ಇಂದು ಸಾಂಸ್ಕೃತಿಕ ನಗರಿಗೆ ಬಿ. ಎಸ್​ ಯಡಿಯೂರಪ್ಪ ಭೇಟಿ: ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ

ಬೆಳಗ್ಗೆ 10 ಗಂಟೆಗೆ ಎಚ್‌ಎಎಲ್ ವಿಮಾನ ನಿಲ್ದಾನದಿಂದ ಹೆಲಿಕ್ಯಾಪ್ಟರ್ ಮೂಲಕ ಮೈಸೂರಿಗೆ ಪ್ರಯಾಣ ಬೆಳಸಲ್ಲಿದ್ದಾರೆ.

  • TV9 Web Team
  • Published On - 7:22 AM, 23 Jan 2021
ಇಂದು ಸಾಂಸ್ಕೃತಿಕ ನಗರಿಗೆ ಬಿ. ಎಸ್​ ಯಡಿಯೂರಪ್ಪ ಭೇಟಿ: ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ

ಮೈಸೂರು: ಇಂದು ಸಾಂಸ್ಕೃತಿಕ ನಗರಿಗೆ ಸಿಎಂ ಬಿ.ಎಸ್​ ಯಡಿಯೂರಪ್ಪ ಭೇಟಿ ನೀಡಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿರದ್ದಾರೆ.

ಬೆಳಗ್ಗೆ 10 ಗಂಟೆಗೆ ಎಚ್‌ಎಎಲ್ ವಿಮಾನ ನಿಲ್ದಾನದಿಂದ ಹೆಲಿಕ್ಯಾಪ್ಟರ್ ಮೂಲಕ ಮೈಸೂರಿಗೆ ಪ್ರಯಾಣ ಬೆಳಸಲ್ಲಿದ್ದಾರೆ. ಮೈಸೂರಿನ ಜೆಪಿ ನಗರದ ಅಕ್ಕಮಹಾದೇವಿ ಮಂದಿರದಲ್ಲಿ ಕಾರ್ಯಕ್ರಮದಲ್ಲಿ ಬಾಗಿಯಾಗಲಿದ್ದು, ಅಕ್ಕಮಹಾದೇವಿಯವರ ನೂತನ ಪ್ರತಿಮೆ ಅನಾವರಣ ಮಾಡಲಿದ್ದಾರೆ. ನಂತರ ಮಹರ್ಷಿ ಶಾಲಾ ಮಕ್ಕಳಿಂದ ಮನವಿ ಸ್ವೀಕಾರ ಮಾಡಲ್ಲಿದ್ದಾರೆ. 12.30ಕ್ಕೆ ವಿಜಯನಗರದಲ್ಲಿ ಬಸವ ಭವನ ಉದ್ಘಾಟನೆ ಮಾಡಿ ಹೆಲಿಕ್ಯಾಪ್ಟರ್ ಮೂಲಕ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಲಿದ್ದಾರೆ.