ಕರ್ನಾಟಕ ಬಜೆಟ್ 2021: ಸಿಎಂ ಯಡಿಯೂರಪ್ಪ ಬಜೆಟ್​ ಮೇಲೆ ಸಾರ್ವಜನಿಕರ ನಿರೀಕ್ಷೆಗಳೇನು? ಇಲ್ಲಿದೆ ಮಾಹಿತಿ

Karnataka Budget 2021: ಕೊರೊನಾದಿಂದಾಗಿ ಕೃಷಿ, ಆರೋಗ್ಯ, ಶಿಕ್ಷಣ ಕ್ಷೇತ್ರಗಳು ನಲುಗಿಹೋಗಿವೆ. ಹೀಗಾಗಿ ಈ ಕ್ಷೇತ್ರಗಳು ಹೆಚ್ಚಿನ ಅನುದಾನದ ನಿರೀಕ್ಷೆಯಲ್ಲಿವೆ.

ಕರ್ನಾಟಕ ಬಜೆಟ್ 2021: ಸಿಎಂ ಯಡಿಯೂರಪ್ಪ ಬಜೆಟ್​ ಮೇಲೆ ಸಾರ್ವಜನಿಕರ ನಿರೀಕ್ಷೆಗಳೇನು? ಇಲ್ಲಿದೆ ಮಾಹಿತಿ
ಬಿ.ಎಸ್. ಯಡಿಯೂರಪ್ಪ
Follow us
ಪೃಥ್ವಿಶಂಕರ
|

Updated on: Mar 08, 2021 | 7:52 AM

ಬೆಂಗಳೂರು: ಕೇಂದ್ರ ಬಜೆಟ್ ಆಯ್ತು, ಈಗ ರಾಜ್ಯ ಬಜೆಟ್ ಸರದಿ. ರಾಜ್ಯ ಬಜೆಟ್​ಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಮಧ್ಯಾಹ್ನ 12 ಗಂಟೆಗೆ ವಿಧಾನಸೌದದಲ್ಲಿ ಸಿಎಂ ಯಡಿಯೂರಪ್ಪ ಬಜೆಟ್ ಮಂಡನೆ ಮಾಡಲಿದ್ದಾರೆ. ರಾಜ್ಯದ ಜನ ಬಜೆಟ್‌ ಬಗ್ಗೆ ನೂರಾರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದ್ರೆ, ಸರ್ಕಾರ ಈ ನಿರೀಕ್ಷೆಗಳನ್ನ ಈಡೇರಿಸುತ್ತಾ, ಹಾಗಾದ್ರೆ ಜನರ ನಿರೀಕ್ಷೆಗಳೇನು. ಇಲ್ಲಿದೆ ಮಾಹಿತಿ

ಪ್ರಸಕ್ತ ಆರ್ಥಿಕ ವರ್ಷದ ಬಜೆಟ್ ಮಂಡಿಸಲು ಸಿಎಂ ಯಡಿಯೂರಪ್ಪ ಸಿದ್ಧರಾಗಿದ್ದಾರೆ. ಅದೇ ರೀತಿ ರಾಜ್ಯದ ಜನ ಹಲವಾರು ನಿರೀಕ್ಷೆಗಳನ್ನ ಇಟ್ಟುಕೊಂಡಿದ್ದಾರೆ. ಜಿಲ್ಲಾವಾರು ಅನೇಕ ಬೇಡಿಕೆಗಳು ಇವೆ. ಈ ಪೈಕಿ ಕೆಲವು ಬೇಡಿಕೆಗಳು ದಶಕಗಳಿಂದಲೂ ಇದ್ದರೂ ಇನ್ನೂ ಈಡೇರಿಲ್ಲ. ಹಾಗಾಗಿ, ಈ ಬಜೆಟ್‌ನಲ್ಲಾದರೂ ಅವುಗಳಿಗೆ ಮುಕ್ತಿ ಸಿಗಬಹುದೇ ಎಂಬ ಕಾತರವಿದೆ.

ಬಜೆಟ್‌ ನಿರೀಕ್ಷೆಗಳೇನು..? ಕೊರೊನಾದಿಂದಾಗಿ ಕೃಷಿ, ಆರೋಗ್ಯ, ಶಿಕ್ಷಣ ಕ್ಷೇತ್ರಗಳು ನಲುಗಿಹೋಗಿವೆ. ಹೀಗಾಗಿ ಈ ಕ್ಷೇತ್ರಗಳು ಹೆಚ್ಚಿನ ಅನುದಾನದ ನಿರೀಕ್ಷೆಯಲ್ಲಿವೆ. ಜೊತೆಗೆ ರೈತರ ಹೋರಾಟದ ಹಿನ್ನೆಲೆ ಕೃಷಿ ಮಾರುಕಟ್ಟೆಗೆ ಹೊಸ ಯೋಜನೆ, ಕೃಷಿ ಮೂಲಸೌಕರ್ಯಕ್ಕೆ ಒತ್ತುನೀಡಬೇಕು ಅನ್ನೋದು ಈ ಬಾರಿಯ ಬಜೆಟ್‌ನ ನಿರೀಕ್ಷೆಯಾಗಿದೆ. ಅಲ್ಲದೇ ಪ್ರತಿ ತಾಲೂಕಿನಲ್ಲಿ ಎರಡು ಗೋಶಾಲೆ ಆರಂಭಿಸಲು ಆರ್ಥಿಕ ನೆರವು ನೀಡುವುದು. ಒತ್ತುವರಿಯಾಗಿರುವ ಗೋಮಾಳಗಳ ಸ್ವಾಧೀನಕ್ಕೆ ಪ್ರತ್ಯೇಕ ನೀತಿ ರೂಪಿಸುವುದು.

ಸಾರಿಗೆ ನಿಗಮಗಳ ಆರ್ಥಿಕ ಪುನಶ್ಚೇತನಕ್ಕೆ ಪರ್ಯಾಯ ಯೋಜನೆ ಜಾರಿಯಾಗಬೇಕು ಅನ್ನೋ ನಿರೀಕ್ಷೆ ಇದೆ. ಜೊತೆಗೆ ಬೆಂಗಳೂರು ಅಭಿವೃದ್ಧಿಗಾಗಿ ಸರ್ಕಾರ ಒತ್ತು ಕೊಡಬೇಕಿದ್ದು, ಬಿಬಿಎಂಪಿಯೂ ಸರ್ಕಾರದಿಂದ ಹೆಚ್ಚಿನ ಅನುದಾನದ ನಿರೀಕ್ಷೆ ಮಾಡ್ತಿದೆ. ಜೊತೆಗೆ ಸ್ಮಾರ್ಟ್‌ ಸಿಟಿ ಯೋಜನೆ, ಸೈಕಲ್ ಪಾತ್, ರಸ್ತೆ ಅಭಿವೃದ್ಧಿಗೆ ಒತ್ತು ನೀಡಬೇಕಿದೆ. ಇನ್ನೂ ಬಿಡಿಎ ಒತ್ತುವರಿ ಜಾಗ ತೆರವು ಮಾಡಿ ನಿವೇಶನ ಹಂಚಿಕೆ ಮಾಡುವುದು, ಮೆಟ್ರೋ 2ನೇ ಮತ್ತು 3ನೇ ಹಂತದ ಕಾಮಗಾರಿ ಮತ್ತು ಏರ್‌ಪೋರ್ಟ್‌ ಮೆಟ್ರೋ ಮಾರ್ಗಕ್ಕೆ ಅನುದಾನ ಸಿಗುತ್ತಾ ಅನ್ನೋ ನಿರೀಕ್ಷೆ ಸಹಜವಾಗಿಯೇ ಗರಿಗೆದರಿದೆ.

ಹತ್ತು ಹಲವು ಸವಾಲುಗಳನ್ನು ಮೀರಿ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ಜನತೆಯ ಬಯಕೆ ತಿರಿಸಬೇಕಿದೆ. ಶಾಸಕರನ್ನು ಸಮಾಧಾನಪಡಿಬೇಕಿದೆ. ವಿಪಕ್ಷಗಳನ್ನೂ ತೃಪ್ತಿಪಡಿಸಬೇಕಿದೆ. ಹೀಗಾಗಿಯೇ ರಾಜಾಹುಲಿ ಬಜೆಟ್ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ.

ಇದನ್ನೂ ಓದಿ:ಕರ್ನಾಟಕ ಬಜೆಟ್ 2021: ಇಂದು 2021-22ನೇ ಸಾಲಿನ ರಾಜ್ಯ ಬಜೆಟ್ ಮಂಡನೆ, ಸಿಎಂ ಯಡಿಯೂರಪ್ಪ ಮುಂದಿವೆ ಸಾಕಷ್ಟು ಸವಾಲುಗಳು