ಬೆಣ್ಣೆನಗರಿ: 150 ಎಕರೆ ಜಮೀನು ಪುಕ್ಸಟ್ಟೆಯಾಗಿ ಸಿಗ್ತಿದೆ ಅಂತಾ ಸುದ್ದಿ ಕೇಳಿ ಓಡೋಡಿ ಬಂದ ಜನರು, ಮುಂದೇನಾಯ್ತು?

|

Updated on: Jan 31, 2021 | 4:42 PM

ಪುಕ್ಸಟ್ಟೆ ಜಾಗ ಸಿಗುತ್ತಿದೆ ಎಂಬ ವದಂತಿ ನಂಬಿ ಜನರು ಮರುಳಾಗಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿಕ್ಕುಲಿಕೆರೆ ಗ್ರಾಮದಲ್ಲಿ ನಡೆದಿದೆ. ಪುಕ್ಸಟ್ಟೆ ಜಾಗ ಪಡೆಯಲು ಜನರು ಓಡೋಡಿ ಬಂದ ಘಟನೆ ಬೆಳಕಿಗೆ ಬಂದಿದೆ.

ಬೆಣ್ಣೆನಗರಿ: 150 ಎಕರೆ ಜಮೀನು ಪುಕ್ಸಟ್ಟೆಯಾಗಿ ಸಿಗ್ತಿದೆ ಅಂತಾ ಸುದ್ದಿ ಕೇಳಿ ಓಡೋಡಿ ಬಂದ ಜನರು, ಮುಂದೇನಾಯ್ತು?
ಜಮೀನು ಪುಕ್ಸಟ್ಟೆಯಾಗಿ ಸಿಗ್ತಿದೆ ಅಂತಾ ಸುದ್ದಿ ಕೇಳಿ ಓಡೋಡಿ ಬಂದ ಜನರು
Follow us on

ದಾವಣಗೆರೆ: ಪುಕ್ಸಟ್ಟೆ ಜಾಗ ಸಿಗುತ್ತಿದೆ ಎಂಬ ವದಂತಿ ನಂಬಿ ಜನರು ಮರುಳಾಗಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿಕ್ಕುಲಿಕೆರೆ ಗ್ರಾಮದಲ್ಲಿ ನಡೆದಿದೆ. ಪುಕ್ಸಟ್ಟೆ ಜಾಗ ಪಡೆಯಲು ಜನರು ಓಡೋಡಿ ಬಂದ ಘಟನೆ ಬೆಳಕಿಗೆ ಬಂದಿದೆ.

ಏನಿದು ‘ಪುಕ್ಸಟ್ಟೆ’ ಪ್ರಕರಣ?
ಅಂದ ಹಾಗೆ, ಚಿಕ್ಕುಲಿಕೆರೆ ಗ್ರಾಮದ ಬಳಿ ಸುಮಾರು 150 ಎಕರೆ ಜಮೀನನ್ನು ಉಚಿತವಾಗಿ ಹಂಚಲಾಗುತ್ತಿದೆ ಎಂಬ ವದಂತಿ ಕೇಳಿಬಂದಿತ್ತು. ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಪುರಸಭೆ ಸದಸ್ಯರು ಹೇಳಿದ್ದಾರೆ ಎಂಬ ಈ ಸುಳ್ಳು ಸುದ್ದಿ ಸಿಕ್ಕಾಪಟ್ಟೆ ರೌಂಡ್ಸ್​ ಹೊಡಿಯೋಕೆ ಶುರುಮಾಡಿತು.

ಇದನ್ನು ನಂಬಿದ ಕೆಲವರು, ಪಾಪ, ಹೊಡೀತಪ್ಪಾ ಲಾಟರಿ ಅಂತಾ ಖಾಲಿ ಜಾಗಕ್ಕೆ ಬೇಲಿ ಹಾಕಲು ಎದ್ನೋ ಬಿದ್ನೋ ಅಂತಾ ಅಲ್ಲಿಗೆ ಓಡೋಡಿ ಬಂದರು. ಆದರೆ, ಸುಳ್ಳು ಸುದ್ದಿಯನ್ನ ನಂಬಿ ಓಡೋಡಿ ಬಂದಿದ್ದ ಜನರಿಗೆ ಅಲ್ಲಿ ಶಾಕ್​ ಕಾದಿತ್ತು.

ಹೌದು, ಖಾಲಿ ಜಾಗದಲ್ಲಿ ಬೇಲಿ ಹಾಕಲು ಮುಂದಾಗಿದ್ದ ಜನರನ್ನು ತಡೆದ ಅರಣ್ಯ ಇಲಾಖೆ ಸಿಬ್ಬಂದಿ ಇಲ್ಲಿ ಜಮೀನು ಹಂಚಿಕೆ ಮಾಡ್ತಿಲ್ಲ. ಎಲ್ಲರೂ ಹೋಗಿ ಅಂತಾ ಜನರನ್ನ ವಾಪಸ್ ಕಳಿಸಿದರು. ಆಗ, ಕೈಗೆ ಸಿಕ್ಕ ಜಮೀನು ಬೇಲಿ ಹಾಕಲು ಸಿಗಲಿಲ್ಲ ಎಂದು ಜನರು ಬೇಸರಗೊಂಡು ಹೊರಟುಹೋದರು.

ಲಾಠಿಚಾರ್ಜ್ ಖಂಡಿಸಿ ಠಾಣೆಯ ಮುಂದೆ ಧರಣಿ: ಶಾಸಕ ಶರತ್ ಬಚ್ಚೇಗೌಡ ಸೇರಿ 15 ಜನರ ವಿರುದ್ಧ FIR