AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೂಲಿ ಕೆಲಸಕ್ಕೆ ತೆರಳ್ತಿದ್ದ ಮಕ್ಕಳನ್ನ ರಕ್ಷಿಸಿ ಮರಳಿ ಶಾಲೆಗೆ ಕಳುಹಿಸಿದ ಪೊಲೀಸರು

ರಾಯಚೂರು ಜಿಲ್ಲೆ ಸಿರವಾರದ ಸಮೀಪ ಕೂಲಿ ಕೆಲಸಕ್ಕೆ ತೆರಳ್ತಿದ್ದ ಮಕ್ಕಳನ್ನ ಪೊಲೀಸರು ರಕ್ಷಿಸಿದ್ದಾರೆ. ಶಾಲಾ ಮಕ್ಕಳನ್ನ ಅಕ್ರಮವಾಗಿ ಕೂಲಿ ಕೆಲಸಕ್ಕೆ ಕರೆದೊಯ್ಯುಲಾಗ್ತಿತ್ತು. ಪೊಲೀಸರು ದಾಳಿ ನಡೆಸಿ ಸರಕು ವಾಹನವನ್ನ ಜಪ್ತಿ ಮಾಡಿದ್ದಾರೆ. 11 ಅಪ್ರಾಪ್ತ ಮಕ್ಕಳನ್ನ ರಕ್ಷಿಸಿ ಮರಳಿ ಶಾಲೆಗೆ ಕಳುಹಿಸಿದ್ದಾರೆ. ಯೋಧ ದುರ್ಮರಣ: ಚಿಕ್ಕಮಗಳೂರು ತಾಲೂಕಿನ ಉದ್ದೇಬೋರನಹಳ್ಳಿ ಬಳಿ ಹೊಂಡಕ್ಕೆ ಬಿದ್ದು ಯೋಧನೊಬ್ಬ ಮೃತಪಟ್ಟಿದ್ದಾನೆ. ಮೃತ ಯೋಧ ಚಿದಾನಂದ್ ಬೈಕ್​ನಲ್ಲಿ ತೆರಳ್ತಿದ್ದಾಗ ಆಳದ ಗುಂಡಿಗೆ ಬಿದ್ದು ಅಸುನೀಗಿದ್ದಾನೆ. ಕಾಶ್ಮೀರದ ಶ್ರೀನಗರದಲ್ಲಿ ಕಾರ್ಯನಿರ್ವಹಿಸ್ತಿದ್ದ ಚಿದಾನಂದ್, 2 ದಿನಗಳ […]

ಕೂಲಿ ಕೆಲಸಕ್ಕೆ ತೆರಳ್ತಿದ್ದ ಮಕ್ಕಳನ್ನ ರಕ್ಷಿಸಿ ಮರಳಿ ಶಾಲೆಗೆ ಕಳುಹಿಸಿದ ಪೊಲೀಸರು
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Dec 19, 2019 | 5:46 PM

Share

ರಾಯಚೂರು ಜಿಲ್ಲೆ ಸಿರವಾರದ ಸಮೀಪ ಕೂಲಿ ಕೆಲಸಕ್ಕೆ ತೆರಳ್ತಿದ್ದ ಮಕ್ಕಳನ್ನ ಪೊಲೀಸರು ರಕ್ಷಿಸಿದ್ದಾರೆ. ಶಾಲಾ ಮಕ್ಕಳನ್ನ ಅಕ್ರಮವಾಗಿ ಕೂಲಿ ಕೆಲಸಕ್ಕೆ ಕರೆದೊಯ್ಯುಲಾಗ್ತಿತ್ತು. ಪೊಲೀಸರು ದಾಳಿ ನಡೆಸಿ ಸರಕು ವಾಹನವನ್ನ ಜಪ್ತಿ ಮಾಡಿದ್ದಾರೆ. 11 ಅಪ್ರಾಪ್ತ ಮಕ್ಕಳನ್ನ ರಕ್ಷಿಸಿ ಮರಳಿ ಶಾಲೆಗೆ ಕಳುಹಿಸಿದ್ದಾರೆ.

ಯೋಧ ದುರ್ಮರಣ: ಚಿಕ್ಕಮಗಳೂರು ತಾಲೂಕಿನ ಉದ್ದೇಬೋರನಹಳ್ಳಿ ಬಳಿ ಹೊಂಡಕ್ಕೆ ಬಿದ್ದು ಯೋಧನೊಬ್ಬ ಮೃತಪಟ್ಟಿದ್ದಾನೆ. ಮೃತ ಯೋಧ ಚಿದಾನಂದ್ ಬೈಕ್​ನಲ್ಲಿ ತೆರಳ್ತಿದ್ದಾಗ ಆಳದ ಗುಂಡಿಗೆ ಬಿದ್ದು ಅಸುನೀಗಿದ್ದಾನೆ. ಕಾಶ್ಮೀರದ ಶ್ರೀನಗರದಲ್ಲಿ ಕಾರ್ಯನಿರ್ವಹಿಸ್ತಿದ್ದ ಚಿದಾನಂದ್, 2 ದಿನಗಳ ಹಿಂದೆ ಚಿಕ್ಕಪ್ಪನ ತಿಥಿ ಕಾರ್ಯಕ್ಕೆ ಬಂದಿದ್ದ.

ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ: ಕೋಲಾರ ತಾಲೂಕಿನ ಕಾಳಹಸ್ತಿಪುರದಲ್ಲಿ ಕೆರೆಗೆ ಹಾರಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡ್ಕೊಂಡಿದ್ದಾನೆ. ಮೃತ ವ್ಯಕ್ತಿ ಪ್ರಭಾಕರ್ ಎಂಬಾತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ವಿಫಲ ಯತ್ನ ನಡೆಸಿದ್ದ. ಹೀಗಾಗಿ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರೋ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಕೋಲಾರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಾರು ಕದ್ದ ಖದೀಮರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಪಟ್ಟಣದಲ್ಲಿ ದೇಗುಲದ ಬಳಿ ನಿಲ್ಲಿಸಿದ್ದ ಕಾರೊಂದನ್ನ ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ. ದೀಪಕ್ ಅನ್ನೋರ ಕಾರನ್ನ ಖದೀಮರು ಚಲಾಯಿಸಿಕೊಂಡು ತೆರಳ್ತಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಹುಂಡಿ ದೋಚಿದ ಕಳ್ಳರು: ಬೀದರ್​ನ ಶಾಹಾಗಂಜ್​ನಲ್ಲಿರೋ ಕ್ರಾಂತಿ ಗಣೇಶ ದೇಗುಲಕ್ಕೆ ದುಷ್ಕರ್ಮಿಗಳು ಕನ್ನ ಹಾಕಿದ್ದಾರೆ. ದೇವಲಾಯದ ಬಾಗಿಲು ಮುರಿದು ಒಳ ನುಗ್ಗಿರೋ ಕಳ್ಳರು, ಹುಂಡಿ ದೋಚಿದ್ದಾರೆ. ಕಳೆದ 1ತಿಂಗಳ ಅವಧಿಯಲ್ಲಿ ಕಳ್ಳರು ಎರಡನೇ ಬಾರಿಗೆ ಕನ್ನ ಹಾಕಿದ್ದು, ಕಳ್ಳರನ್ನ ಹೆಡೆಮುರಿ ಕಟ್ಟಬೇಕು ಅಂತಾ ಭಕ್ತರು ಪೊಲೀಸರನ್ನ ಆಗ್ರಹಿಸಿದ್ದಾರೆ.

ದಾಸೋಹ ಹಣಕ್ಕೆ ಕನ್ನ: ರಾಮನಗರ ತಾಲೂಕಿನ ಅವ್ವೇರಹಳ್ಳಿಯಲ್ಲಿ ಖದೀಮರು ದಾಸೋಹ ಮಂದಿರದಲ್ಲಿದ್ದ ಹುಂಡಿಗೆ ಕನ್ನ ಹಾಕಿದ್ದಾರೆ. ಗ್ರಾಮದ ಶ್ರೀರೇವಣ ಸಿದ್ದೇಶ್ವರ ಬೆಟ್ಟದಲ್ಲಿನ ದಾಸೋಹ ಭವನದಲ್ಲಿ ಹುಂಡಿ ಇರಿಸಲಾಗಿತ್ತು. ಮೂರು ತಿಂಗಳಿಂದ ಹುಂಡಿಯಲ್ಲಿದ್ದ ಹಣ ತೆಗೆದಿರಲಿಲ್ಲ. ಕಳ್ಳರು ಕೈಚಳಕ ತೋರಿ ಹುಂಡಿ ಹಣ ಕಯ್ದೊಯ್ದಿದ್ದಾರೆ.

ಅಧಿಕಾರಿಗಳನ್ನ ಅಟ್ಟಾಡಿಸಿದ ಹಂದಿ: ಉತ್ತರಕನ್ನಡ ಜಿಲ್ಲೆ ಭಟ್ಕಳದಲ್ಲಿ ಹಂದಿಯೊಂದು ಅಧಿಕಾರಿಗಳನ್ನ ಅಟ್ಟಾಡಿಸಿದೆ. ಘನತ್ಯಾಜ್ಯ ಘಟಕ ಸ್ಥಳ ಪರಿಶೀಲನೆಗೆ ಪುರಸಭೆ ಅಧಿಕಾರಿಗಳು ತೆರಳಿದ್ರು. ಈ ವೇಳೆ ಪೊಲೀಸರು, ಇತರೆ ಸಿಬ್ಬಂದಿ ಉಪಸ್ಥಿತರಿದ್ದು, ಕಸದ ರಾಶಿ ಹತ್ತಿರ ತೆರಳ್ತಿದ್ದಂತೆ ಹಂದಿ ದಾಳಿ ನಡೆಸಿದೆ. ಬಳಿಕ ಜನರನ್ನೂ ಅಟ್ಟಾಡಿಸಿದ್ದು, ದಿಕ್ಕಾಪಾಲಾಗಿ ಓಡಿದ್ದಾರೆ.

ರಾಷ್ಟ್ರೀಯ ಕಿಸಾನ್ ಸಂಘ ಧರಣಿ: ರಾಷ್ಟ್ರೀಯ ಕಿಸಾನ್ ಸಂಘ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ವಶಕ್ಕೆ ಪಡೆದ ಭೂಸ್ವಾಧೀನದಲ್ಲಿ ರೈತರಿಗೆ ಅನ್ಯಾಯವಾಗಿದೆ. ಭೂಮಿ, ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಿಲ್ಲ ಅಂತಾ ಸಂಘದ ಸದಸ್ಯರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ನಿಷೇಧಾಜ್ಞೆ ನಡುವೆಯೂ ಧರಣಿ ನಡೆಸಿದ್ದಾರೆ.

ಗಬ್ಬೂರು ಠಾಣೆ ಮೆಚ್ಚಿದ ಗೃಹ ಇಲಾಖೆ: ರಾಯಚೂರು ಜಿಲ್ಲೆಯ ಗಬ್ಬೂರ ಪೊಲೀಸ್ ಠಾಣೆಯನ್ನ ಕೇಂದ್ರ ಗೃಹ ಇಲಾಖೆ ಅತ್ಯುತ್ತಮ ಠಾಣೆ ಅಂತಾ ಘೋಷಿಸಿದೆ. ಗೃಹ ಇಲಾಖೆಯ ಸಮೀಕ್ಷೆಯಲ್ಲಿ ದೇಶದ 15 ಸಾವಿರದ 175 ಠಾಣೆಗಳ ಪೈಕಿ ಗಬ್ಬೂರು ಠಾಣೆ ಸ್ಥಾನ ಪಡೆದಿದೆ. ದಕ್ಷತೆ, ಸ್ವಚ್ಛತೆ, ತನಿಖಾ ಗುಣಮಟ್ಟ ಸೇರಿ ಹಲವು ಮಾನದಂಡಗಳಲ್ಲಿ ಠಾಣೆ ಉತ್ತಮ ಹೆಸರು ಪಡೆದಿದೆ.

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್