ಮದ್ಯದಂಗಡಿ ಮುಂದೆ ಪಟಾಕಿ ಸಿಡಿಸಿ ಸಂಭ್ರಮ, ಬೆಳಗಿನ ಜಾವ 3 ಗಂಟೆಯಿಂದಲೇ ಕ್ಯೂ

|

Updated on: May 04, 2020 | 8:17 AM

ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅಸ್ತು ಅಂದಿದ್ದೆ ತಡ ಎಣ್ಣೆ ಪ್ರಿಯರು ಫುಲ್ ಖುಷ್ ಆಗಿದ್ದಾರೆ. ಮಂಡ್ಯದಲ್ಲಿ ಎಣ್ಣೆ ಮಾರಾಟವಾಗ್ತಿದೆ ಅನ್ನೋ ಖುಷಿಗೆ ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತಿದೆ. ಬೆಳಗ್ಗಿನ ಜಾವ 3 ಗಂಟೆಯಿಂದಲೇ ಎಣ್ಣೆಗೆ ಕಾದು ಕುಳಿತಿದ್ದಾರೆ. ಸಾಮಾಜಿಕ ಅಂತರಕ್ಕೆ ಹಾಕಿರೋ ಬಾಕ್ಸ್​ನಲ್ಲಿ ಚಪ್ಪಲಿ ಬಿಟ್ಟು ಅಂಗಡಿ ಮುಂದೆ ಠಿಕಾಣಿ ಹೂಡಿದ್ದಾರೆ. ಮಂಡ್ಯ ನಗರದ ಮಾರ್ತಾಂಡ ವೈನ್ ಶಾಪ್ ಮುಂದೆ ಮದ್ಯ ಪ್ರಿಯರ ಸಂಭ್ರಮ ಮನೆ ಮಾಡಿದೆ. ಮದ್ಯಪ್ರಿಯರಿಗೆ ಬಿಸಿಲು ತಟ್ಟದಂತೆ ತಯಾರಿ: ಬಾಗಲಕೋಟೆಯಲ್ಲಿ ಮದ್ಯದಂಗಡಿಗಳು […]

ಮದ್ಯದಂಗಡಿ ಮುಂದೆ ಪಟಾಕಿ ಸಿಡಿಸಿ ಸಂಭ್ರಮ, ಬೆಳಗಿನ ಜಾವ 3 ಗಂಟೆಯಿಂದಲೇ ಕ್ಯೂ
Follow us on

ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅಸ್ತು ಅಂದಿದ್ದೆ ತಡ ಎಣ್ಣೆ ಪ್ರಿಯರು ಫುಲ್ ಖುಷ್ ಆಗಿದ್ದಾರೆ. ಮಂಡ್ಯದಲ್ಲಿ ಎಣ್ಣೆ ಮಾರಾಟವಾಗ್ತಿದೆ ಅನ್ನೋ ಖುಷಿಗೆ ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತಿದೆ. ಬೆಳಗ್ಗಿನ ಜಾವ 3 ಗಂಟೆಯಿಂದಲೇ ಎಣ್ಣೆಗೆ ಕಾದು ಕುಳಿತಿದ್ದಾರೆ. ಸಾಮಾಜಿಕ ಅಂತರಕ್ಕೆ ಹಾಕಿರೋ ಬಾಕ್ಸ್​ನಲ್ಲಿ ಚಪ್ಪಲಿ ಬಿಟ್ಟು ಅಂಗಡಿ ಮುಂದೆ ಠಿಕಾಣಿ ಹೂಡಿದ್ದಾರೆ. ಮಂಡ್ಯ ನಗರದ ಮಾರ್ತಾಂಡ ವೈನ್ ಶಾಪ್ ಮುಂದೆ ಮದ್ಯ ಪ್ರಿಯರ ಸಂಭ್ರಮ ಮನೆ ಮಾಡಿದೆ.

ಮದ್ಯಪ್ರಿಯರಿಗೆ ಬಿಸಿಲು ತಟ್ಟದಂತೆ ತಯಾರಿ:
ಬಾಗಲಕೋಟೆಯಲ್ಲಿ ಮದ್ಯದಂಗಡಿಗಳು ಇಂದು ಓಪನ್ ಆಗಲಿವೆ ಹೀಗಾಗಿ ಮದ್ಯದಂಗಡಿ ಮುಂದೆ ಬ್ಯಾರಿಕೇಡ್ ಹಾಕಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮದ್ಯಪ್ರಿಯರಿಗೆ ಬಿಸಿಲು ತಟ್ಟದಂತೆ ಬಟ್ಟೆ ಹೊದಿಕೆ ಹಾಕಲಾಗಿದೆ. ಎಣ್ಣೆಪ್ರಿಯರು ಸಾಲು ಸಾಲಾಗಿ ಬರಲು ಬ್ಯಾರಿಕೇಡ್ ಹಾಕಿದ್ದು, ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಕಂಟೇನ್ಮೆಂಟ್ ಜೋನ್ ಹೊರತುಪಡಿಸಿ ಎಲ್ಲೆಡೆ ಮದ್ಯ ಸೇಲ್ ಆಗುತ್ತೆ.

ನಶೆ ಏರ್ಬೇಕಂದ್ರೆ ಪಾಲಿಸಬೇಕು ಕಂಡೀಷನ್:
ಮೈಸೂರಿನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮದ್ಯ ಮಾರಾಟಕ್ಕೆ ಕೆಲವು ನಿರ್ಬಂಧ ವಿಧಿಸಿದೆ. ಕಂಟೇನ್ಮೆಂಟ್ ಜೋನ್ ಬಿಟ್ಟು ಎಲ್ಲ ಕಡೆ ಮದ್ಯ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. MSIL, CL-2 ಮಳಿಗೆಗಳಲ್ಲಿ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶವಿರುತ್ತದೆ. ಬೆಳಗ್ಗೆ 9ರಿಂದ ಸಂಜೆ 7 ಗಂಟೆಯವರೆಗೆ ಮದ್ಯ ಮಾರಾಟ ಮಾಡಬಹುದು.

ಮಳಿಗೆಗಳಲ್ಲಿ ಕೇವಲ 5 ಜನ ಇರುವಂತೆ ನೋಡಿಕೊಳ್ಳಬೇಕು. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ನಿರ್ಲಕ್ಷ್ಯ ವಹಿಸುವ ಬಾರ್ ಗಳ ವಿರುದ್ಧ ಕ್ರಮಕೈಗೊಳ್ತೇವೆ. ಕನಿಷ್ಠ 3ರಿಂದ 5 ಕೆಲಸಗಾರರನ್ನ ಇರಿಸಿಕೊಳ್ಳತಕ್ಕದ್ದು. ಅವಶ್ಯಕತೆಯಿದ್ದರೆ ಬ್ಯಾರಿಕೇಡ್​​ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಡಳಿತ ಮದ್ಯ ಮಾರಾಟಕ್ಕೆ ಕೆಲವು ನಿರ್ಬಂಧ ವಿಧಿಸಿದೆ. ಮೈಸೂರಿನ 91 ರಸ್ತೆಗಳಲ್ಲಿ ಅಗತ್ಯ ವಸ್ತು, ಮದ್ಯ ಮಾರಾಟ ಮಾಡಬಹುದು. ಬೇರೆ ಯಾವುದೇ ಅಂಗಡಿಗಳನ್ನು ತೆರೆಯಲು ಅವಕಾಶವಿಲ್ಲ.