ಲಾಕ್​ಡೌನ್ ರೂಲ್ಸ್ ಜಾರಿ.. ಅಂಗಡಿಗಳನ್ನು ಬಂದ್ ಮಾಡಿಸುತ್ತಿರುವ ಪೊಲೀಸರು

|

Updated on: Jul 15, 2020 | 1:25 PM

ಬೆಂಗಳೂರು: ರಾಜಧಾನಿಯಲ್ಲಿ ಲಾಕ್​ಡೌನ್ ಆದೇಶ ಮೀರಿ 12ಗಂಟೆಯ ನಂತರವೂ ತೆರೆದಿರೋ ಕೆಲವು ಅಂಗಡಿಗಳನ್ನು ಪೊಲೀಸರು ಮುಚ್ಚಿಸುತ್ತಿದ್ದಾರೆ. ಅರ್ಧ ತೆಗೆದ ಅಂಗಡಿಗಳ ಬಾಗಿಲು ತೆರೆಸಿ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಇನ್ನೂ ಮಾಸ್ಕ್ ಹಾಕದವರಿಗೂ ಫೈನ್ ಹಾಕ್ತಿದ್ದಾರೆ. ಮಲ್ಲೇಶ್ವರಂ, ಗಾಯತ್ರಿ ನಗರ ಸುತ್ತಾ ಮುತ್ತಾಲ ಅಂಗಡಿ ಮುಂಗಟ್ಟುಗಳನ್ನ ಮುಚ್ಚಿಸುತ್ತಿದ್ದಾರೆ. ಆನೇಕಲ್​ನಲ್ಲೂ ಅಂಗಡಿಗಳು ಬಂದ್ ಆನೇಕಲ್​ನಲ್ಲೂ ಪೊಲೀಸರು ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸುತ್ತಿದ್ದಾರೆ. 12 ಘಂಟೆಯಾದ್ರು ಸಹ ಇನ್ನು ರಸ್ತೆಗಳಲ್ಲಿ ಜನರು ಓಡಾಡುತ್ತಿದ್ದಾರೆ. ಹಾಗೂ ಅಂಗಡಿ ಮುಂಗಟ್ಟುಗಳನ್ನು ತೆರೆದಿರುವ ಹಿನ್ನೆಲೆಯಲ್ಲಿ ಆನೇಕಲ್ ಭಾಗದ ಚಂದಾಪುರ […]

ಲಾಕ್​ಡೌನ್ ರೂಲ್ಸ್ ಜಾರಿ.. ಅಂಗಡಿಗಳನ್ನು ಬಂದ್ ಮಾಡಿಸುತ್ತಿರುವ ಪೊಲೀಸರು
ಭಾಸ್ಕರ್ ರಾವ್
Follow us on

ಬೆಂಗಳೂರು: ರಾಜಧಾನಿಯಲ್ಲಿ ಲಾಕ್​ಡೌನ್ ಆದೇಶ ಮೀರಿ 12ಗಂಟೆಯ ನಂತರವೂ ತೆರೆದಿರೋ ಕೆಲವು ಅಂಗಡಿಗಳನ್ನು ಪೊಲೀಸರು ಮುಚ್ಚಿಸುತ್ತಿದ್ದಾರೆ. ಅರ್ಧ ತೆಗೆದ ಅಂಗಡಿಗಳ ಬಾಗಿಲು ತೆರೆಸಿ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಇನ್ನೂ ಮಾಸ್ಕ್ ಹಾಕದವರಿಗೂ ಫೈನ್ ಹಾಕ್ತಿದ್ದಾರೆ. ಮಲ್ಲೇಶ್ವರಂ, ಗಾಯತ್ರಿ ನಗರ ಸುತ್ತಾ ಮುತ್ತಾಲ ಅಂಗಡಿ ಮುಂಗಟ್ಟುಗಳನ್ನ ಮುಚ್ಚಿಸುತ್ತಿದ್ದಾರೆ.

ಆನೇಕಲ್​ನಲ್ಲೂ ಅಂಗಡಿಗಳು ಬಂದ್
ಆನೇಕಲ್​ನಲ್ಲೂ ಪೊಲೀಸರು ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸುತ್ತಿದ್ದಾರೆ. 12 ಘಂಟೆಯಾದ್ರು ಸಹ ಇನ್ನು ರಸ್ತೆಗಳಲ್ಲಿ ಜನರು ಓಡಾಡುತ್ತಿದ್ದಾರೆ. ಹಾಗೂ ಅಂಗಡಿ ಮುಂಗಟ್ಟುಗಳನ್ನು ತೆರೆದಿರುವ ಹಿನ್ನೆಲೆಯಲ್ಲಿ ಆನೇಕಲ್ ಭಾಗದ ಚಂದಾಪುರ ಪೊಲೀಸರು ಜನರಿಗೆ ಎಚ್ಚರಿಕೆ ನೀಡಿ ಸುಖಾಸುಮ್ಮನೆ ಓಡಾಡುತ್ತಿರುವವರಿಗೆ ಬೈದು ಕಳಿಸುತ್ತಿದ್ದಾರೆ.

ಫೀಲ್ಡಿಗಿಳಿದ ನಗರಾಭಿವೃದ್ಧಿ ಸಚಿವ
ಲಾಕ್​ಡೌನ್ ಕಠಿಣ ಕ್ರಮಕ್ಕೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಫೀಲ್ಡಿಗಿಳಿದಿದ್ದಾರೆ. 12 ಗಂಟೆ ನಂತರ ಓಡಾಡುತ್ತಿದ್ದವರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಜೀವದ ಮೇಲೆ ಆಸೆ ಇಲ್ವ. ಅನಗತ್ಯ ಯಾಕೆ ಬರ್ತೀರ ರೋಡ್​ಗೆ. ಡಿಲಿವರಿ ಬಾಯ್ಸ್ ಆದ್ರೆ ಕಂಪನಿ ಟೀ ಶರ್ಟ್ ಧರಿಸಿ ಎಂದು ತರಾಟೆಗೆ ತೆಗೆದುಕೊಂಡ್ರು. ಹಾಗೂ ಅನಗತ್ಯವಾಗಿ ಓಡಾಡೋರ ಮೇಲೆ‌ ನಿರ್ಧಾಕ್ಷಿಣ್ಯ ಕೇಸ್ ಹಾಕುವಂತೆ ಸೂಚನೆ ನೀಡಿದ್ದಾರೆ.

ಪೊಲೀಸ್​ ‘ಫೋರ್ಸ್’ ಕಡಿಮೆ ಇದೆ
ಇನ್ನು ಹಿಂದಿನ ಲಾಕ್​ಡೌನ್​ ಮತ್ತು ಈಗಿನ ಲಾಕ್​ಡೌನ್​ನಲ್ಲಿ ಬಹಳಷ್ಟು ವ್ಯತ್ಯಾಸ ಇದೆ. ಹಾಗೂ ಪೊಲೀಸ್​ ಕೆಲಸ ನಿರ್ವಹಿಸುವ ರೀತಿಯಲ್ಲಿ ವ್ಯತ್ಯಾಸ ಇದೆ. ಹಿಂದಿನ ಲಾಕ್​ಡೌನ್​ ವೇಳೆ ಹೆಚ್ಚಿನ ಪೊಲೀಸ್​ ಫೋರ್ಸ್​ ಬಳಕೆ ಮಾಡಲಾಗಿತ್ತು. ಆದ್ರೆ ಈಗ ಶೇ 25 ರಷ್ಟು ಪೊಲೀಸರು ಕ್ವಾರಂಟೈನ್​ನಲ್ಲಿ ಇದ್ದಾರೆ. 500 ಕ್ಕೂ ಹೆಚ್ಚು ಪೊಲೀಸರು ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. 50 ವರ್ಷ ಮೇಲ್ಪಟ್ಟವರಿಗೆ ಕಚೇರಿಯಿಂದ ಹೊರಗೆ ಹೋಗದಂತೆ ಸೂಚನೆ ನೀಡಲಾಗಿದೆ.

ಅಲ್ಲದೆ ಕೆಎಸ್​ಆರ್​ಪಿ ವಿಭಾಗದಲ್ಲೂ ಸೋಂಕಿನಿಂದ ಸಿಬ್ಬಂದಿ ಕೊರತೆ ಉಂಟಾಗಿದೆ. ಸೋಂಕಿತ ಪೊಲೀಸರಿದ್ದ 23 ಪೊಲೀಸ್​ ಠಾಣೆಗಳು ಸೀಲ್​ಡೌನ್​ ಆಗಿವೆ. ಲಾಕ್​ಡೌನ್​ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡಲು ಸಿಬ್ಬಂದಿ ಕೊರತೆ ನಿರ್ಮಾಣವಾಗಿದೆ. ಮತ್ತೊಂದು ಕಡೆಯಲ್ಲಿ ಸೋಂಕು ಹೆಚ್ಚಾದ ಕಾರಣ ಪೊಲೀಸರಲ್ಲಿ ಭಯ ಹೆಚ್ಚಾಗಿದೆ. ಈ ಕಾರಣಕ್ಕೆ ಪ್ರಮುಖ ರಸ್ತೆಗಳನ್ನ ಬ್ಯಾರಿಕೇಡ್​ ಹಾಕಿ ಬಂದ್​ ಮಾಡಲಾಗಿದೆ. ಹೆಚ್ಚು ಜನ ಇರುವ ಕಡೆಯಲ್ಲಿ ವಾಹನದಲ್ಲಿ ಕುಳಿತು ಪೊಲೀಸರು ವಾರ್ನಿಂಗ್ ನೀಡ್ತಿದ್ದಾರೆ.

ಟ್ರಾಫಿಕ್​ ಪೊಲೀಸರೂ ಭಯದಲ್ಲೇ ಕೆಲಸ ಮಾಡ್ತಾ ಇದ್ದಾರೆ. ಬೇಕಾಬಿಟ್ಟಿ ಓಡಾಟ ಮಾಡುತ್ತಿರುವ ವಾಹನಗಳನ್ನ ಜಪ್ತಿ ಮಾಡಲಾಗುತ್ತಿದೆ. ಈ ಕಾರಣಗಳಿಂದ ಹಿಂದಿನ ಲಾಕ್​ಡೌನ್​ ರೀತಿಯಲ್ಲಿ ಪೊಲೀಸರು ಕೆಲಸ ಮಾಡ್ತಾ ಇಲ್ಲ. ಹೀಗಾಗಿ ಜನರು ವಾರ್ಡನ್​ಗಳಾಗಿ ಪೊಲೀಸ್​ ಇಲಾಖೆಯ ಜೊತೆ ಕೆಲಸ ಮಾಡಲು ನಿನ್ನೆ ಪೊಲೀಸ್​ ಆಯುಕ್ತ ಬಾಸ್ಕರ್​ರಾವ್​ ಮನವಿ ಮಾಡಿದ್ರು.

Published On - 1:10 pm, Wed, 15 July 20