ದೆಹಲಿ: ಇಂದು ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ವಿಶ್ವ ಮಹಿಳಾ ದಿನಾಚರಣೆಗೆ ಶುಭಾಶಯ ಕೋರಿದ್ದಾರೆ. ವಿಶ್ವ ಮಹಿಳಾ ದಿನಾಚರಣೆ ಕುರಿತಂತೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ನಮ್ಮ ದೇಶದ ಮಹಿಳೆಯರು ಸಾಕಷ್ಟು ಸಾಧನೆ ಮಾಡಿದ್ದಾರೆ. ಮಹಿಳಾ ಸಬಲೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಅವಕಾಶವನ್ನು ಪಡೆಯುತ್ತಿರುವುದು ನಮ್ಮ ಸರ್ಕಾರದ ಗೌರವವಾಗಿದೆ ಎಂದು ಬರೆದುಕೊಂಡಿದ್ದಾರೆ.
Saluting our indomitable #NariShakti on International Women's Day! India takes pride in the many accomplishments of the women of our nation. It is our Government’s honour to be getting the opportunity to work towards furthering women empowerment across a wide range of sectors.
— Narendra Modi (@narendramodi) March 8, 2021
ಬೆಂಗಳೂರಲ್ಲಿ ಬೈಕ್ ಹಾಗೂ ಕಾರ್ ರ್ಯಾಲಿ..
ಇಂದು ವಿಶ್ವ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕಂಠೀರವ ಕ್ರೀಡಾಂಗಣದಲ್ಲಿ ಮಹಿಳೆಯರಿಗೆ ಬೈಕ್ ಹಾಗೂ ಕಾರ್ ರ್ಯಾಲಿ ಆಯೋಜನೆ ಮಾಡಲಾಗಿದೆ. ಸವಾಲುಗಳನ್ನ ಎದುರಿಸಿ ಶೀರ್ಷಿಕೆಯಡಿ ಮಹಿಳೆಯರಿಗೆ ವಿವಿಧ ಕಾರ್ಯಕ್ರಮಗಳು ಆಯೋಜನೆ ಮಾಡಲಾಗಿದ್ದು, ಬೈಕ್ ರ್ಯಾಲಿಗೆ ಸಚಿವ ಕೆ ಸಿ ನಾರಾಯಣಗೌಡ ಅವರಿಂದ ಚಾಲನೆ ನೀಡಲಾಯಿತು. 150 ಕ್ಕೂ ಹೆಚ್ಚು ಮಹಿಳೆಯರು ರ್ಯಾಲಿಯಲ್ಲಿ ಭಾಗಿಯಾಗುದ್ದು, ಹೆಣ್ಮೈಕ್ಳೆ ಸ್ಟ್ರಾಂಗು ಗುರು ಅಂತ ವಿಂಟೇಜ್ ಕಾರ್, ಬುಲೆಟ್ ಹತ್ತಿ ಸವಾರಿ ಹೊರಟರು.
ಮಿಡ್ನೈಟ್ ವಾಕಥಾನ್..
ಇಂದು ವಿಶ್ವ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ರೇನ್ಬೋ ಮಕ್ಕಳ ಆಸ್ಪತ್ರೆಯಿಂದ ಮಿಡ್ ನೈಟ್ ವಾಖಥಾನ್ ಆಯೋಜನೆ ಮಾಡಲಾಗಿತ್ತು. ಐಜಿಪಿ ಡಿ. ರೂಪ, ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ವಾಖಥಾನ್ನಲ್ಲಿ ಭಾಗಿಯಾಗಿದ್ದರು. ಮಹಿಳಾ ಸುರಕ್ಷತೆ ಕುರಿತಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬನ್ನೇರುಘಟ್ಟ ರಸ್ತೆಯ ಮೀನಾಕ್ಷಿ ಮಾಲ್ನಿಂದ ವಾಖಥಾನ್ ಆರಂಭಿಸಲಾಗಿತ್ತು. ರೈನ್ಬೋ ಮಕ್ಕಳ ಆಸ್ಪತ್ರೆಯ ಸರ್ಕಾರಿ ಅಧಿಕಾರಿಗಳು, ಸೆಲೆಬ್ರಿಟಿಗಳು, ಉದ್ಯಮಿಗಳು ಹಾಗೂ ಸಾರ್ವಜನಿಕರು ಸೇರಿದಂತೆ ನೂರಾರು ಮಹಿಳೆಯರು ವಾಕಥಾನ್ನಲ್ಲಿ ಬಾಗಿಯಾಗಿದ್ದರು.
Published On - 9:05 am, Mon, 8 March 21