Narendra Modi: ಸಾಮಾಜಿಕ, ಆರ್ಥಿಕ ಅಭಿವೃದ್ಧಿಗಾಗಿ ಮೈಸೂರು ಕುಶಾಲನಗರ ಹೆದ್ದಾರಿ ಯೋಜನೆ; ಪ್ರಧಾನಿ ಮೋದಿ

|

Updated on: Mar 11, 2023 | 8:28 PM

ಭಾನುವಾರ ಕರ್ನಾಟಕಕ್ಕೆ ಭೇಟಿ ನೀಡುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಸಂಜೆ ಸರಣಿ ಟ್ವೀಟ್ ಮಾಡಿದ್ದು, ವಿವರಗಳನ್ನು ಹಂಚಿಕೊಂಡಿದ್ದಾರೆ. ನಾನು ನಾಳೆ ಕರ್ನಾಟಕದಲ್ಲಿರಲಿದ್ದೇನೆ. ಮಂಡ್ಯ , ಹುಬ್ಬಳ್ಳಿ, ಧಾರವಾಡದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.

Narendra Modi: ಸಾಮಾಜಿಕ, ಆರ್ಥಿಕ ಅಭಿವೃದ್ಧಿಗಾಗಿ ಮೈಸೂರು ಕುಶಾಲನಗರ ಹೆದ್ದಾರಿ ಯೋಜನೆ; ಪ್ರಧಾನಿ ಮೋದಿ
ಬೆಂಗಳೂರು ಮೈಸೂರು ಎಕ್ಸ್​​ಪ್ರೆಸ್​ ವೇ
Image Credit source: Twitter
Follow us on

ಬೆಂಗಳೂರು: ಭಾನುವಾರ ಕರ್ನಾಟಕಕ್ಕೆ ಭೇಟಿ ನೀಡುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಶನಿವಾರ ಸಂಜೆ ಸರಣಿ ಟ್ವೀಟ್ ಮಾಡಿದ್ದು, ವಿವರಗಳನ್ನು ಹಂಚಿಕೊಂಡಿದ್ದಾರೆ. ನಾನು ನಾಳೆ ಕರ್ನಾಟಕದಲ್ಲಿರಲಿದ್ದೇನೆ. ಮಂಡ್ಯ (Mandya), ಹುಬ್ಬಳ್ಳಿ, ಧಾರವಾಡದಲ್ಲಿ (Hubballi Dharwad) ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದೇನೆ. ಸುಮಾರು 16,000 ಕೋಟಿ ರೂ. ಮೊತ್ತದ ಯೋಜನೆಗಳ ಉದ್ಘಾಟನೆ, ಶಂಕುಸ್ಥಾನಪನೆ ನೆರವೇರಲಿದೆ ಎಂದು ಅವರು ಟ್ವೀಟ್​ನಲ್ಲಿ ಉಲ್ಲೇಖಿಸಿದ್ದಾರೆ. ಮಂಡ್ಯದಲ್ಲಿ ಬೆಂಗಳೂರು ಮೈಸೂರು ಎಕ್ಸ್​​ಪ್ರೆಸ್​ ವೇ (Bengaluru-Mysuru Expressway) ಲೋಕಾರ್ಪಣೆ ಮಾಡಲಾಗುವುದು. ಮೈಸೂರು ಕುಶಾಲನಗರ ಹೈವೇಗೆ (Mysuru-Kushalnagar highway) ಶಂಕುಸ್ಥಾಪನೆ ಮಾಡಲಾಗುವುದು. ಈ ಯೋಜನೆಗಳು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದರ ಜತೆಗೆ ಸಾಮಾಜಿಕ, ಆರ್ಥಿಕ ಬೆಳವಣಿಗೆಗೆ ಪೂರಕವಾಗಲಿವೆ ಎಂದು ಟ್ವೀಟ್​ನಲ್ಲಿ ಪ್ರಧಾನಿ ಉಲ್ಲೇಖಿಸಿದ್ದಾರೆ.

ಹುಬ್ಬಳ್ಳಿ ಧಾರವಾಡಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳಾಗಿವೆ. ಐಐಟಿ ಧಾರವಾಡ, ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ಸ್ಟೇಷನ್​ನಲ್ಲಿ ವಿಶ್ವದಲ್ಲೇ ಅತಿ ಉದ್ದದ ರೈಲ್ವೆ ಪ್ಲಾಟ್​​ಫಾರ್ಮ್​​ ಲೋಕಾರ್ಪಣೆಗೊಳಿಸಲಾಗುವುದು. ನೀರು ಪೂರೈಕೆ ಯೋಜನೆಗೆ ಶಂಕುಸ್ಥಾಪನೆ ಮಾಡಲಾಗುವುದು ಎಂದು ಮೋದಿ ತಿಳಿಸಿದ್ದಾರೆ.

ಟ್ವೀಟ್​ ಜತೆಗೆ ಬೆಂಗಳೂರು ಮೈಸೂರು ಎಕ್ಸ್​​ಪ್ರೆಸ್​ ವೇಯ ಫೋಟೊಗಳನ್ನೂ ಮೋದಿ ಪೋಸ್ಟ್ ಮಾಡಿದ್ದಾರೆ.


ಇತ್ತೀಚಿನ ದಿನಗಳಲ್ಲಿ ಪ್ರಧಾನಿಯವರು ರಾಜ್ಯಕ್ಕೆ ನೀಡುತ್ತಿರುವ ಆರನೇ ಭೇಟಿ ಇದಾಗಿದೆ. ಈಗಾಗಲೇ ಅವರು ಕೆಲವು ಬಾರಿ ರಾಜ್ಯಕ್ಕೆ ಆಗಮಿಸಿ ಹಲವು ಅಭಿವೃದ್ಧಿ ಕಾರ್ಯಗಳ, ಹಲವು ಯೋಜನೆಗಳ ಉದ್ಘಾಟನೆ ಸಮಾರಂಭಗಳಲ್ಲಿ ಭಾಗವಹಿಸಿದ್ದಾರೆ. ಅದೇ ರೀತಿ ಬಿಜೆಪಿಯ ಪ್ರಚಾರ ಕಾರ್ಯಗಳಲ್ಲಿಯೂ ಭಾಗಿಯಾಗಿದ್ದಾರೆ. ಫೆಬ್ರುವರಿ 27ರಂದು ಶಿವಮೊಗ್ಗಕ್ಕೆ ಬಂದಿದ್ದ ಮೋದಿಯವರು ಮಾಜಿ ಮುಖ್ಯಮಂತ್ರಿ ಬಿಎಸ್​​ ಯಡಿಯೂರಪ್ಪ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರ ಜತೆಗೆ ನೂತನವಾಗಿ ನಿರ್ಮಾಣವಾದ ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆಗೊಳಿಸಿದ್ದರು. ನಂತರ ಬೆಳಗಾವಿಗೆ ತೆರಳಿ ರೋಡ್​ ಶೋ ನಡೆಸಿ, ಸಮಾವೇಶದಲ್ಲಿಯೂ ಭಾಗಿಯಾಗಿದ್ದರು.

ಇದನ್ನೂ ಓದಿ: Narendra Modi: ಮಾರ್ಚ್ 25ರಂದು ಮತ್ತೆ ರಾಜ್ಯಕ್ಕೆ ಮೋದಿ; ದಾವಣಗೆರೆಯಲ್ಲಿ ವಿಜಯಸಂಕಲ್ಪ ಯಾತ್ರೆ ಸಮಾರೋಪದಲ್ಲಿ ಭಾಗಿ

ಮೋದಿಗೆ ಮಂಡ್ಯದಲ್ಲಿ ಅದ್ದೂರಿ ಸ್ವಾಗತ; ಸುಮಲತಾ

ಮೋದಿ ಅವರಿಗೆ ಮಂಡ್ಯದಲ್ಲಿ ಅದ್ದೂರಿ ಸ್ವಾಗತ ನೀಡಲಾಗುವುದು ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಶನಿವಾರ ಹೇಳಿದರು. ಶುಕ್ರವಾರವಷ್ಟೇ ಅವರು, ಇನ್ನು ಮುಂದೆ ಸಂಪೂರ್ಣವಾಗಿ ಬಿಜೆಪಿಯನ್ನು ಬೆಂಬಲಿಸುತ್ತೇನೆ ಎಂದು ಘೋಷಿಸಿದ್ದರು. ಕಾನೂನು ತೊಡಕುಗಳಿರುವ ಕಾರಣ ಸದ್ಯ ಬಿಜೆಪಿಗೆ ಸೇರ್ಪಡೆಯಾಗಿತ್ತಿಲ್ಲ, ಬೆಂಬಲ ನೀಡುತ್ತೇನೆ ಎಂದಿದ್ದರು. ಮೋದಿಗೆ ಭವ್ಯ ಸ್ವಾಗತ ನೀಡಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಹಿಂದೆಂದೂ ನೋಡದ ರೀತಿಯಲ್ಲಿ ಜನ ಪ್ರಧಾನಿ ಆಗಮನಕ್ಕೆ ಕಾತರದಿಂದ ಕಾಯುತ್ತಿದ್ದಾರೆ. ಇದೊಂದು ಬೃಹತ್ ಕಾರ್ಯಕ್ರಮ ಆಗಲಿದೆ. ಮೋದಿಗೆ ಮಂಡ್ಯದ ವಿಶೇಷ ಸಾವಯವ ಬೆಲ್ಲ ನೀಡುತ್ತೇನೆ. ನನ್ನ ಬೆಂಬಲಿಗರೂ ನಾಳೆ ರೋಡ್ ಶೋಗೆ ಸಾಥ್ ನೀಡಲಿದ್ದಾರೆ. 41 ವರ್ಷದ ಬಳಿಕ ಜಿಲ್ಲೆಗೆ ಪ್ರಧಾನಿ ಬರುತ್ತಿದ್ದಾರೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:27 pm, Sat, 11 March 23