ಅತ್ತ ಕೋರ್ಟ್ಗೆ ಲೆಟರ್ ಬರೆದ ಸಿಡಿ ಯುವತಿ, ಇತ್ತ ಎಸ್‌ಐಟಿ ವಿಚಾರಣೆಗೆ ಹಾಜರಾದ ಎ1 ರಮೇಶ್ ಜಾರಕಿಹೊಳಿ
ತಮ್ಮ ಆಪ್ತ, ಮಾಜಿ ಎಂಎಲ್ಎ ನಾಗರಾಜ್ ಹಾಗೂ ವಕೀಲರ ಜೊತೆ ರಮೇಶ್ ಜಾರಕಿಹೊಳಿ ವಿಚಾರಣೆಗೆ ಆಗಮಿಸಿದ್ದಾರೆ. ಈ ಮಧ್ಯೆ, ಅತ್ತ ಸಿಡಿ ಯುವತಿ ಕೋರ್ಟ್ಗೆ ಈ ಮೇಲ್ ಮೂಲಕ ಲೆಟರ್ ಬರೆದು, ತಾನು ಸಂತ್ರಸ್ತೆಯಾಗಿದ್ದು, ಪ್ರಕರಣವನ್ನು ತಮ್ಮ ನಿಗಾದಲ್ಲಿ ವಿಚಾರಣೆ ನಡೆಸಬೇಕು ಎಂದು ಮುಖ್ಯ ನ್ಯಾಯಮೂರ್ತಿಗೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಬೆಂಗಳೂರು: ವಾರದ ಆರಂಭ ದಿನವಾದ ಸೋಮವಾರ ಮಾಜಿ ಸಚಿವ, ಹಾಲಿ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಲೈಂಗಿಕ ಸಿಡಿ ಹಗರಣದಲ್ಲಿ ನಿರೀಕ್ಷಿತವಾಗಿಯೇ ಬಿರುಸಿನ ಬೆಳವಣಿಗೆಗಳು ಆರಂಭವಾಗಿವೆ. ಪ್ರಮುಖವಾಗಿ ನಿನ್ನೆ ಸಿಡಿ ಯುವತಿ ಕೋರ್ಟ್ಗೆ ಪತ್ರ ಮುಖೇನ ಮೊರೆಹೋಗಿದ್ದಾಳೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ ಎಸ್‌ಐಟಿ ಪೊಲೀಸರು ಅದೇ ಸಮಯದಲ್ಲಿ ತ್ವರಿತವಾಗಿ ರಮೇಶ್ ಜಾರಕಿಹೊಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಪೊಲೀಸರು ಸೂಚಿಸಿದ್ದರು. ಅದರಂತೆ ರಮೇಶ್ ಜಾರಕಿಹೊಳಿ ಇದೀಗ ವಿಚಾರಣೆಗೆ ಖುದ್ದಾಗಿ ಹಾಜರಾಗಿದ್ದಾರೆ.
ಲೈಂಗಿಕ ಸಿಡಿ ಪ್ರಕರಣದಲ್ಲಿ ಎ1 ಆಗಿರುವ ಮಾಜಿ ಸಚಿವ, ಹಾಲಿ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರು ಇಂದು ಪ್ರಾಂಪ್ಟ್ ಆಗಿ ಎಸ್‌ಐಟಿ ವಿಚಾರಣೆಗೆ ಹಾಜರಾಗಿದ್ದಾರೆ. ಆಡುಗೋಡಿಯಲ್ಲಿರುವ ಎಸ್‌ಐಟಿ ಟೆಕ್ನಿಕಲ್ ವಿಂಗ್ ಎದುರು ವಿಚಾರಣೆಗೆ ಸೋಮವಾರ ಬೆಳಗ್ಗೆ 10ಕ್ಕೆ ಹಾಜರಾಗುವಂತೆ ಬೆಂಗಳೂರಿನ ಕಬ್ಬನ್ಪಾರ್ಕ್ ಠಾಣೆ ಪೊಲೀಸರು ಜಾರಕಿಹೊಳಿಗೆ ನೋಟಿಸ್ ನೀಡಿದ್ದರು.
ಅದರಂತೆ ತಮ್ಮ ಆಪ್ತ, ಮಾಜಿ ಎಂಎಲ್ಎ ನಾಗರಾಜ್ ಹಾಗೂ ವಕೀಲರ ಜೊತೆ ರಮೇಶ್ ಜಾರಕಿಹೊಳಿ ವಿಚಾರಣೆಗೆ ಆಗಮಿಸಿದ್ದಾರೆ. ಈ ಮಧ್ಯೆ, ಅತ್ತ ಸಿಡಿ ಯುವತಿ ಕೋರ್ಟ್ಗೆ ಈ ಮೇಲ್ ಮೂಲಕ ಲೆಟರ್ ಬರೆದು, ತಾನು ಸಂತ್ರಸ್ತೆಯಾಗಿದ್ದು, ಪ್ರಕರಣವನ್ನು ತಮ್ಮ ನಿಗಾದಲ್ಲಿ ವಿಚಾರಣೆ ನಡೆಸಬೇಕು ಎಂದು ಮುಖ್ಯ ನ್ಯಾಯಮೂರ್ತಿಗೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ನಿರ್ಭಯಾ ಪ್ರಕರಣದ ನಂತರ ಭಾರತೀಯ ದಂಡ ಸಂಹಿತೆ ಕಾನೂನಿಗೆ (ಐಪಿಸಿ) ತಿದ್ದುಪಡಿ ತರಲಾಗಿದ್ದು, ಸಂತ್ರಸ್ತೆಯು ಸಿಆರ್‌ಪಿಸಿ 164 ಅಡಿ ಹೇಳಿಕೆ ಕಡ್ಡಾಯವಾಗಿರುತ್ತದೆ. ಹಾಗಾಗಿ, ಹಾಲಿ ಸಿಡಿ ಪ್ರಕರಣದಲ್ಲಿ ವಕೀಲ ಜಗದೀಶ್ ಅವರು ಸಂತ್ರಸ್ತೆಯನ್ನು ಖುದ್ದಾಗಿ ಹಾಜರುಪಡಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಒಂದು ವೇಳೆ ಯುವತಿ ಕೋರ್ಟ್ಗೆ ಹಾಜರಾದಲ್ಲಿ ತನಿಖಾಧಿಕಾರಿ ಸಮ್ಮುಖದಲ್ಲಿ ಮ್ಯಾಜಿಸ್ಟ್ರೇಟ್ ಹೇಳಿಕೆ ದಾಖಲು ಮಾಡಿಕೊಳ್ಳುವ ಸಾಧ್ಯತೆಯಿದೆ.
ಆಡುಗೋಡಿ ಎಸ್‌ಐಟಿ ಟೆಕ್ನಿಕಲ್ ಸೆಲ್ ಮುಂಭಾಗ ಭದ್ರತೆ ಬಿಗಿ ಇದೀಗತಾನೆ, ಮಾಜಿ ಸಚಿವರ ಎಂಟ್ರಿ ಬೆನ್ನಲ್ಲೇ ಆಡುಗೋಡಿ ಟೆಕ್ನಿಕಲ್ ಸೆಲ್ ಮುಂಭಾಗ ಭದ್ರತೆ ಹೆಚ್ಚಿಸಲಾಗಿದೆ. ಓರ್ವ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಭದ್ರತಾ ಏರ್ಪಾಟು ಮಾಡಲಾಗಿದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿಚಾರಣೆ ಆರಂಭವಾಗಿದೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಮಾರುತಿ ಅವರಿಂದ ರಮೇಶ್ ಜಾರಕಿಹೊಳಿ ವಿಚಾರಣೆ ನಡೆದಿದೆ. ಕ್ಯಾಮರಾ ಮುಂದೆ ರಮೇಶ್ ಜಾರಕಿಹೊಳಿ ಹೇಳಿಕೆಯನ್ನು ತನಿಖಾಧಿಕಾರಿ ದಾಖಲಿಸಿಕೊಳ್ಳಲಿದ್ದಾರೆ. ಎಸ್ಐಟಿಯ ಹಿರಿಯ ಅಧಿಕಾರಿ, ಸಿಸಿಬಿ ಅಪರಾಧ ವಿಭಾಗದ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಅವರು ಆಡುಗೊಡಿ ಟೆಕ್ನಿಕಲ್ ಸೆಲ್ನಲ್ಲಿ ಉಪಸ್ಥಿತರಿದ್ದಾರೆ.
ಇದೇ ವೇಳೆ, ಜಾರಕಿಹೊಳಿ ಸಿಡಿ ಕೇಸ್ನಲ್ಲಿ ಮಾಜಿ ಪತ್ರಕರ್ತ ನರೇಶ್ ಗೌಡ ಪತ್ನಿ ಇಂದು ಬಸವನಗುಡಿಯ ಮಹಿಳಾ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ. ಮಾಸ್ಟರ್ ಮೈಂಡ್ ನರೇಶ್ ಪತ್ನಿಗೆ ಕಳೆದ ವಾರವೇ ನೋಟಿಸ್ ನೀಡಲಾಗಿತ್ತು. ಇನ್ನು, ಶ್ರವಣ್ ಸಹೋದರ ಚೇತನ್‌ಗೂ ನೊಟೀಸ್ ನೀಡಲಾಗಿದೆ. ಇಂದು ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ.
Published On - 10:12 am, Mon, 29 March 21