IAS ಕನಸಿನ ಬಾಲಕನಿಗೆ ದೂರದ ಶಾಲೆಗೆ ಹೋಗಲು ತಾಯಿಯ ಹೆಗಲೇ ಆಸರೆ..
ಚಿತ್ರದುರ್ಗ: ವಿಶೇಷ ಚೇತನ ಪುತ್ರನನ್ನು ತನ್ನ ಹೆಗಲ ಮೇಲೆ ಹೊತ್ತು ಪ್ರತಿನಿತ್ಯ 4 ಕಿ.ಮೀ ದೂರದ ಶಾಲೆಗೆ ಕರೆದುಕೊಂಡು ಹೋಗಿಬರುವ ತಾಯಿಯೊಬ್ಬರ ದಾರುಣ ಕತೆ ಮನಕಲಕುವಂತಿದೆ. ಚಳ್ಳಕೆರೆ ತಾಲೂಕಿನ ರಂಗವ್ವನಹಳ್ಳಿ ಗ್ರಾಮದ ಜಯಲಕ್ಷ್ಮಿ ಮಗನ ಕನಸಿಗಾಗಿ ಕಾಳಜಿ ವಹಿಸುತ್ತಿದ್ದಾರೆ. ಐಎಎಸ್ ಓದುವ ಕನಸು ಕಾಣುತ್ತಿರುವ ರಾಜೇಶ್ ಬಾಬು, ಮೀರಾಸಾಬಿಹಳ್ಳಿಯ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಾನೆ. ರಾಜೇಶ್ ಬಾಬು ತಾಯಿ ಜಯಲಕ್ಷ್ಮಿ ಹೆಗಲ ಆಸರೆ ಪಡೆದಿದ್ದಾನೆ. ರಂಗವ್ವನಹಳ್ಳಿ ಗ್ರಾಮದಿಂದ ಮೀರಾಸಾಬಿಹಳ್ಳಿ ಶಾಲೆಗೆ ನಿತ್ಯ ಹೆಗಲ ಮೇಲೆಯೇ ಹೊತ್ತು ಮಗನನ್ನು […]
Follow us on
ಚಿತ್ರದುರ್ಗ: ವಿಶೇಷ ಚೇತನ ಪುತ್ರನನ್ನು ತನ್ನ ಹೆಗಲ ಮೇಲೆ ಹೊತ್ತು ಪ್ರತಿನಿತ್ಯ 4 ಕಿ.ಮೀ ದೂರದ ಶಾಲೆಗೆ ಕರೆದುಕೊಂಡು ಹೋಗಿಬರುವ ತಾಯಿಯೊಬ್ಬರ ದಾರುಣ ಕತೆ ಮನಕಲಕುವಂತಿದೆ.
ಚಳ್ಳಕೆರೆ ತಾಲೂಕಿನ ರಂಗವ್ವನಹಳ್ಳಿ ಗ್ರಾಮದ ಜಯಲಕ್ಷ್ಮಿ ಮಗನ ಕನಸಿಗಾಗಿ ಕಾಳಜಿ ವಹಿಸುತ್ತಿದ್ದಾರೆ. ಐಎಎಸ್ ಓದುವ ಕನಸು ಕಾಣುತ್ತಿರುವ ರಾಜೇಶ್ ಬಾಬು, ಮೀರಾಸಾಬಿಹಳ್ಳಿಯ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಾನೆ. ರಾಜೇಶ್ ಬಾಬು ತಾಯಿ ಜಯಲಕ್ಷ್ಮಿ ಹೆಗಲ ಆಸರೆ ಪಡೆದಿದ್ದಾನೆ. ರಂಗವ್ವನಹಳ್ಳಿ ಗ್ರಾಮದಿಂದ ಮೀರಾಸಾಬಿಹಳ್ಳಿ ಶಾಲೆಗೆ ನಿತ್ಯ ಹೆಗಲ ಮೇಲೆಯೇ ಹೊತ್ತು ಮಗನನ್ನು ಶಾಲೆಗೆ ಬಿಡುತ್ತಿದ್ದಾರೆ.
ಮೂವರು ಮಕ್ಕಳಲ್ಲಿ ಮೊದಲನೆಯವನಿಗೆ ಸಮಸ್ಯೆ ಕಾಡುತ್ತಿದೆ. ಜಯಲಕ್ಷ್ಮಿ ತನ್ನ ಮೂವರು ಮಕ್ಕಳಿಗೂ ಶಿಕ್ಷಣ ಕೊಡಿಸುತ್ತಿದ್ದಾರೆ. ಜಯಲಕ್ಷ್ಮಿಯ ಮಕ್ಕಳ ಪ್ರೀತಿ ಹಾಗು ಶಿಕ್ಷಣ ಹಂಬಲಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.