ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದೆ. ಲಾಕ್ಡೌನ್ ಆದೇಶವಿದ್ದರೂ ಕೂಡಾ ಜನರೆಲ್ಲ ನಿಯಮ ಪಾಲಿಸದೇ ರಸ್ತೆಯಲ್ಲಿ ಅಡ್ಡಾಡುತ್ತಿದ್ದಾರೆ. ಈ ಕುರಿತಂತೆ ಅನಗತ್ಯವಾಗಿ ರಸ್ತೆಯಲ್ಲಿ ತಿರುಗಾಡುವವರಿಗೆ ಪೊಲೀಸರು ಪಾಠ ಕಲಿಸುತ್ತಿದ್ದಾರೆ. ಲಾಕ್ಡೌನ್ ಉಲ್ಲಂಘಿಸಿ ರಸ್ತೆಗಿಳಿದರೆ ತಮ್ಮಷ್ಟಕ್ಕೆ ತಾವೇ ಕಪಾಳಕ್ಕೆ ಹೊಡೆದುಕೊಳ್ಳುವ ಶಿಕ್ಷೆ ನೀಡಿ ಬುದ್ದಿ ಕಲಿಸುತ್ತಿದ್ದಾರೆ.
ನಗರದ ಜಗತ್ ವೃತ್ತದಲ್ಲಿ ಅನಗತ್ಯವಾಗಿ ಜನರು ಸಂಚಾರ ನಡೆಸುತ್ತಿದ್ದಾರೆ. ಅವರನ್ನು ತಡೆಯಲು ಪೊಲೀಸರು ಹರಸಾಹ ಪಡುವ ಸ್ಥಿತಿ ಎದುರಾಗಿದೆ. ಹೀಗಾಗಿ ಪೊಲೀಸರು ತಮ್ಮಷ್ಟಕ್ಕೆ ತಾನೆ ಕೆನ್ನೆಗೆ ಬಾರಿಸಿಕೊಳ್ಳುತ್ತಾ, ಕಟ್ಟುನಿಟ್ಟಿನ ಕ್ರಮ ಮುಗಿಯುವವರೆಗೂ ಹೊರಗೆ ಬರುವುದಿಲ್ಲ ಎಂದು ಹೇಳುತ್ತಾ ತಮ್ಮ ಕಪಾಳಕ್ಕೆ ತಾವೇ ಹೊಡೆದುಕೊಳ್ಳುವ ಶಿಕ್ಷೆ ನೀಡುವ ಮೂಲಕ ಬುದ್ದಿ ಕಲಿಸುತ್ತಿದ್ದಾರೆ. ರೌಡಿ ನಿಗ್ರಹ ದಳದ ಪಿಎಸ್‌ಐ ವಾಹೀದ್ ಕೊತ್ವಾಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ನಿಯಮ ಪಾಲಿಸದೇ ರಸ್ತೆಯಲ್ಲಿ ಅಡ್ಡಾಡುತ್ತಿದ್ದ ಯುವಕರು 5 ನಿಮಿಷಗಳ ಕಾಲ ಶಿಕ್ಷೆ ಅನುಭವಿಸಿದ್ದಾರೆ. ಇನ್ನು ಮುಂದೆ ಕಟ್ಟುನಿಟ್ಟಿನ ಕ್ರಮವನ್ನು ಪಾಲಿಸುವಂತೆ ಪಿಎಸ್‌ಐ ವಾಹೀದ್ ಕೊತ್ವಾಲ್ ಎಚ್ಚರಿಕೆ ನೀಡಿದ್ದಾರೆ.
ಪೊಲೀಸ್ ಭದ್ರತೆಯಲ್ಲಿ ಕಲಬುರಗಿಗೆ ಆಕ್ಸಿಜನ್ ಟ್ಯಾಂಕರ್
ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಆಕ್ಸಿಜನ್ಗೆ ಬೇಡಿಕೆ ಹೆಚ್ಚಳ ಹಿನ್ನೆಲೆ ಬೀದರ್ ಜಿಲ್ಲೆಗೆ ಬಳಕೆಯಾಗಬೇಕಿದ್ದ ಆಕ್ಸಿಜನ್ ಕಲಬುರಗಿಗೆ ರವಾನೆ ಮಾಡಲಾಗಿದೆ. ಬೀದರ್ ಜಿಲ್ಲೆಯಿಂದ ಪೊಲೀಸ್ ಎಸ್ಕಾರ್ಟ್ನಲ್ಲಿ ಆಕ್ಸಿಜನ್ ಟ್ಯಾಂಕರ್ ಕಲಬುರಗಿಗೆ ಬಂದಿಳಿದಿದೆ.
ಕಲಬುರಗಿಯಲ್ಲಿ ರೆಮ್‌ಡೆಸಿವಿರ್ ಖಾಲಿ, ಇಂಜೆಕ್ಷನ್ ತರಲು ಸ್ವತ: ಬೆಂಗಳೂರಿಗೆ ಧಾವಿಸಿದ ಸಂಸದ ಉಮೇಶ್ ಜಾಧವ್
ಜಿಲ್ಲೆಯಲ್ಲಿ ರೆಮ್‌ಡೆಸಿವಿರ್ ಖಾಲಿಯಾದ ಹಿನ್ನೆಲೆಯಲ್ಲಿ ಸಂಸದ ಡಾ. ಉಮೇಶ್ ಜಾಧವ್ ಮತ್ತೆ ಬೆಂಗಳೂರಿನಿಂದ ಇಂಜೆಕ್ಷನ್ ತರಿಸಿದ್ದಾರೆ. ಸ್ವತಃ ತಾವೇ ರಾತ್ರಿ ಬೆಂಗಳೂರಿನ ಡ್ರಗ್ ಕಂಟ್ರೋಲ್ ಕಚೇರಿಗೆ ತೆರಳಿ 480 ವಯಲ್ ಇಂಜೆಕ್ಷನ್ ತಂದಿದ್ದಾರೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ರೆಮ್‌ಡೆಸಿವಿರ್ ಇಂಜೆಕ್ಷನ್ ಖಾಲಿಯಾಗಿತ್ತು. ಈ ಹಿನ್ನೆಲೆಯಲ್ಲಿ ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ ಮತ್ತೆ ಬೆಂಗಳೂರಿನಿಂದ 480 ಬಾಟಲ್ ಇಂಜೆಕ್ಷನ್ ತಂದಿದ್ದಾರೆ. ಕಳೆದ ರಾತ್ರಿ ಬೆಂಗಳೂರಿನ ಡ್ರಗ್ ಕಂಟ್ರೋಲ್ ಕಚೇರಿಗೆ ಹೋಗಿ ರೆಮ್ಡಿಸಿವರ್ ಇಂಜೆಕ್ಷನ್ ಪಡೆದು ವಿಮಾನದ ಮೂಲಕ ಸ್ವತಃ ತಾವೇ ತಂದು ಇಂಜೆಕ್ಷನ್ ಬಾಟಲಿಗಳನ್ನು ಕಲಬುರಗಿ ಡ್ರಗ್ ಕಂಟ್ರೋಲ್ ಅಧಿಕಾರಿಗಳಿಗೆ ನೀಡಿದ್ದಾರೆ. ಇವರ ಈ ಸ್ಪಂದನೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕಲಬುರಗಿಯಲ್ಲಿ ರೆಮ್‌ಡೆಸಿವಿರ್ ಖಾಲಿ, ಇಂಜೆಕ್ಷನ್ ತರಲು ಸ್ವತ: ಬೆಂಗಳೂರಿಗೆ ಧಾವಿಸಿದ ಸಂಸದ ಉಮೇಶ್ ಜಾಧವ್
Published On - 6:37 pm, Fri, 30 April 21