ಪಿಎಫ್ಐ ಕಚೇರಿಗೆ ಸುತ್ತಿಗೆ ಮತ್ತು ಪ್ರಿಂಟಿಂಗ್ ಮಷಿನ್ ತೆಗೆದುಕೊಂಡು ಹೋದ ಪೊಲೀಸರು
PFI office

ಪಿಎಫ್ಐ ಕಚೇರಿಗೆ ಸುತ್ತಿಗೆ ಮತ್ತು ಪ್ರಿಂಟಿಂಗ್ ಮಷಿನ್ ತೆಗೆದುಕೊಂಡು ಹೋದ ಪೊಲೀಸರು

| Updated By: ವಿವೇಕ ಬಿರಾದಾರ

Updated on: Sep 28, 2022 | 6:58 PM

ಪಿಎಫ್ಐ, ಉಪ ಸಂಘಟನೆಗಳ ಕಚೇರಿ ಲಾಕ್‌ ಮಾಡುವಂತೆ ರಾಜ್ಯ ಸರ್ಕಾರ ಆದೇಶ ನೀಡಿದೆ

ಕೇಂದ್ರ ಸರ್ಕಾರ 5 ವರ್ಷಗಳ ಕಾಲ ಪಿಎಫ್​ಐ ಸಂಘಟನೆಯನ್ನು ಬ್ಯಾನ್ ಮಾಡಿದ ಹಿನ್ನೆಲೆ ದೇಶಾದ್ಯಂತ ಪಿಎಫ್​ಐ ಸಂಘಟನೆಗಳ ಕಚೇರಿಗಳಿಗೆ ಬೀಗ ಹಾಕಲಾಗುತ್ತಿದೆ. ಹೀಗಾಗಿ ರಾಜ್ಯದಲ್ಲೂ ಕೂಡ ರಾಜ್ಯ ಸರ್ಕಾರ ಕೂಡ ಆದೇಶ ಹೊರಡಿಸಿದೆ. ಪಿಎಫ್ಐ, ಉಪ ಸಂಘಟನೆಗಳ ಕಚೇರಿ ಲಾಕ್‌ ಮಾಡುವಂತೆ ಆದೇಶ ನೀಡಲಾಗಿದೆ. ಈ ಸಂಬಂಧ ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರುವ ಪಿಎಫ್​ಐ ಕಚೇರಿಗೆ ಬೀಗ ಹಾಕಲು ಪೊಲೀಸರು ಬೀಗ ಹಾಕಿದ್ದಾರೆ. ಆದರೆ ಪಿಎಫ್​ಐ ಸಿಬ್ಬಂದಿ ಪಿಎಫ್​ಐ ಕಚೇರಿಯ 2 ಗೇಟ್‌ಗೂ ಬೀಗ ಹಾಕಿಕೊಂಡು ಹೋಗಿದ್ದಾರೆ. ಹೀಗಾಗಿ ಪೊಲೀಸರು ಸುತ್ತಿಗೆಯಿಂದ ಗೇಟ್‌ನ ಬೀಗ ಒಡೆದಿದ್ದಾರೆ. ನೆಲ್ಲಿಕಾಯಿ ರಸ್ತೆಯಲ್ಲಿ ಪೊಲೀಸರು ವಾಹನ ಸಂಚಾರ ಬಂದ್ ಮಾಡಿದ್ದಾರೆ.

ಹಾಗೇ ಬೆಂಗಳೂರಿನ ಜೆ.ಸಿ.ನಗರದ ಎಸ್​ಕೆ ಗಾರ್ಡನ್​ನಲ್ಲಿರುವ ಪಿಎಫ್​ಐ ಸಂಘಟನೆಯ ಮುಖ್ಯಕಚೇರಿಗೆ ಪೊಲೀಸರು ಬೀಗ ಜಡದಿದ್ದಾರೆ. ಪಿಎಫ್​ಐ ಕಚೇರಿ ಒಳಗೆ ಯಾರೂ ಹೋಗದಂತೆ ಪಿಎಫ್​ಐ ಕಚೇರಿ ಮುಂದೆ 40ಕ್ಕೂ ಹೆಚ್ಚು ಪೊಲೀಸರ ಭದ್ರತೆ ನಿಯೋಜಿಸಲಾಗಿದೆ. ಇದರ ಅಂಗಸಂಸ್ಥೆಯಾದ ಕ್ಯಾಂಪಸ್ ಫ್ರಂಟ್​ ಆಫ್​ ಇಂಡಿಯಾ ಕಚೇರಿಗು ಕೂಡ ಬೀಗ ಹಾಕಲಾಗಿದೆ.

ಹಾಸನದ ಹೊಸಲೈನ್ ರಸ್ತೆಯಲ್ಲಿರುವ ಪಿಎಫ್​ಐ ಕಚೇರಿ ಮೇಲೆ ಡಿವೈಎಸ್‌ಪಿ ಉದಯ್‌ ಭಾಸ್ಕರ್‌ ನೇತೃತ್ವದ ತಂಡ ದಾಳಿ ಮಾಡಿ ಶೋಧ ಕಾರ್ಯ ಆರಂಭಿಸಿದ್ದರು. ಆದರೆ ಪೊಲೀಸರ ದಾಳಿಗೂ ಮೊದಲೇ ಸಿಬ್ಬಂದಿ ಕಚೇರಿ ಖಾಲಿ ಮಾಡಿದ್ದರು. ಕಚೇರಿಯಲ್ಲಿದ್ದ ಕೆಲ ಪುಸ್ತಕ, ಬಾವುಟ, ಬಂಟಿಂಗ್ಸ್​​ನ್ನು ಜಪ್ತಿ ಮಾಡಲಾಗಿದೆ.

Published on: Sep 28, 2022 06:58 PM