ಈ ಪೊಲೀಸ್ ಕಾನ್ಸ್‌ಟೇಬಲ್ ವಿವಾಹ ಆಮಂತ್ರಣ ಪತ್ರಿಕೆ ಎಲ್ಲರಿಗೂ ಮಾದರಿ! ಹೇಗೆ ಗೊತ್ತಾ?

| Updated By: ಸಾಧು ಶ್ರೀನಾಥ್​

Updated on: Dec 15, 2020 | 5:12 PM

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾನ್ಸ್‌ಟೇಬಲ್ ಮಂಜುನಾಥ್ ತಮ್ಮ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಸಂಚಾರಿ ನಿಯಮಗಳ ಜಾಗೃತಿ ಮೂಡಿಸುವ ಹಾಗೂ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಆಮಂತ್ರಣ ಮುದ್ರಿಸಿ ಮದುವೆಗೆ ಆಹ್ವಾನಿಸುತ್ತಿದ್ದಾರೆ.

ಈ ಪೊಲೀಸ್ ಕಾನ್ಸ್‌ಟೇಬಲ್ ವಿವಾಹ ಆಮಂತ್ರಣ ಪತ್ರಿಕೆ ಎಲ್ಲರಿಗೂ ಮಾದರಿ! ಹೇಗೆ ಗೊತ್ತಾ?
ಕಾನ್ಸ್‌ಟೇಬಲ್ ಮಂಜುನಾಥ್ ಜೋಡಿ.
Follow us on

ಬೆಂಗಳೂರು: ಮದುವೆ ಅಂದ್ರೆ ಸಾಕು ಅದೊಂದು ಹಬ್ಬದ ವಾತಾವರಣ, ಲಕ್ಷ ಲಕ್ಷ ಖರ್ಚು ಮಾಡಿ ಆಡಂಬರವಾಗಿ ಮದುವೆ ಮಾಡೋದು ಈ ಕಾಲದ ಟ್ರೆಂಡ್ ಆಗಿಬಿಟ್ಟಿದೆ. ಅಸಲಿಗೆ ಮದುವೆಯ ಸಂಭ್ರಮ ಹೆಚ್ಚಿಸುವುದೇ ವಿವಾಹ ಆಮಂತ್ರಣ ಪತ್ರಿಕೆ. ಆದ್ರೆ ಇಲ್ಲೊಬ್ಬ ಪೊಲೀಸ್ ಕಾನ್ಸ್‌ಟೇಬಲ್​ನ ವಿವಾಹ ಆಮಂತ್ರಣ ಪತ್ರ ಎಲ್ಲರನ್ನ ತಿರುಗಿ ನೋಡುವಂತೆ ಮಾಡಿದೆ ಹಾಗಿದ್ರೆ ಮದುವೆ ಪತ್ರಿಕೆಯಲ್ಲಿ ಏನಿದೆ ಅಂತಹ ವಿಶೇಷ ಅಂತಿರಾ ನೀವೇ ನೋಡಿ.

ಕಾನ್ಸ್‌ಟೇಬಲ್ ಮಂಜುನಾಥ್ ಲಗ್ನ ಪತ್ರಿಕೆ

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾನ್ಸ್‌ಟೇಬಲ್ ಮಂಜುನಾಥ್ ತಮ್ಮ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಸಂಚಾರಿ ನಿಯಮಗಳ ಜಾಗೃತಿ ಮೂಡಿಸುವ ಹಾಗೂ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಆಮಂತ್ರಣ ಮುದ್ರಿಸಿ ಮದುವೆಗೆ ಆಹ್ವಾನಿಸುತ್ತಿದ್ದಾರೆ.

ಕಾನ್ಸ್‌ಟೇಬಲ್ ಮಂಜುನಾಥ್ ಮದುವೆ ಆಮಂತ್ರಣ ಪತ್ರಿಕೆ

ಡಿಸೆಂಬರ್ 16 ಹಾಗೂ 17 ರಂದು ದಾವಣಗೆರೆಯ ಖಾಸಗಿ ಕಲ್ಯಾಣ ಮಂಟಪದಲ್ಲಿ ವಿವಾಹ ಮಹೋತ್ಸವ ನಡೆಯಲಿದ್ದು, ಮಂಜುನಾಥ್‌ರ ಸಮಾಜಮುಖಿ ಕಾರ್ಯ ಹಾಗೂ ಸಂಚಾರಿ ಜಾಗೃತಿ ಮೂಡಿಸುವ ನೂತನ ಪ್ರಯೋಗವನ್ನು ಕಂಡು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಸಹದ್ಯೋಗಿಗಳು ಹಾಗೂ ಸಾರ್ವಜನಿಕರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಾನ್ಸ್‌ಟೇಬಲ್ ಮಂಜುನಾಥ್

ಪೊಲೀಸ್ ಇಲಾಖೆ ಸುರಕ್ಷತಾ ಕ್ರಮಗಳ ಅರಿವಿಗಾಗಿ ಸೆಲೆಬ್ರೆಟಿಗಳನ್ನ ಕರೆಸೋದು, ಭಿತ್ತಿ ಪತ್ರಗಳನ್ನ ಅಂಟಿಸೋದು, ಆಟೋ‌ಗಳಲ್ಲಿ ಸಾರ್ವಜನಿಕ‌ ಪ್ರಕಟಣೆ ಮಾಡೋದು, ಸಾರ್ವಜನಿಕ‌ ಸ್ಥಳಗಳಲ್ಲಿ ಬೀದಿ ನಾಟಕಗಳ ಮೂಲಕ ಅರಿವು ಮೂಡಿಸಲು ಹಣ ವ್ಯಯಿಸುತ್ತಿದೆ.

ಆದ್ರೆ ಕಾನ್ಸ್‌ಟೇಬಲ್ ಮಂಜುನಾಥ್ ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಸಂಚಾರ ದೀಪಗಳು, ರಸ್ತೆಯಲ್ಲಿನ ಸೂಚನ ಫಲಕಗಳ ಅರ್ಥ, ತುರ್ತು ಸೇವೆಗೆ ಕರೆ ಮಾಡಲು 112 ಬಳಸಬೇಕು ಹಾಗೂ ಸಂಚಾರಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಎನ್ನುವ ಮುಂಜಾಗೃತ ಕ್ರಮಗಳ ಬಗ್ಗೆ ಅರಿವು ಮೂಡಿಸುತ್ತಿರುವ ಪರಿ ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ.

ಆನಂದ್ ಸಿಂಗ್ ಪುತ್ರನ ಅದ್ಧೂರಿ ಲಗ್ನ ಪತ್ರಿಕೆಯಲ್ಲಿ ಏನೆಲ್ಲಾ ಇದೆ ಗೊತ್ತಾ!?