ತಮ್ಮ ಗೂಡು ಸೇರಲು ಮೆಜೆಸ್ಟಿಕ್ನತ್ತ ವಲಸೆ ಕಾರ್ಮಿಕರ ಹೆಜ್ಜೆ
ಬೆಂಗಳೂರು: ವಲಸೆ ಕಾರ್ಮಿಕರನ್ನು ಉಚಿತವಾಗಿ ತಮ್ಮ ತಮ್ಮ ಗೂಡಿಗೆ ಸೇರಿಸಲು ಬಸ್ಗಳು ರೆಡಿಯಾಗಿವೆ. ಇಂದು ಬೆಳಗ್ಗೆ7 ಗಂಟೆಯಿಂದ ಬಸ್ ಸಂಚಾರ ಆರಂಭವಾಗಲಿದೆ. ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ನಿನ್ನೆ ಮೆಜೆಸ್ಟಿಕ್ನಿಂದ 500 ಬಸ್ಗಳು ಸಂಚಾರ ಮಾಡಿದ್ವು. ಒಂದು ಬಸ್ಗೆ 30 ಜನ ಪ್ರಯಾಣಿಕರಂತೆ, 15,000 ಜನ ಪ್ರಯಾಣ ಮಾಡಿ ತಮ್ಮ ಊರುಗಳನ್ನು ಸೇರಿದ್ದಾರೆ. ಇಂದು ಕೂಡ ಉಚಿತ ಬಸ್ ಸೇವೆ ಇದ್ದು, ಅನೇಕ ಕಾರ್ಮಿಕರು ಗಂಟು ಮೂಟೆ ಸಮೇತ ತಮ್ಮ ಊರಿಗೆ ಹೋಗಲು ಧಾವಿಸಿದ್ದಾರೆ. ಅರಮನೆ ಮೈದಾನದ ಬಳಿ […]
ಬೆಂಗಳೂರು: ವಲಸೆ ಕಾರ್ಮಿಕರನ್ನು ಉಚಿತವಾಗಿ ತಮ್ಮ ತಮ್ಮ ಗೂಡಿಗೆ ಸೇರಿಸಲು ಬಸ್ಗಳು ರೆಡಿಯಾಗಿವೆ. ಇಂದು ಬೆಳಗ್ಗೆ7 ಗಂಟೆಯಿಂದ ಬಸ್ ಸಂಚಾರ ಆರಂಭವಾಗಲಿದೆ. ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ನಿನ್ನೆ ಮೆಜೆಸ್ಟಿಕ್ನಿಂದ 500 ಬಸ್ಗಳು ಸಂಚಾರ ಮಾಡಿದ್ವು.
ಒಂದು ಬಸ್ಗೆ 30 ಜನ ಪ್ರಯಾಣಿಕರಂತೆ, 15,000 ಜನ ಪ್ರಯಾಣ ಮಾಡಿ ತಮ್ಮ ಊರುಗಳನ್ನು ಸೇರಿದ್ದಾರೆ. ಇಂದು ಕೂಡ ಉಚಿತ ಬಸ್ ಸೇವೆ ಇದ್ದು, ಅನೇಕ ಕಾರ್ಮಿಕರು ಗಂಟು ಮೂಟೆ ಸಮೇತ ತಮ್ಮ ಊರಿಗೆ ಹೋಗಲು ಧಾವಿಸಿದ್ದಾರೆ.
ಅರಮನೆ ಮೈದಾನದ ಬಳಿ ಜನರ ಆಗಮನ: ಅರಮನೆ ಮೈದಾನದ ಬಳಿ ನೂರಾರು ಜನ ಆಗಮಿಸಿದ್ದಾರೆ. ರಾಜಸ್ಥಾನಕ್ಕೆ ಹೋಗಲು ವಿಶೇಷ ರೈಲು ವ್ಯವಸ್ಥೆ ಇದೆ. ಹೀಗಾಗಿ ಅರಮನೆ ಮೈದಾನಕ್ಕೆ ಬನ್ನಿ ಎಂದು ಜಯನಗರ ಪೊಲೀಸರು ಮಾಹಿತಿ ನೀಡಿದ ಹಿನ್ನೆಲೆ ಬೆಂಗಳೂರಿನ ಅರಮನೆ ಮೈದಾನ ಬಳಿ ಜನ ಜಮಾವಣೆಗೊಂಡಿದ್ದಾರೆ.
Published On - 7:23 am, Mon, 4 May 20