕಾಲಾವಕಾಶ ನೀಡಲಾಗಿತ್ತು. ಆದರೆ, ನಿರೀಕ್ಷೆಗಿಂತ ಕಡಿಮೆ ಸಂಖ್ಯೆಯಲ್ಲಿ ವಾಹನ ಸವಾರರು ಎಚ್​ಎಸ್​ಆರ್​ಪಿ ಅಳವಡಿಕೆ ಮಾಡಿದ್ದಾರೆ. ಹೀಗಾಗಿ ಈ ನಂಬರ್ ಪ್ಲೇಟ್ ಅಳವಡಿಕೆಗೆ ಇದ್ದ ಡೆಲ್​ಲೈನ್ ಅನ್ನು 2024ರ ಫೆಬ್ರವರಿ 17 ರವರೆಗೆ ವಿಸ್ತರಿಸಲಾಗಿದೆ.

ಸದ್ಯ, ವಾಹನ ಸವಾರರಿಗೆ ಎಚ್​ಎಸ್​ಆರ್​ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಇನ್ನೂ ಮೂರ್ನಾಲ್ಕು ತಿಂಗಳ ಕಾಲಾವಕಶಾ ಇದೆ. ಈ ಬಗ್ಗೆ ಮಾತನಾಡಿದ ದಾವಣಗೆರೆ ಜಿಲ್ಲಾ ಎಸ್​ಪಿ ಉಮಾ ಪ್ರಶಾಂತ, ಇಷ್ಟು ಅವಕಾಶ ನೀಡಿದರೂ ನಂಬರ್ ಪ್ಲೇಟ್ ಅಳವಡಿಸದೇ ಇದ್ದರೆ ಕಡ್ಡಾಯವಾಗಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಎಚ್ಚರಿಕೆ ನೀಡಿದ ಉಮಾ ಪ್ರಶಾಂತ್, ಜಿಲ್ಲೆಯಲ್ಲಿ 6.16 ಲಕ್ಷ ವಾಹನಗಳಿಗೆ ಎಚ್​ಎಸ್​ಆರ್​ಪಿ ನಂಬರ್ ಪ್ಲೇಟ್ ಅಳವಡಿಸಬೇಕು. ಈ ನಂಬರ್ ಪ್ಲೇಟ್ ಅಳವಡಿಸುವುದರಿಂದ ವಾಹನ ಮಾಲೀಕರಿಗೆ ಒಳ್ಳೆಯದು. ಜೊತೆಗೆ ಯಾವುದೇ ಅಪರಾಧ ಕೃತ್ಯಗಳಲ್ಲಿ ವಾಹನ ಬಳಸಿದರೆ ತಕ್ಷಣ ಪತ್ತೆ ಹಚ್ಚಲು ಅನುಕೂಲವಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ನಂಬರ್ ​ಪ್ಲೇಟ್ ವ್ಯವಹಾರಕ್ಕೆ ಹೊಡೆತ ನೀಡಿದ ಎಚ್‌ಎಸ್‌ಆರ್‌ಪಿ ಅಳವಡಿಕೆ ಅಧಿಸೂಚನೆ

ಯಾವ ವಾಹನಗಳಿಗೆ ಈ ನಿಯಮ ಅನ್ವಯವಾಗುತ್ತದೆ?

ಏಪ್ರಿಲ್​ 2019 ಕ್ಕಿಂತ ಮೊದಲು ನೋಂದಣಿ ಮಾಡಿಸಿಕೊಂಡ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ಲಘು ಮೋಟಾರು ವಾಹನ, ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳು, ಟ್ರ್ಯಾಕ್ಟರ್, ಪ್ರಯಾಣಿಕರ ಕಾರು ಸೇರಿ ಎಲ್ಲ ಹಳೆಯ ವಾಹನಗಳಿಗೆ ಈ ನಿಯಮ ಅನ್ವಯವಾಗಲಿದೆ.

ಹೆಚ್.ಎಸ್.ಆರ್.ಪಿ ಅಳವಡಿಕೆಯ ಕಾರ್ಯವಿಧಾನ

  • https://transport.karnataka.gov.in ಅಥವಾ www.siam.in ಭೇಟಿ ನೀಡಿ ಮತ್ತು Book HSRP ನ್ನು ಕ್ಲಿಕ್ ಮಾಡಿ.
  • ನಿಮ್ಮ ವಾಹನ ತಯಾರಕರನ್ನು ಆಯ್ಕೆಮಾಡಿ.
  • ವಾಹನದ ಮೂಲ ವಿವರಗಳನ್ನು ಭರ್ತಿ ಮಾಡಿ.
  • HSRP ಅಳವಡಿಕೆಗಾಗಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಡೀಲರ್ ಸ್ಥಳವನ್ನು ಆಯ್ಕೆಮಾಡಿ.
  • HSRP ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ. ಶುಲ್ಕ ಪಾವತಿಯನ್ನು ನಗದು ರೂಪದಲ್ಲಿ ಮಾಡುವಂತಿಲ್ಲ.
  • ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ಒಟಿಪಿ ರವಾನಿಸಲಾಗುವುದು.
  • ನಿಮ್ಮ ಅನುಕೂಲಕ್ಕೆ, ತಕ್ಕಂತೆ HSRP ಅಳವಡಿಕೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆಮಾಡಿ.
  • ನಿಮ್ಮ ವಾಹನದ ಯಾವುದೇ ತಯಾರಕ/ಡೀಲರ್ ಸಂಖ್ಯೆಗೆ ಭೇಟಿ ನೀಡಿ.
  • ವಾಹನ ಮಾಲೀಕರ ಕಚೇರಿ ಆವರಣ/ಮನೆಯ ಸ್ಥಳದಲ್ಲಿ HSRP ಅಳವಡಿಕೆಗಾಗಿ ಆಯ್ಕೆ ಮಾಡಬಹುದು.

ಗಮನಿಸಬೇಕಾದ ಅಂಶವೆಂದರೆ, ಯಾವುದೇ ತೆರೆದ ಮಾರುಕಟ್ಟೆಯ ರಸ್ತೆ ಬದಿಯ ಮಾರಾಟಗಾರರಿಂದ ನಕಲಿ ಹೊಲೊಗ್ರಾಮ್, IND ಮಾರ್ಕ್, ಇಂಡಿಯಾ ಎಂದು ಕೆತ್ತಲಾದ ಅಥವಾ ಕೆತ್ತಿದಂತಹ ಅನುಕರಣೆಯ HSRP ಒಂದೇ ರೀತಿಯ ಪ್ಲೇಟ್‌ಗಳು, ಸ್ಮಾರ್ಟ್ ನಂಬರ್ ಪ್ಲೇಟ್‌ಗಳನ್ನು ಅಳವಡಿಸುವಂತಿಲ್ಲ, ಅವುಗಳು HSRP ಫಲಕಗಳಾಗಿರುವುದಿಲ್ಲ.

ಏನಿದು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ?

ಈ HSRP ಅನ್ನು ಅಲ್ಯುಮಿನಿಯಂ ಲೋಹದಿಂದ ತಯಾರಿಸಲಾಗುತ್ತದೆ. ಈಗಾಗಲೇ ಹೊಸ ವಾಹನಗಳಲ್ಲಿ ಈ ರೀತಿಯ ನಂಬರ್ ಪ್ಲೇಟ್ ಕಡ್ಡಾಯವಾಗಿ ಅಳವಡಿಸಲಾಗುತ್ತಿದೆ. ಈ ಪ್ಲೇಟ್‌ಗಳಲ್ಲಿ ನಂಬರ್‌ಗಳು ಉಬ್ಬಿಕೊಂಡಿರುವ ರೀತಿ ಅಚ್ಚಾಗಿರುತ್ತದೆ. ಈ ಪ್ಲೇಟ್‌ನ ಮೇಲ್ಭಾಗದ ಎಡ ಬದಿಯಲ್ಲಿ ನೀಲಿ ಬಣ್ಣದ ಅಶೋಕ ಚಕ್ರದ ಮುದ್ರೆಯನ್ನು ಕಾಣಬಹುದು. 20 ಮಿಲಿ ಮೀಟರ್ ಉದ್ದ ಅಗಲದ ಈ ಮುದ್ರೆಯನ್ನು ಕ್ರೋಮಿಯಂ ಲೋಹ ಬಳಸಿ ತಯಾರಿಸಲಾಗಿರುತ್ತದೆ.

ಎಚ್​ಎಸ್​ಆರ್​ಪಿ ನಂಬರ್ ಪ್ಲೇಟ್ ಪ್ರಯೋಜನಗಳು

ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ನಲ್ಲಿ ನಿಮ್ಮ ವಾಹನದ ಎಂಜಿನ್ ಸಂಖ್ಯೆ, ಚಾಸ್ಸಿ ಸಂಖ್ಯೆ ಸೇರಿದಂತೆ ಹಲವು ಮಾಹಿತಿಗಳು ಇರುತ್ತವೆ. ಈ ಮಾಹಿತಿಗಳು ಕೇಂದ್ರೀಯ ಡೆಟಾಬೇಸ್‌ನಲ್ಲಿ ಸಂಗ್ರಹ ಆಗಿರುತ್ತದೆ. ಒಂದೊಮ್ಮೆ ನಿಮ್ಮ ವಾಹನ ಕಳವಾದರೆ ಈ ಮಾಹಿತಿಯನ್ನ ಬಳಸಿಕೊಂಡು ಪತ್ತೆಹಚ್ಚಲು ಸಹಕಾರಿಯಾಗಿದೆ. ಏಕೆಂದರೆ, ನಿಮ್ಮ ವಾಹನಕ್ಕೆ ಹಾಕಿರುವ ನಂಬರ್ ಪ್ಲೇಟ್ ಅನ್ನು ಅನಧಿಕೃತವಾಗಿ ಬದಲಾವಣೆ ಮಾಡಲು ಅಸಾಧ್ಯ. ಕಳ್ಳರು ಈ ನಂಬರ್ ಪ್ಲೇಟ್ ಅನ್ನು ತೆಗೆಯಲು ಸಾಧ್ಯವಿಲ್ಲ. ಪ್ಲೇಟ್‌ನಲ್ಲಿ ಇರುವ ಮಾಹಿತಿಯನ್ನ ತಿದ್ದಲು ಕೂಡಾ ಸಾಧ್ಯವಿಲ್ಲ.

ಒಂದು ವೇಳೆ ವಾಹನದ ಬದಲು ಕೇವಲ ಪ್ಲೇಟ್ ಕಳ್ಳತನ ಮಾಡಿದರೆ, ಅದನ್ನು ಮರುಬಳಕೆ ಮಾಡಲು ಸಾಧ್ಯವಿಲ್ಲ. ವಾಹನವನ್ನ ಕಳ್ಳತನ ಮಾಡಿ ನಂಬರ್ ಪ್ಲೇಟ್ ತೆಗೆದು ಭಯೋತ್ಪಾದನೆ ಸೇರಿದಂತೆ ಅಪರಾಧ ಕೃತ್ಯಗಳಿಗೆ ಬಳಸಿಕೊಳ್ಳುವುದನ್ನು ಎಚ್​ಎಸ್​ಆರ್​ಪಿ ಮೂಲಕ ತಡೆಗಟ್ಟಬಹುದು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ ಭೂಕುಸಿತ; ಹಲವು ರಸ್ತೆಗಳು ಬಂದ್
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ ಭೂಕುಸಿತ; ಹಲವು ರಸ್ತೆಗಳು ಬಂದ್
ಅಣ್ಣಾವ್ರ ಸಿನಿಮಾದ ಹಾಡು ಹಾಡಿದ ಬಾಲಿವುಡ್ ಸ್ಟಾರ್ ನಟ: ವಿಡಿಯೋ ನೋಡಿ
ಅಣ್ಣಾವ್ರ ಸಿನಿಮಾದ ಹಾಡು ಹಾಡಿದ ಬಾಲಿವುಡ್ ಸ್ಟಾರ್ ನಟ: ವಿಡಿಯೋ ನೋಡಿ
ಮಂದ್ಸೌರ್ ಹೆದ್ದಾರಿಯಲ್ಲಿ ಕಾರನ್ನು 100 ಮೀಟರ್ ದೂರ ಎಳೆದೊಯ್ದ ಟ್ರಕ್
ಮಂದ್ಸೌರ್ ಹೆದ್ದಾರಿಯಲ್ಲಿ ಕಾರನ್ನು 100 ಮೀಟರ್ ದೂರ ಎಳೆದೊಯ್ದ ಟ್ರಕ್
ಮಕ್ಕಳ ಮಾನಸಿಕ, ದೈಹಿಕ ಆರೋಗ್ಯಕ್ಕೆ ಈ ಯೋಗಗಳು ಒಳ್ಳೆಯದು
ಮಕ್ಕಳ ಮಾನಸಿಕ, ದೈಹಿಕ ಆರೋಗ್ಯಕ್ಕೆ ಈ ಯೋಗಗಳು ಒಳ್ಳೆಯದು
ಬಿಜೆಪಿ ಭಿನ್ನರ ಸಭೆಯಲ್ಲಿ ಪ್ರತ್ಯಕ್ಷ: ಕೊನೆಗೂ ಸ್ಪಷ್ಟನೆ ಕೊಟ್ಟ ಸೋಮಣ್ಣ!
ಬಿಜೆಪಿ ಭಿನ್ನರ ಸಭೆಯಲ್ಲಿ ಪ್ರತ್ಯಕ್ಷ: ಕೊನೆಗೂ ಸ್ಪಷ್ಟನೆ ಕೊಟ್ಟ ಸೋಮಣ್ಣ!
ಸಿದ್ದೇಶ್ವರ ಬಂಡಾಯ ಬಿಜೆಪಿ ನಾಯಕರ ಗುಂಪಿನಲ್ಲಿ ಗುರುತಿಸಿಕೊಂಡಿದ್ದಾರೆ!
ಸಿದ್ದೇಶ್ವರ ಬಂಡಾಯ ಬಿಜೆಪಿ ನಾಯಕರ ಗುಂಪಿನಲ್ಲಿ ಗುರುತಿಸಿಕೊಂಡಿದ್ದಾರೆ!
ರಸ್ತೆ ಬದಿ ನಿಂತಿದ್ದ ಆಟೋಗೆ ಅಪ್ಪಳಿಸಿದ ಲಾರಿ ಚಕ್ರಗಳು: ಭಯಾನಕ ದೃಶ್ಯ ಸೆರೆ
ರಸ್ತೆ ಬದಿ ನಿಂತಿದ್ದ ಆಟೋಗೆ ಅಪ್ಪಳಿಸಿದ ಲಾರಿ ಚಕ್ರಗಳು: ಭಯಾನಕ ದೃಶ್ಯ ಸೆರೆ
ವಸತಿ ಯೋಜನೆ ಮೀಸಲಾತಿ, ಸದನದಲ್ಲಿ ಪ್ರಶ್ನೆ ಕೇಳಲಿ, ಉತ್ತರಿಸುವೆ: ಶಿವಕುಮಾರ್
ವಸತಿ ಯೋಜನೆ ಮೀಸಲಾತಿ, ಸದನದಲ್ಲಿ ಪ್ರಶ್ನೆ ಕೇಳಲಿ, ಉತ್ತರಿಸುವೆ: ಶಿವಕುಮಾರ್
ದೆಹಲಿ ಮೆಟ್ರೋದೊಳಗೆ ಬಂದಿತ್ತೇ ಹಾವು?
ದೆಹಲಿ ಮೆಟ್ರೋದೊಳಗೆ ಬಂದಿತ್ತೇ ಹಾವು?
ಜಂಗಲ್​​ರಾಜ್​ಗೆ ಬಿಹಾರ ಜನತೆ ಅಂತ್ಯ ಹಾಡಿದ್ದಾರೆ: ಮೋದಿ
ಜಂಗಲ್​​ರಾಜ್​ಗೆ ಬಿಹಾರ ಜನತೆ ಅಂತ್ಯ ಹಾಡಿದ್ದಾರೆ: ಮೋದಿ