ಅಕ್ರಮ ಕಲ್ಲು ಕ್ವಾರಿ ಮೇಲೆ ಅಧಿಕಾರಿಗಳ ದಾಳಿ: 234 ಜಿಲೆಟಿನ್ ಕಡ್ಡಿ, ಸ್ಫೋಟಕ ವಸ್ತು ವಶಕ್ಕೆ

ಅಕ್ರಮ ಕಲ್ಲು ಕ್ವಾರಿ ಮೇಲೆ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ಜಿಲ್ಲೆಯ ಕಲಘಟಗಿ ತಾಲೂಕಿನ ಮುತ್ತಗಿ ಗ್ರಾಮದಲ್ಲಿ ನಡೆದಿದೆ. ಮುತ್ತಗಿಯ ಶಿವಚಂದ್ರನ್ ಸ್ಟೋನ್ ಕ್ರಷರ್ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಅಕ್ರಮ ಕಲ್ಲು ಕ್ವಾರಿ ಮೇಲೆ ಅಧಿಕಾರಿಗಳ ದಾಳಿ: 234 ಜಿಲೆಟಿನ್ ಕಡ್ಡಿ, ಸ್ಫೋಟಕ ವಸ್ತು ವಶಕ್ಕೆ
234 ಜಿಲೆಟಿನ್ ಕಡ್ಡಿ, ಸ್ಫೋಟಕ ವಸ್ತು ವಶಕ್ಕೆ

Updated on: Jan 22, 2021 | 11:41 PM

ಧಾರವಾಡ: ಅಕ್ರಮ ಕಲ್ಲು ಕ್ವಾರಿ ಮೇಲೆ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ಜಿಲ್ಲೆಯ ಕಲಘಟಗಿ ತಾಲೂಕಿನ ಮುತ್ತಗಿ ಗ್ರಾಮದಲ್ಲಿ ನಡೆದಿದೆ. ಮುತ್ತಗಿಯ ಶಿವಚಂದ್ರನ್ ಸ್ಟೋನ್ ಕ್ರಷರ್ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ DySP ಅನಿಲ್ ಕುಮಾರ್​ ಮತ್ತು ಇಂಟರ್ನಲ್ ಸೆಕ್ಯೂರಿಟಿ ಡಿವಿಜನ್ ಬೆಳಗಾವಿ ವಿಭಾಗದ PI ಜಯಶ್ರೀ ನೇತೃತ್ವದಲ್ಲಿ ದಾಳಿ ನಡೆದಿದೆ. ದಾಳಿಯಲ್ಲಿ 234 ಜಿಲೆಟಿನ್ ಕಡ್ಡಿ, ಮಗ್ ಬಾಕ್ಸ್, ಸ್ಫೋಟಕ ವಸ್ತು ವಶಕ್ಕೆ ಪಡೆಯಲಾಗಿದೆ.

ಜೊತೆಗೆ, ಕ್ವಾರಿ ಮಾಲೀಕ ಶಿವಕುಮಾರ್ ಪಾಟೀಲ್ ವಿರುದ್ಧ ದೂರು ದಾಖಲಿಸಲಾಗಿದೆ. ಕಲಘಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Shivamogga Blast ಶಿವಮೊಗ್ಗದ ಹುಣಸೋಡಿಯಲ್ಲಿನ ವಿಸ್ಫೋಟಕ್ಕೆ ಇದು ಕಾರಣವಾಗಿರಬಹುದಾ?

 

Shivamogga Blast: ಜಮೀನು ಮೂಲ ಮಾಲೀಕ ಅವಿನಾಶ್​ ಕುಲಕರ್ಣಿ ಬಂಧನ

Published On - 11:37 pm, Fri, 22 January 21