ಒತ್ತಡದಲ್ಲಿ ನಮ್ಮ ಮಗಳ ಹೇಳಿಕೆ ಪಡೆಯುವುದು ಬೇಡ, ಮೊದಲು ಅವಳು ನಮ್ಮ ಮನೆಗೆ ಬರಬೇಕು..ಯುವತಿ ಪೋಷಕರಿಂದ ಮನವಿ

|

Updated on: Mar 29, 2021 | 2:00 PM

ನನ್ನ ಪುತ್ರಿಯನ್ನು ಮಾರಾಟ ಮಾಡುವುದಕ್ಕೆ ಮುಂದಾಗಿದ್ದಾರೆ. ಒತ್ತಡದಿಂದ ಹೊರಬಂದ ಮೇಲೆ ಮಗಳು ಹೇಳಿಕೆ ನೀಡಬೇಕು. ನನ್ನ ಪುತ್ರಿ ನಮ್ಮ ಜತೆ ಇರುವುದಕ್ಕೆ ಬಯಸಿದರೆ ಬರಲಿ. ನಮ್ಮ ಜತೆಯಿರುವುದಕ್ಕೆ ಒಪ್ಪದೇ ಇದ್ದರೆ ಜಡ್ಜ್ ಮುಂದೆಯೇ ಹಾಜರಾಗಲಿ. ಅದಕ್ಕೂ ಮೊದಲು ಒತ್ತಡದಲ್ಲಿ ನಮ್ಮ ಮಗಳ ಹೇಳಿಕೆ ಪಡೆಯುವುದು ಬೇಡ; ಯುವತಿಯ ಪೋಷಕರು

ಒತ್ತಡದಲ್ಲಿ ನಮ್ಮ ಮಗಳ ಹೇಳಿಕೆ ಪಡೆಯುವುದು ಬೇಡ, ಮೊದಲು ಅವಳು ನಮ್ಮ ಮನೆಗೆ ಬರಬೇಕು..ಯುವತಿ ಪೋಷಕರಿಂದ ಮನವಿ
ಸಿಡಿ ಸಂತ್ರಸ್ತೆಯ ತಂದೆ
Follow us on

ಬೆಳಗಾವಿ: “ಡಿಕೆಶಿ ಕಡೆಯವರಿಂದ ನಮ್ಮ ಮಗಳನ್ನು ಕಾಪಾಡಿ” ಎಂದು ರಮೇಶ್ ಜಾರಕಿಹೊಳಿ ಪ್ರಕರಣದ ಯುವತಿಯ ತಂದೆ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಹೇಳಿದರು. ನಮ್ಮ ಮಗಳನ್ನು ಸಿಡಿ ಗ್ಯಾಂಗ್ ಒತ್ತಡದಲ್ಲಿಟ್ಟಿದೆ. ನಮ್ಮ ಮಗಳನ್ನು ಒತ್ತಡದಿಂದ ಮೊದಲ ಕಾಪಾಡಿ ಎಂದು ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಮನವಿ ಮಾಡುತ್ತೇವೆ. ನ್ಯಾಯಾಧೀಶರು, ಸಿಎಂ, ಗೃಹ ಸಚಿವರ ಮೇಲೆ ನಮಗೆ ನಂಬಿಕೆ ಇದೆ. ದೇಶ ಸೇವೆ ಮಾಡಿರುವ ನನಗೆ ನಮ್ಮ ಮಗಳನ್ನು ರಕ್ಷಿಸಿಕೊಳ್ಳುವುದು ಹೇಗೆಂದು ತಿಳಿದಿದೆ. ನನ್ನ ಪುತ್ರಿಯನ್ನು ಮಾರಾಟ ಮಾಡುವುದಕ್ಕೆ ಮುಂದಾಗಿದ್ದಾರೆ. ಒತ್ತಡದಿಂದ ಹೊರಬಂದ ಮೇಲೆ ಮಗಳು ಹೇಳಿಕೆ ನೀಡಬೇಕು. ನನ್ನ ಪುತ್ರಿ ನಮ್ಮ ಜತೆ ಇರುವುದಕ್ಕೆ ಬಯಸಿದರೆ ಬರಲಿ. ನಮ್ಮ ಜತೆಯಿರುವುದಕ್ಕೆ ಒಪ್ಪದೇ ಇದ್ದರೆ ಜಡ್ಜ್ ಮುಂದೆಯೇ ಹಾಜರಾಗಲಿ. ಅದಕ್ಕೂ ಮೊದಲು ಒತ್ತಡದಲ್ಲಿ ನಮ್ಮ ಮಗಳ ಹೇಳಿಕೆ ಪಡೆಯುವುದು ಬೇಡ. ಮೊದಲ ನಮ್ಮ ಮಗಳು ನಮ್ಮ ಮನೆಗೆ ಬರಬೇಕು ಎಂದು ಯುವತಿಯ ತಂದೆ ಆಗ್ರಹಿಸಿದರು.

ನಾವು ಈ ಪ್ರಕರಣದಿಂದಾಗಿ ಮಾನಸಿಕ ಒತ್ತಡಕ್ಕೆ ಸಿಲುಕಿದ್ದೆವು. ಹೀಗಾಗಿ ಕೆಲವು ದಿನಗಳ ಕಾಲ ನಾನು ದೂರವಾಗಿದ್ದೆವು.ನಾನು ಎಂದೂ ಪೊಲೀಸ್ ಠಾಣೆಯ ಮೆಟ್ಟಿಲು ಸಹ ಹತ್ತಿಲ್ಲ. ಫೆಬ್ರವರಿ 6 ರಂದು ಹಳಿಯಾಳಕ್ಕೆ ಬಂದು ಹೋಗಿದ್ದಾರೆ. ಅವರ ಮಾವನ ಪುಣ್ಯತಿಥಿ ಕಾರ್ಯಕ್ರಮಕ್ಕೆ ಬಂದು ಹೋಗಿದ್ದರು. ನನ್ನ ಪುತ್ರಿಗೆ ಯಾವುದೇ ಸಮಸ್ಯೆ ಇದಿದ್ದರೆ ತಾಯಿಯ ಬಳಿ ಹೇಳಿಕೊಳ್ಳಬಹುದಿತ್ತು. ತಾಯಿಯ ಬಳಿ ಸಮಸ್ಯೆ ಹೇಳಿಕೊಳ್ಳುವುದಕ್ಕೆ ಆಗದೆ ಇದಿದ್ದರೆ ಅವಳ ಪ್ರೀತಿಯ ಅಜ್ಜಿಯ ಬಳಿಯಾದ್ರೂ ಹೇಳಿಕೊಳ್ಳಬಹುದಿತ್ತು ಎಂದು ಯುವತಿಯ ತಂದೆ ಹೇಳಿದರು. ಈ ಹೇಳಿಕೆ ನೀಡಲು “ನಾವು ಯಾರದ್ದೇ ಒತ್ತಡಕ್ಕೂ ಒಳಗಾಗಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯುವತಿಯ ತಾಯಿ

ಈ ಕುರಿತು ಹೇಳಿಕೆ ನೀಡಿದ ಯುವತಿಯ ತಾಯಿ, ‘ಏನು ಮಾಡುವುದಿಲ್ಲ ಎಂದು ನನ್ನ ಪುತ್ರಿ ನನಗೆ ಹೇಳಿದ್ದರು. ಡಿಕೆಶಿ ಸಂಬಂಧಿಕರು ಕೆಲಸ ಕೊಡಿಸುವುದಾಗಿ ಹೇಳಿದ್ದರು. 4 ತಿಂಗಳ ಹಿಂದೆ ನನ್ನ ಪುತ್ರಿ ಹೇಳಿದ್ದಳು. ರಾಜಕಾರಣಗಳ ಜತೆ ಕೆಲಸ ಬೇಡವೆಂದು ನಾನು ಬೈದಿದ್ದೆ. ನಮ್ಮ ಜೊತೆ ಮಾತನಾಡುವುದಕ್ಕೆ ನನ್ನ ಪುತ್ರಿಗೆ ಅವಕಾಶ ನೀಡುತ್ತಿಲ್ಲ ಎಂದು ಯುವತಿ ತಾಯಿ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದರು.

ನನ್ನ ಅಕ್ಕನಿಗೆ ಎಷ್ಟು ಕಷ್ಟ ಕೊಟ್ಟಿದ್ದಾರೋ ಗೊತ್ತಿಲ್ಲ. ಅವಳಿಗೆ 4 ದಿನ ಸಮಯವನ್ನು ನೀಡಬೇಕು ಎಂದು ಬೆಳಗಾವಿಯಲ್ಲಿ ಸಿಡಿ ಯುವತಿಯ ಸಹೋದರ ಮನವಿ ಮಾಡಿದರು.

ಇದನ್ನೂ ಓದಿ: ಅತ್ತ ಕೋರ್ಟ್​ಗೆ ಲೆಟರ್ ಬರೆದ ಸಿಡಿ ಯುವತಿ​, ಇತ್ತ ಎಸ್​ಐಟಿ ವಿಚಾರಣೆಗೆ ಹಾಜರಾದ ಎ1 ರಮೇಶ್​ ಜಾರಕಿಹೊಳಿ

ಯಾವುದೇ ಪ್ರಭಾವಕ್ಕೆ ಒಳಗಾಗದೆ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ: ಬಸವರಾಜ ಬೊಮ್ಮಾಯಿ ಸ್ಪಷ್ಟನೆ

Published On - 1:52 pm, Mon, 29 March 21