ಪೋಕ್ಸೋ ಕೇಸ್​: ಸಿಐಡಿಯ 56 ಪ್ರಶ್ನೆಗಳಿಗೆ ಬಿಎಸ್​ ಯಡಿಯೂರಪ್ಪ ನೀಡಿದ ಉತ್ತರ ಇಲ್ಲಿದೆ

ಮಾರ್ಚ್​​ 14ರಂದು ಬಿಎಸ್​ ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಪೋಕ್ಸೋ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಜೂ.17 ಸೋಮವಾರ ಎರಡನೇ ಬಾರಿಗೆ ಸಿಐಡಿ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ವೇಳೆ ಸಿಐಡಿ ಅಧಿಕಾರಿಗಳು 56 ಪ್ರಶ್ನೆಗಳನ್ನು ಕೇಳಿದ್ದರು.

ಪೋಕ್ಸೋ ಕೇಸ್​: ಸಿಐಡಿಯ 56 ಪ್ರಶ್ನೆಗಳಿಗೆ ಬಿಎಸ್​ ಯಡಿಯೂರಪ್ಪ ನೀಡಿದ ಉತ್ತರ ಇಲ್ಲಿದೆ
ಬಿಎಸ್​ ಯಡಿಯೂರಪ್ಪ
Updated By: ವಿವೇಕ ಬಿರಾದಾರ

Updated on: Jun 18, 2024 | 3:11 PM

ಬೆಂಗಳೂರು, ಜೂನ್​ 18: ಪೋಕ್ಸೋ ಪ್ರಕರಣದಲ್ಲಿ (Pocso Case) ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ (BS Yadiyurappa) ಅವರು ಸೋಮವಾರ (ಜೂ.17) ರಂದು ಸಿಐಡಿ (CID) ವಿಚಾರಣೆಗೆ ಹಾಜರಾಗಿದ್ದರು. ಬರೊಬ್ಬರಿ ಮೂರು ಗಂಟೆಗಳ ಕಾಲ ವಿಚಾರಣೆ ನಡೆಯಿತು. ಸಿಐಡಿ ಅಧಿಕಾರಿಗಳು ಬಿಎಸ್​ ಯಡಿಯೂರಪ್ಪ ಅವರಿಗೆ 56 ಪ್ರಶ್ನೆಗಳನ್ನು ಕೇಳಿದರು. ಈ ಎಲ್ಲ ಪ್ರಶ್ನೆಗಳಿಗೆ ಬಿಎಸ್​ ಯಡಿಯೂರಪ್ಪ ಅವರು ಏನಂತ ಉತ್ತರ ನೀಡಿದರು? ಇಲ್ಲಿದೆ ವಿಚಾರಣೆಯ ಇನ್‌ಸೈಡ್ ಸುದ್ದಿ.

ಬಿಎಸ್​ ಯಡಿಯೂರಪ್ಪ ಉತ್ತರ: ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಾಗಿದೆ. ನೂರಾರು ಜನ ಮನೆಗೆ ಬರುತ್ತಾರೆ, ಹೋಗುತ್ತಾರೆ. ಇವರೂ ಬಂದು ಹೋಗಿರುವುದು ನನಗೆ ಗೋತ್ತಿಲ್ಲ. ಶಿವಮೊಗ್ಗದಲ್ಲಿ ನನಗೆ ಸಮಸ್ಯೆ ಇದೆ ಅಂತ ಹೇಳಿಕೊಂಡು ನನ್ನ ಹತ್ತಿರ ಬಂದಿದ್ದರು. ನಾನೇ ಪೊಲೀಸ್ ಆಯುಕ್ತರಿಗೆ ಫೋನ್ ಮಾಡಿ ಹೇಳಿದ್ದೆ. ಏನೋ ಕುಟುಂಬ ಸಮಸ್ಯೆ ಇದೆ ಗಂಡ ಇಲ್ಲ, ಮಗಳನ್ನ ಓದಿಸಬೇಕು ಎಂದು ಹೇಳಿದಾಗ ನಮ್ಮ ಹುಡಗರು ಹಣ ಕೊಟ್ಟು ಸಹಾಯ ಮಾಡಿದ್ದಾರೆ. ಯಾರೋ ಆಕೆಯ ಹಿಂದೆ ನಿಂತು, ನೀನು ಫೇಮಸ್‌ ಆಗುತ್ತೀಯಾ ಅಂತ ಹೇಳಿ ದೂರು ಕೊಡಿಸಿದ್ದಾರೆ ಎಂದು ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಹೇಳಿದ್ದಾರೆ.

ನನಗೆ ಆಕೆ ಯಾರೆಂದೇ ಪರಿಚಯ ಇರಲಿಲ್ಲ. ಸಮಸ್ಯೆ ಇದೆ ಎಂದು ಬಂದಾಗಲೇ ನಾನು ಆಕೆಯನ್ನ ನೋಡಿದ್ದು ಎಂದು ಹೇಳಿದರು.

ಇದನ್ನೂ ಓದಿ: ಪೋಕ್ಸೋ ಕೇಸ್‌: ಸತತ 3 ಗಂಟೆ ಸಿಐಡಿ ವಿಚಾರಣೆ ಎದುರಿಸಿದ ಬಿಎಸ್‌ ಯಡಿಯೂರಪ್ಪ

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಬಿಎಸ್‌ ಯಡಿಯೂರಪ್ಪ ಅವರ ಮೇಲಿತ್ತು. ಸಿಐಡಿ ಈ ಬಗ್ಗೆ ತನಿಖೆ ನಡೆಸುತ್ತಿತ್ತು. ಹಲವು ಬಾರಿ ನೋಟಿಸ್‌ ನೀಡಿದರು ಆರೋಪಿ ಹಾಜರಾಗುತ್ತಿಲ್ಲವೆಂದು ಸಿಐಡಿ ಕೋರ್ಟ್‌ ಮೊರೆ ಹೋಗಿತ್ತು. ಗುರುವಾರ ಬೆಂಗಳೂರು ವಿಶೇಷ ನ್ಯಾಯಾಲಯವು ಬಂಧನಕ್ಕೆ ವಾರೆಂಟ್‌ ಜಾರಿ ಮಾಡಲು ಆದೇಶಿಸಿತ್ತು. ಆದರೆ, ಶುಕ್ರವಾರ ಹೈಕೋರ್ಟ್‌ನಲ್ಲಿ ಬಂಧನ ಮಾಡದಂತೆ ಬಿಎಸ್‌ ಯಡಿಯೂರಪ್ಪ ಅರ್ಜಿ ಸಲ್ಲಿಸಿದ್ದರು. ಸದ್ಯ ವಿಚಾರಣೆ ನಡೆಸಿದ ಹೈಕೋರ್ಟ್‌, ಬಂಧನ ಮಾಡದಂತೆ ಹಾಗೂ ಜೂನ್‌ 17ಕ್ಕೆ ತಪ್ಪದೆ ತನಿಖೆಗೆ ಹಾಜರಾಗುವಂತೆ ಸೂಚನೆ ನೀಡಿತ್ತು. ಅಂದರಂತೆ ಬಿಎಸ್​ ಯಡಿಯೂರಪ್ಪ ಅವರು ಸೋಮವಾರ ವಿಚಾರಣೆಗೆ ಹಾಜರಾಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:09 pm, Tue, 18 June 24