ಸಿಡಿ ಕೇಸ್: ವಿಚಾರಣೆಗೆ ಹಾಜರಾಗಲು ರಮೇಶ್ ಜಾರಕಿಹೊಳಿಗೆ ಪೊಲೀಸರಿಂದ ನೋಟಿಸ್ ಜಾರಿ

|

Updated on: Mar 28, 2021 | 8:01 PM

ಆಡುಗೋಡಿಯ ತಾಂತ್ರಿಕ ಘಟಕಕ್ಕೆ ಬಂದು ವಿಚಾರಣೆ ಎದುರಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ವಿರುದ್ಧ ಕಬ್ಬನ್​ಪಾರ್ಕ್​ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿತ್ತು.

ಸಿಡಿ ಕೇಸ್: ವಿಚಾರಣೆಗೆ ಹಾಜರಾಗಲು ರಮೇಶ್ ಜಾರಕಿಹೊಳಿಗೆ ಪೊಲೀಸರಿಂದ ನೋಟಿಸ್ ಜಾರಿ
ಶಾಸಕ ರಮೇಶ್ ಜಾರಕಿಹೊಳಿ
Follow us on

ಬೆಂಗಳೂರು: ವಿವಾದಾತ್ಮಕ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಬೆಳಿಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಬಿಜೆಪಿ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿಗೆ ಕಬ್ಬನ್​ಪಾರ್ಕ್ ಠಾಣೆ ಪೊಲೀಸರು ನೊಟೀಸ್ ಜಾರಿ ಮಾಡಿದ್ದಾರೆ. ಆಡುಗೋಡಿಯ ತಾಂತ್ರಿಕ ಘಟಕಕ್ಕೆ ಬಂದು ವಿಚಾರಣೆ ಎದುರಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ವಿರುದ್ಧ ಕಬ್ಬನ್​ಪಾರ್ಕ್​ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿತ್ತು. ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಚೆಗೆ ಯುವತಿಯ ಪೋಷಕರು ಪೊಲೀಸ್ ಠಾಣೆಗೆ ಭೇಟಿ ನೀಡಿ ಹೇಳಿಕೆ ನೀಡಿದ್ದರು.

ಇನ್ನಿಬ್ಬರಿಗೂ ನೊಟೀಸ್
ಸಿಡಿ ಪ್ರಕರಣದ ಸೂತ್ರಧಾರ ಎನ್ನಲಾಗಿರುವ ನರೇಶ್​ಗೌಡನ ಹೆಂಡತಿ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಮತ್ತೋರ್ವ ವ್ಯಕ್ತಿ ಚೇತನ್ ಎಂಬಾತನಿಗೂ ಎಸ್​ಐಟಿಯಿಂದ ನೋಟಿಸ್​ ಜಾರಿ ಮಾಡಲಾಗಿದೆ. ನಾಳೆ ಬೆಳಗ್ಗೆ 10ಕ್ಕೆ ಆಡುಗೋಡಿ ಟೆಕ್ನಿಕಲ್​ ವಿಂಗ್​​ಗೆ ಹಾಜರಾಗುವಂತೆ ನೊಟೀಸ್ ನೀಡಲಾಗಿದೆ.

ನಾಳೆ ಯುವತಿ ಹೇಳಿಕೆ ಸಾಧ್ಯತೆ
ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿ ಸುದ್ದಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಯುವತಿಯೂ ನಾಳೆ ನಗರಕ್ಕೆ ಬರುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. ಈ ಹಿಂದೆ ಯುವತಿ ಬಿಡುಗಡೆ ಮಾಡಿದ್ದ ಸಿಡಿಯಲ್ಲಿ ‘ನೇರವಾಗಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡುವೆ’ ಎಂದು ಯುವತಿ ಹೇಳಿದ್ದರು. ಯುವತಿ ಪರ ಪೊಲೀಸರಿಗೆ ದೂರು ಸಲ್ಲಿಸಿದ್ದ ಬೆಂಗಳೂರಿನ ವಕೀಲ ಜಗದೀಶ್ ಸಹಕಾರ ನಗರದ ತಮ್ಮ ಕಚೇರಿಯಲ್ಲಿ ಆಪ್ತ ವಕೀಲರ  ಸಭೆ ನಡೆಸಿದರು. ನಾಳೆ ಬೆಳಿಗ್ಗೆ 11.30ರ ಬಳಿಕ ಯುವತಿ ನಗರಕ್ಕೆ ಬರಬಹುದು ಎನ್ನಲಾಗುತ್ತಿದೆ. ನಾಳೆ ಬೆಳಿಗ್ಗೆ ಏನೆಲ್ಲಾ ಬೆಳವಣಿಗೆ ಆಗಲಿದೆ ಎಂಬುದನ್ನು ಗಮನಿಸಿದ ನಂತರ ಯುವತಿಯನ್ನು ಕರೆತರಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ: ಅಂದುಕೊಂಡಂತಾದ್ರೆ ನಾಳೆ ಯುವತಿ ನ್ಯಾಯಾಲಯದ ಮುಂದೆ ಹಾಜರಾಗುತ್ತಾಳೆ -ವಕೀಲ ಜಗದೀಶ್

ಇದನ್ನೂ ಓದಿ: ಜಾರಕಿಹೊಳಿ ಸಿಡಿ ಪ್ರಕರಣವನ್ನು ಕೋರ್ಟ್ ನಿಗಾದಲ್ಲಿ ವಿಚಾರಣೆ ನಡೆಸಬೇಕೆಂದು ಕೋರಿ ಹೈಕೋರ್ಟ್ ಗೆ ಮೊರೆ ಹೊಗುತ್ತೇವೆ; ವಕೀಲ ಜಗದೀಶ್

Published On - 7:42 pm, Sun, 28 March 21