PM Kisan Yojana Alert: ಪಿಎಂ ಕಿಸಾನ್ ಫಲಾನುಭವಿಗಳ ತುರ್ತು ಗಮನಕ್ಕೆ.. e-KYC ನವೀಕರಿಸಿದಿರಾ? ಇನ್ನು 5 ದಿನ ಮಾತ್ರವೇ ಉಳಿದಿದೆ

| Updated By: ಸಾಧು ಶ್ರೀನಾಥ್​

Updated on: Jul 26, 2022 | 5:23 PM

ರೈತರ ಅರ್ಹತೆಯನ್ನು ಸಾಬೀತುಪಡಿಸಲು ಪ್ರಧಾನ ಮಂತ್ರಿ ಕಿಸಾನ್ ಯೋಜನೆಗೆ KYC ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಲಾಗಿದೆ. ಇದು ಪಿಎಂ ಕಿಸಾನ್ ಯೋಜನೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ. ಅಕ್ರಮ, ಅನರ್ಹ, ವಂಚನೆಯ ಸಾಧ್ಯತೆಗಳನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.

PM Kisan Yojana Alert: ಪಿಎಂ ಕಿಸಾನ್ ಫಲಾನುಭವಿಗಳ ತುರ್ತು ಗಮನಕ್ಕೆ.. e-KYC ನವೀಕರಿಸಿದಿರಾ? ಇನ್ನು 5 ದಿನ ಮಾತ್ರವೇ ಉಳಿದಿದೆ
ಪಿಎಂ ಕಿಸಾನ್ ಫಲಾನುಭವಿಗಳ ತುರ್ತು ಗಮನಕ್ಕೆ.. e-KYC ನವೀಕರಿಸಿದಿರಾ? ಇನ್ನು 5 ದಿನ ಮಾತ್ರವೇ ಉಳಿದಿದೆ
Follow us on

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ರೈತ ಯೋಜನೆಯಾಗಿದ್ದು, ಕೇಂದ್ರ ಸರ್ಕಾರ ರೈತ ಕುಟುಂಬಗಳಿಗೆ ಪ್ರತಿ ವರ್ಷ ಅನ್ನದಾತ ರೈತರ ಖಾತೆಗೆ 6,000 ರೂ. (ಮೂರು ಕಂತುಗಳಲ್ಲಿ ತಲಾ 2 ಸಾವಿರ ಠೇವಣಿ) ಭರ್ತಿ ಮಾಡುತ್ತಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಫಲಾನುಭವಿಗಳ ರೈತರು 12 ನೇ ಕಂತಿನ ಪ್ರಯೋಜನವನ್ನು ಸಕಾಲದಲ್ಲಿ ಪಡೆಯಬಹುದು. ಆದರೆ ಇದಕ್ಕಾಗಿ ಕೇಂದ್ರ ಸರ್ಕಾರ ಇ-ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿದೆ. ಪಿಎಂ ಕಿಸಾನ್‌ನ ಅಧಿಕೃತ ವೆಬ್‌ಸೈಟ್‌ ಮಾಹಿತಿ ಪ್ರಕಾರ, ಪಿಎಂ ಕಿಸಾನ್ ನೋಂದಾಯಿತ ರೈತರಿಗೆ KYC ಅನ್ನು ಲಗತ್ತಿಸಲು ಕೊನೆಯ ದಿನಾಂಕ 31 ಜುಲೈ 2022 ಆಗಿದೆ.

ಈ KYC… ಹೀಗೆ ಅಪ್ಡೇಟ್ ಮಾಡಿ

e-KYC ಯ ಪೂರ್ಣ ರೂಪವು ‘ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ -KYC’ ಅಂದರೆ ನಿಮ್ಮ ಗ್ರಾಹಕರನ್ನು ತಿಳಿಯಿರಿ ಎಂಬುದಾಗಿದೆ. ಇದರ ಅಡಿ ಸರ್ಕಾರದ ಅವಗಾಹನೆಗಾಗಿ ಫಲಾನುಭವಿಯ ಗುರುತಿಗೆ ತಮ್ಮ ತಮ್ಮ ಖಾತೆಗಳನ್ನು ದಾಖಲಿಸಬಹುದು. ಇದರಿಂದ ವಂಚನೆಯ ಸಾಧ್ಯತೆಗಳನ್ನು ತಡೆಯಬಹುದು. ರೈತರು ಬಯಸಿದರೆ.. ಅವರು CSC ಅಥವಾ PM ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಕೆಲವೇ ನಿಮಿಷಗಳಲ್ಲಿ ಇ-ಕೆವೈಸಿ ಪೂರ್ಣಗೊಳಿಸಬಹುದು.

ಇದಕ್ಕಾಗಿ, ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ

ವೆಬ್ ಸೈಟ್ ಹೋಮ್ ಪೇಜ್ ಓಪನ್ ಆದ ತಕ್ಷಣ ಫಾರ್ಮರ್ಸ್ ಕಾರ್ನರ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಮುಂದಿನ ಹಂತದಲ್ಲಿ, e-KYC ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ಹೊಸ ವೆಬ್ ಪುಟ ತೆರೆದ ತಕ್ಷಣ ರೈತ.. ಆಧಾರ್ ಸಂಖ್ಯೆಯನ್ನು ನಮೂದಿಸುವ ಮೂಲಕ OTP ಪಡೆಯಿರಿ.

ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ OTP ನೀಡಲಾಗುತ್ತದೆ.

ಮೊಬೈಲ್‌ನಲ್ಲಿ OTP ಸ್ವೀಕರಿಸಿದ ನಂತರ, ಅದನ್ನು ವೆಬ್‌ಸೈಟ್‌ನಲ್ಲಿ ನಮೂದಿಸಿ ಮತ್ತು ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

ಮನೆಯಲ್ಲಿ ಕುಳಿತು ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು, ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಯೋಜನೆಗಾಗಿ ಟೋಲ್ ಫ್ರೀ ಸಂಖ್ಯೆ 18001155266 ಅನ್ನು ನೀಡಿದೆ. ನೀವು 155261 / 011-24300606 ಅನ್ನು ಸಹ ಸಂಪರ್ಕಿಸಬಹುದು.

ಇ-ಕೆವೈಸಿ ಏಕೆ?

ಪಿಎಂ ಕಿಸಾನ್ ಯೋಜನೆಯಿಂದ ಹಲವು ಅಕ್ರಮ ಫಲಾನುಭವಿಗಳು ಆರ್ಥಿಕ ಲಾಭ ಪಡೆಯುತ್ತಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಪಿಎಂ ಕಿಸಾನ್ ಯೋಜನೆ ಫಲವು ಕೆಲವು ಕಾರಣಗಳಿಂದ ಯೋಜನೆಗೆ ಅರ್ಹತೆಯಿಲ್ಲದ ಫಲಾನುಭವಿಗಳು ಮತ್ತು ಇತರೆ ರೈತರ ಖಾತೆಗಳನ್ನು ತಲುಪುತ್ತಿದೆ. ಇಂತಹ ಚಟುವಟಿಕೆಗಳನ್ನು ತಡೆಗಟ್ಟಲು ರೈತರ ಅರ್ಹತೆಯನ್ನು ಸಾಬೀತುಪಡಿಸಲು ಪ್ರಧಾನ ಮಂತ್ರಿ ಕಿಸಾನ್ ಯೋಜನೆಗೆ KYC ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಲಾಗಿದೆ. ಇದು ಪಿಎಂ ಕಿಸಾನ್ ಯೋಜನೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ. ಅಕ್ರಮ, ಅನರ್ಹ, ವಂಚನೆಯ ಸಾಧ್ಯತೆಗಳನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.

ತೆಲುಗುವಿನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ