ಊರೊಳಗೆ ಬಂದ ಕ್ವಾರಂಟೈನ್ ಕೇಂದ್ರದಲ್ಲಿದ್ದ ಜನ! ಗ್ರಾಮಸ್ಥರಿಗೆ ಢವಢವ ಶುರು
ಯಾದಗಿರಿ: ಬೆಳಗ್ಗಿನ ತಿಂಡಿಗಾಗಿ ಮತ್ತು ಚಹಾ ಕುಡಿಯಲು ಕ್ವಾರಂಟೈನ್ ಕೇಂದ್ರದಲ್ಲಿರುವ ಕಾರ್ಮಿಕರು ಬಿಂದಾಸ್ ಆಗಿ ಹೊರಬಂದ ಘಟನೆ ಜಿಲ್ಲೆಯ ಶೆಟ್ಟಿಗೇರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಇತ್ತೀಚೆಗೆ, ಮಹಾರಾಷ್ಟ್ರದಿಂದ ಹಿಂದಿರುಗಿದ್ದ ವಲಸೆ ಕಾರ್ಮಿಕರನ್ನ ಶೆಟ್ಟಿಗೇರ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಅದರೆ, ಕ್ವಾರಂಟೈನ್ ಕೇಂದ್ರಕ್ಕೆ ಕಾವಲುಗಾರನನ್ನ ನಿಯೋಜಿಸಲಾಗಿಲ್ಲವಂತೆ. ಹೀಗಾಗಿ, ಕೇಂದ್ರದಲ್ಲಿರುವ ಕಾರ್ಮಿಕರು ಇವತ್ತು ಬೆಳ್ಳಂಬೆಳಗ್ಗೆ ಟೀ ಮತ್ತು ಉಪಾಹಾರಕ್ಕಾಗಿ ಗ್ರಾಮಕ್ಕೆ ಬಂದರಂತೆ. ಇದರಿಂದ ಸ್ಥಳೀಯರಲ್ಲಿ ಆತಂಕ ಶುರುವಾಗಿದೆ. ಕ್ವಾರಂಟೈನ್ನಿಂದ ಊರೊಳಗೆ ಬಂದಿದ್ದಕ್ಕೆ ಭಯಭೀತರಾಗಿರುವ ಗ್ರಾಮಸ್ಥರು […]
ಯಾದಗಿರಿ: ಬೆಳಗ್ಗಿನ ತಿಂಡಿಗಾಗಿ ಮತ್ತು ಚಹಾ ಕುಡಿಯಲು ಕ್ವಾರಂಟೈನ್ ಕೇಂದ್ರದಲ್ಲಿರುವ ಕಾರ್ಮಿಕರು ಬಿಂದಾಸ್ ಆಗಿ ಹೊರಬಂದ ಘಟನೆ ಜಿಲ್ಲೆಯ ಶೆಟ್ಟಿಗೇರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಇತ್ತೀಚೆಗೆ, ಮಹಾರಾಷ್ಟ್ರದಿಂದ ಹಿಂದಿರುಗಿದ್ದ ವಲಸೆ ಕಾರ್ಮಿಕರನ್ನ ಶೆಟ್ಟಿಗೇರ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಅದರೆ, ಕ್ವಾರಂಟೈನ್ ಕೇಂದ್ರಕ್ಕೆ ಕಾವಲುಗಾರನನ್ನ ನಿಯೋಜಿಸಲಾಗಿಲ್ಲವಂತೆ. ಹೀಗಾಗಿ, ಕೇಂದ್ರದಲ್ಲಿರುವ ಕಾರ್ಮಿಕರು ಇವತ್ತು ಬೆಳ್ಳಂಬೆಳಗ್ಗೆ ಟೀ ಮತ್ತು ಉಪಾಹಾರಕ್ಕಾಗಿ ಗ್ರಾಮಕ್ಕೆ ಬಂದರಂತೆ.
ಇದರಿಂದ ಸ್ಥಳೀಯರಲ್ಲಿ ಆತಂಕ ಶುರುವಾಗಿದೆ. ಕ್ವಾರಂಟೈನ್ನಿಂದ ಊರೊಳಗೆ ಬಂದಿದ್ದಕ್ಕೆ ಭಯಭೀತರಾಗಿರುವ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಕೇಂದ್ರಕ್ಕೆ ಕಾವಲುಗಾರನನ್ನು ನಿಯೋಜಿಸಲು ಆಗ್ರಹಿಸಿದ್ದಾರೆ.