ಬಾಗಲಕೋಟೆ: ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 250 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಅಧಿಕಾರಿಗಳು ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣ ಬಳಿ ಜಪ್ತಿ ಮಾಡಿದ್ದಾರೆ. ಆಹಾರ ಇಲಾಖೆ ಹಾಗೂ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ.
ಪಡಿತರ ಅಕ್ಕಿ ಹೊತ್ತ ಲಾರಿ ನರಗುಂದದಿಂದ ಮಹಾರಾಷ್ಟ್ರದ ಕಡೆಗೆ ಹೊರಟಿತ್ತು ಎಂದು ಹೇಳಲಾಗಿದೆ. ಸದ್ಯ, ಲಾರಿ ಚಾಲಕ ಯಾಕೂಬ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮುಧೋಳದ ಫುಡ್ ಇನ್ಸ್ಪೆಕ್ಟರ್ ಸತ್ಯವ್ವ ಮಾದರ, ಕಂದಾಯ ಹಾಗೂ ಪೊಲೀಸ್ ಸಿಬ್ಬಂದಿಯಿಂದ ದಾಳಿ ನಡೆಸಲಾಯಿತು. ಮಹಾಲಿಂಗಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಸಂತೆಯಲ್ಲಿ ಕಂತೆ ಕಂತೆ ಖೋಟಾ ನೋಟ್ ಜೊತೆ ಪತ್ತೆಯಾದ ಐನಾತಿಗಳು ಅರೆಸ್ಟ್