ಮನೆ ನಿರ್ಮಾಣಕ್ಕೆ ಗುಡ್ ನ್ಯೂಸ್: ಕಟ್ಟಡ ನಿರ್ಮಾಣದ ಉಲ್ಲಂಘನೆ ಶೇ. 15ರಷ್ಟಿದ್ರೂ OC ಸಿಗುತ್ತೆ!
ಸಿಲಿಕಾನ್ ಸಿಟಿಯಲ್ಲಿ ಮನೆಕಟ್ಟುವವರಿಗೆ BBMP ಗುಡ್ ನ್ಯೂಸ್ ಕೊಟ್ಟಿದೆ. ಹೌದು, ಇದೀಗ ಕಟ್ಟಡ ನಿರ್ಮಾಣದ ವೇಳೆ ಶೇ.15ರಷ್ಟು ಉಲ್ಲಂಘನೆ ಮಾಡಿದ್ದರೂ ದಂಡ ಕಟ್ಟಿಸಿಕೊಂಡು ಸ್ವಾಧೀನ ಪತ್ರ (OC) ನೀಡಲು ಬಿಬಿಎಂಪಿ ನಿರ್ಧರಿಸಿದೆ.
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮನೆಕಟ್ಟುವವರಿಗೆ BBMP ಗುಡ್ ನ್ಯೂಸ್ ಕೊಟ್ಟಿದೆ. ಹೌದು, ಇದೀಗ ಕಟ್ಟಡ ನಿರ್ಮಾಣದ ವೇಳೆ ಶೇ.15ರಷ್ಟು ಉಲ್ಲಂಘನೆ ಮಾಡಿದ್ದರೂ ದಂಡ ಕಟ್ಟಿಸಿಕೊಂಡು ಸ್ವಾಧೀನ ಪತ್ರ (OC) ನೀಡಲು ಬಿಬಿಎಂಪಿ ನಿರ್ಧರಿಸಿದೆ. ಈ ಹಿಂದೆ, ಕಟ್ಟಡ ನಿರ್ಮಾಣದಲ್ಲಿ ಉಲ್ಲಂಘನೆಯ ಪ್ರಮಾಣ ಶೇ. 5ರಷ್ಟು ಇದ್ದರೆ ಮಾತ್ರ ಆಕ್ಯುಪೆನ್ಸಿ ಸರ್ಟಿಫಿಕೇಟ್ ನೀಡಲಾಗುತ್ತಿತ್ತು. ಇದೀಗ, ಬಿಬಿಎಂಪಿ ಅದರ ಪ್ರಮಾಣವನ್ನು ಶೇ. 15ಕ್ಕೆ ಏರಿಕೆ ಮಾಡಿದೆ.
ಆಸ್ತಿ ತೆರಿಗೆ ಹೆಚ್ಚಳವಿಲ್ಲ ಜೊತೆಗೆ, ಸದ್ಯಕ್ಕೆ ಆಸ್ತಿ ತೆರಿಗೆ ಹೆಚ್ಚಳ ಮಾಡದಿರಲು ಪಾಲಿಕೆ ನಿರ್ಧರಿಸಿದೆ. ಬಿಬಿಎಂಪಿಯಲ್ಲಿ ಸದ್ಯ 12 ಲಕ್ಷದಷ್ಟು ತೆರಿಗೆ ಪಾವತಿಸುತ್ತಿರುವ ಆಸ್ತಿಗಳಿವೆ. ಇದರಲ್ಲಿ 3 ಲಕ್ಷದ 90 ಸಾವಿರ ತೆರಿಗೆದಾರರು ತಪ್ಪು ಮಾಹಿತಿ ನೀಡಿದ್ದಾರೆ. ಅಂಥವರಿಗೆ ನೋಟಿಸ್ ನೀಡಲು ಪಾಲಿಕೆ ನಿರ್ಧರಿಸಿದೆ.
ಇದಲ್ಲದೆ, ಸೆಲ್ಫ್ ಅಸೆಸ್ಮೆಂಟ್ ಸ್ಕೀಮ್ ಅಡಿಯಲ್ಲಿ ತಪ್ಪು ಮಾಹಿತಿ ನೀಡಿದವರಿಂದ ದಂಡ ಕಟ್ಟಿಸಿಕೊಳ್ಳಲು ಸಹ ಬಿಬಿಎಂಪಿ ನಿರ್ಧಾರ ಕೈಗೊಂಡಿದೆ. ಜೊತೆಗೆ, 1 ಲಕ್ಷ ಜನರು ತಮ್ಮ ಆಸ್ತಿಯ ವಿಸ್ತೀರ್ಣದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ. ಅಂಥವರಿಗೂ ನೋಟಿಸ್ ಕೊಟ್ಟು ದಂಡ ವಿಧಿಸಲು ಬಿಬಿಎಂಪಿ ನಿರ್ಧಾರ ಕೈಗೊಂಡಿದೆ.
ಬೆಂಗಳೂರು ಆಡಳಿತಕ್ಕೆ ಹೊಸ ರೂಪ: ಬಿಬಿಎಂಪಿ ಮಸೂದೆಗೆ ಅಧಿವೇಶನದಲ್ಲಿ ಒಪ್ಪಿಗೆ