Petrol Diesel Price: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪೆಟ್ರೋಲ್​, ಡೀಸೆಲ್​ ದರ ಹೀಗಿದೆ; ಸಂಪೂರ್ಣ ವಿವರ ಇಲ್ಲಿದೆ

|

Updated on: May 02, 2021 | 9:21 AM

Petrol Diesel Rate in Bangalore: ಬೆಂಗಳೂರು ನಗರದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ ಇಂದು 93ರೂ.43 ಪೈಸೆ ಇದೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪೆಟ್ರೋಲ್​, ಡೀಸೆಲ್​ ದರ ಎಷ್ಟಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Petrol Diesel Price: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪೆಟ್ರೋಲ್​, ಡೀಸೆಲ್​ ದರ ಹೀಗಿದೆ; ಸಂಪೂರ್ಣ ವಿವರ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಸತತ 17ನೇ ದಿನವು ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಪಂಚರಾಜ್ಯಗಳ ಚುನಾವಣೆಯ ಬಳಿಕ ತೈಲ ಬೆಲೆ ಏರಿಕೆಯತ್ತ ಸಾಗುತ್ತದೆ ಎಂಬೆಲ್ಲಾ ಮಾತುಗಳು ಕೇಳಿ ಬಂದಿದ್ದವು. ಇದೀಗ ಚುನಾವಣೆಯ ಫಲಿತಾಂಶ ಪ್ರಕ್ರಿಯೆಯಲ್ಲಿದೆ. ಹೀಗಿರುವಾಗ ಇನ್ನು ಮುಂದಿನ ದಿನಗಳಲ್ಲಿ ಪೆಟ್ರೋಲ್​, ಡೀಸೆಲ್​ ದರ ಇನ್ನೂ ಏರುತ್ತದೆಯೇ ಎಂದು ಗ್ರಾಹಕರು ಕಂಗಾಲಾಗಿದ್ದಾರೆ.

ಭಾರತದಲ್ಲಿ ಸತತವಾಗಿ 17ನೇ ದಿನವೂ ಪೆಟ್ರೋಲ್​, ಡೀಸೆಲ್​ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಎರಡೂ ಇಂಧನ ಬೆಲೆಗಳನ್ನು 17 ದಿನಗಳ ಹಿಂದೆಯೇ ಕಡಿತಗೊಳಿಸಲಾಗಿತ್ತು. ಅಂದರೆ ಏಪ್ರಿಲ್​ ತಿಂಗಳ 15ನೇ ತಾರೀಕು ಗುರುವಾರದಂದು ಪ್ರತಿ ಲೀಟರ್​ ಪೆಟ್ರೋಲ್​ ದರದಲ್ಲಿ 16 ಪೈಸೆ ಹಾಗೂ ಪ್ರತಿ ಲೀಟರ್​ ಡೀಸೆಲ್​ ದರದಲ್ಲಿ 14 ಪೈಸೆಯಷ್ಟು ಕಡಿತಗೊಳಿಸಲಾಯಿತು. ತದನಂತರ ದೆಹಲಿಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 90 ರೂ.40 ಪೈಸೆ ಆಗಿದೆ. ಅದೇ ರೀತಿ ಪ್ರತಿ ಲೀಟರ್​ ಡೀಸೆಲ್​ ದರ 80ರೂ.73 ಪೈಸೆ ಆಗಿದೆ. ಅದರಾಚೆಗೆ ದರ ವ್ಯತ್ಯಾಸ ಕಾಣದೇ ಅದೇ ದರದಲ್ಲಿ ಮಾರಾಟವಾಗುತ್ತಿದೆ.

ಕಳೆದ ಫೆಬ್ರವರಿ ತಿಂಗಳಿನಲ್ಲಿ ಪೆಟ್ರೋಲ್​, ಡೀಸೆಲ್​ ದರ 16 ದಿನಗಳ ಕಾಲ ಏರಿಕೆಯತ್ತ ಸಾಗಿದ್ದು, ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿತ್ತು. ತದ ನಂತರ ಮಾರ್ಚ್​ ತಿಂಗಳಿನಲ್ಲಿ ಕೊಂಚ ಇಳಿಕೆಯತ್ತ ಸಾಗಿದ್ದರೂ ಕೂಡಾ ಪೆಟ್ರೋಲ್, ಡೀಸೆಲ್​ ದರ ಗರಿಷ್ಠ ಮಟ್ಟದಲ್ಲಿಯೇ ಇದೆ.

ಬೆಂಗಳೂರು ನಗರದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ ಇಂದು 93ರೂ.43 ಪೈಸೆ ಇದೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪೆಟ್ರೋಲ್​, ಡೀಸೆಲ್​ ದರ ಎಷ್ಟಿದೆ ಎಂಬುದನ್ನು ನೋಡುವುದಾದರೆ ಬಾಗಲಕೋಟೆಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 93.99 ರೂಪಾಯಿ ಇದೆ. ಬಳ್ಳಾರಿಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 94.68 ರೂಪಾಯಿ ಇದೆ. ಬೀದರ್​ನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 93.71 ರೂಪಾಯಿ ಇದೆ. ಬಿಜಾಪುರದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 93.22 ರೂಪಾಯಿ ಇದೆ.

ಅದೇ ರೀತಿ ಪ್ರತಿ ಲೀಟರ್​ ಡೀಸೆಲ್​ ದರವನ್ನು ಗಮನಿಸಿದಾಗ ಬೆಂಗಳೂರು ನಗರದಲ್ಲಿ ಪ್ರತಿ ಲೀಟರ್​ ಡೀಸೆಲ್​ ದರ 85.60 ರೂಪಾಯಿ ಇದೆ. ಬಾಗಲಕೋಟೆ ಜಿಲ್ಲೆಯಲ್ಲಿ ಪ್ರತಿ ಲೀಟರ್​ ಡೀಸೆಲ್ ದರ 86.14 ರೂಪಾಯಿ ಇದೆ. ಬಳ್ಳಾರಿಯಲ್ಲಿ ಪ್ರತಿ ಲೀಟರ್​ ಡೀಸೆಲ್​ ದರ 86.77 ರೂಪಾಯಿ ಇದೆ. ಬೆಜಾಪುರದಲ್ಲಿ ಪ್ರತಿ ಲೀಟರ್​ ಡೀಸೆಲ್​ ದರ 85.44 ರೂಪಾಯಿ ಇದೆ.

ವಿವಿಧ ನಗರದಲ್ಲಿ ಪೆಟ್ರೋಲ್​ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ:

https://tv9kannada.com/business/petrol-price-today.html

ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ:
https://tv9kannada.com/business/diesel-price-today.html

ಇದನ್ನೂ ಓದಿ: Petrol Diesel Price: ಏಪ್ರಿಲ್​ 28 ರಂದು ಬದಲಾಗದ ಪೆಟ್ರೋಲ್​ ಡೀಸೆಲ್​ ದರ; ಸತತ 13 ದಿನಗಳ ಕಾಲ ತೈಲ ಬೆಲೆ ಸ್ಥಿರ

Published On - 8:37 am, Sun, 2 May 21