ಮೈಸೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಈ ಸಂದಿಗ್ಧ ಕಾಲದಲ್ಲಿ ಎಷ್ಟು ಜವಾಬ್ದಾರಿಯಾಗಿ ಇದ್ದರೂ ಸಾಲೋದಿಲ್ಲ. ಸರ್ಕಾರ, ಸಲಹಾ ತಜ್ಞ ಸಮಿತಿ ಕೊರೊನಾ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ. ಲಾಕ್ಡೌನ್ ಎದುರಾದರೆ ಕೆಲವೆಡೆ ಕುಡಿಯುವ ನೀರಿಗೂ ದೊಡ್ಡ ಸಮಸ್ಯೆಯಾಗುತ್ತದೆ. ಈ ನಡುವೆ ಮೈಸೂರಿನಲ್ಲಿ ಕುರಹಟ್ಟಿಯಲ್ಲಿ ಕುಡಿಯುವ ನೀರಿಗೆ ಕ್ರಿಮಿನಾಶಕ ಬೆರೆಸಿದ್ದಾರೆ. ಕಿಡಿಗೇಡಿಗಳು ಕುಡಿಯುವ ನೀರಿಗೆ ಕ್ರಿಮಿನಾಶಕ ಬೆರೆಸಿದ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಕುರಹಟ್ಟಿ ಸಂಭವಿಸಿದೆ. ಕುರಹಟ್ಟಿಯ 40 ಅಡಿ ಎತ್ತರದ ಟ್ಯಾಂಕ್ಗೆ ಕಿಡಿಗೇಡಿಗಳು ಕ್ರಿಮಿನಾಶಕವನ್ನು ಹಾಕಿದ್ದಾರೆ.
ಟ್ಯಾಂಕ್ ಪರಿಶೀಲನೆ ವೇಳೆ ಕ್ರಿಮಿನಾಶಕ ಬೆರೆಸಿದ್ದು ಬೆಳಕಿಗೆ ಬಂದಿದ್ದು, ಬಾರಿ ದೊಡ್ಡ ಅನಾಹುತ ತಪ್ಪಿದಂತಾಗಿದೆ. 50 ಸಾವಿರ ಲೀಟರ್ ಸಾಮರ್ಥ್ಯದ 40 ಅಡಿ ಎತ್ತರ ಟ್ಯಾಂಕ್ಗೆ ಯಾರೋ ಕ್ರಿಮಿನಾಶಕ ಹಾಕಿದ್ದಾರೆ. ನಲ್ಲಿಯ ನೀರಿನಲ್ಲಿ ಘಾಟಿನ ವಾಸನೆ ಕಂಡು ತಕ್ಷಣ ಗ್ರಾಮಸ್ಥರು ಎಚ್ಚರಿಸಿಕೊಂಡಿದ್ದಾರೆ. ನಂತರ ನೀರಿನ ಟ್ಯಾಂಕರ್ನ ಪರಿಶೀಲನೆ ಮಾಡಿದಾಗ ನೀರಿನಲ್ಲಿ ಕ್ರಿಮಿನಾಶಕ ಬೆರೆಸಿರುವುದು ಬೆಳಕಿಗೆ ಬಂದಿದೆ. ಸದ್ಯ ಈ ಪ್ರಕರಣ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ
ಫ್ಯಾಕ್ಟರಿ ತ್ಯಾಜ್ಯದಿಂದ ನೀರು ಕಲುಷಿತ; ಲಕ್ಷಾಂತರ ಮೀನುಗಳ ಮಾರಣಹೋಮ
ಬೆಳಗಾವಿಯಲ್ಲಿ ಮಂಗಳಾ ಅಂಗಡಿಗೆ ಪ್ರಚಾರ ವೇಳೆ ಮುದ್ದು ಹುಡುಗಿಯಿಂದ ಹೂ ಕೊಟ್ಟು ವಿಷ್
(perpetrators poisoned the drinking water at Mysuru)