ತಮಿಳುನಾಡಿಗೆ ಹೊರಟಿದ್ದ ಸಾಲು ಸಾಲು ಐಷಾರಾಮಿ ಕಾರುಗಳು ಸೀಜ್..!
ಬೆಂಗಳೂರು: ನಗರದಿಂದ ತಮಿಳುನಾಡಿನತ್ತ ಹೊರಟಿದ್ದ ಸಾಲು ಸಾಲು ಐಷಾರಾಮಿ ಕಾರುಗಳನ್ನು ಅತ್ತಿಬೆಲೆ ಟೋಲ್ ಬಳಿ ಆರ್ಟಿಒ ಮತ್ತು ಸ್ಥಳೀಯ ಪೊಲೀಸರು ಖಚಿತ ಮಾಹಿತಿ ಮೇರೆಗೆ ತಡೆದು, ಜಪ್ತಿ ಮಾಡಿ, ವಶಕ್ಕೆ ಪಡೆದಿದ್ದಾರೆ. ಈ ಐಷಾರಾಮಿ ಕಾರುಗಳ ಮಾಲೀಕರು ತೆರಿಗೆ ವಂಚಿಸುತ್ತಿದ್ದ ಆರೋಪದ ಮೇಲೆ ಅಧಿಕಾರಿಗಳು ವಾಹನಗಳನ್ನ ವಶಪಡಿಸಿಕೊಂಡಿದ್ದಾರೆ. ನಿರ್ದಿಷ್ಟವಾಗಿ 3 ಕಾರುಗಳಿಂದ ₹ 30 ಲಕ್ಷ ತೆರಿಗೆ ವಂಚನೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತೆರಿಗೆ ವಂಚಿಸಿದ್ದ ಸುಮಾರು 25 ಕಾರುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇವುಗಳ ಮೌಲ್ಯ […]
ಬೆಂಗಳೂರು: ನಗರದಿಂದ ತಮಿಳುನಾಡಿನತ್ತ ಹೊರಟಿದ್ದ ಸಾಲು ಸಾಲು ಐಷಾರಾಮಿ ಕಾರುಗಳನ್ನು ಅತ್ತಿಬೆಲೆ ಟೋಲ್ ಬಳಿ ಆರ್ಟಿಒ ಮತ್ತು ಸ್ಥಳೀಯ ಪೊಲೀಸರು ಖಚಿತ ಮಾಹಿತಿ ಮೇರೆಗೆ ತಡೆದು, ಜಪ್ತಿ ಮಾಡಿ, ವಶಕ್ಕೆ ಪಡೆದಿದ್ದಾರೆ.
ಈ ಐಷಾರಾಮಿ ಕಾರುಗಳ ಮಾಲೀಕರು ತೆರಿಗೆ ವಂಚಿಸುತ್ತಿದ್ದ ಆರೋಪದ ಮೇಲೆ ಅಧಿಕಾರಿಗಳು ವಾಹನಗಳನ್ನ ವಶಪಡಿಸಿಕೊಂಡಿದ್ದಾರೆ. ನಿರ್ದಿಷ್ಟವಾಗಿ 3 ಕಾರುಗಳಿಂದ ₹ 30 ಲಕ್ಷ ತೆರಿಗೆ ವಂಚನೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೆರಿಗೆ ವಂಚಿಸಿದ್ದ ಸುಮಾರು 25 ಕಾರುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇವುಗಳ ಮೌಲ್ಯ ₹ 4.5 ಕೋಟಿ ಎಂದು ಅಂದಾಜಿಸಲಾಗಿದೆ. ಕಾರುಗಳ ಮಾಲೀಕರು ನಕಲಿ ನಂಬರ್ ಪ್ಲೇಟ್ ಅಳವಡಿಸಿ ಸಾರಿಗೆ ಇಲಾಖೆಗೆ ತೆರಿಗೆ ವಂಚಿಸುತ್ತಿದ್ದರು. ಇದರಲ್ಲಿ ಲ್ಯಾಂಬೋರ್ಗಿನಿ ಅಂತಹ ದುಬಾರಿ ಐಷಾರಾಮಿ ಕಾರುಗಳು ಸಹ ಇದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Published On - 11:49 am, Fri, 29 November 19